ಪದವಿ, ಕೌಶಲ್ಯಗಳ ಮಹತ್ವ ತಿಳಿದುಕೊಳ್ಳಿ: ಡಾ.ವೆಂಕಟೇಶ್ ಬಾಬು

| Published : Aug 28 2024, 12:54 AM IST

ಸಾರಾಂಶ

ಸಮಗ್ರ ಶಿಕ್ಷಣವು ಮಾತ್ರವೇ ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ಯಶಸ್ಸ ತರುವುದನ್ನು ಒತ್ತಿ ಹೇಳಿದರು. ಇಂದಿನ ಆರ್ಥಿಕ ಪರಿಸರದಲ್ಲಿ ಕೌಶಲ್ಯಗಳಿದ್ದುಕೊಂಡು ಉತ್ತಮ ಉದ್ಯೋಗ ಅವಕಾಶಗಳನ್ನು ಸಿದ್ಧಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎಸ್.ವೆಂಕಟೇಶ್ ಬಾಬು ದಾವಣಗೆರೆಯಲ್ಲಿ ಹೇಳಿದ್ದಾರೆ.

ದಾವಣಗೆರೆ: ಸಮಗ್ರ ಶಿಕ್ಷಣವು ಮಾತ್ರವೇ ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ಯಶಸ್ಸ ತರುವುದನ್ನು ಒತ್ತಿ ಹೇಳಿದರು. ಇಂದಿನ ಆರ್ಥಿಕ ಪರಿಸರದಲ್ಲಿ ಕೌಶಲ್ಯಗಳಿದ್ದುಕೊಂಡು ಉತ್ತಮ ಉದ್ಯೋಗ ಅವಕಾಶಗಳನ್ನು ಸಿದ್ಧಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎಸ್.ವೆಂಕಟೇಶ್ ಬಾಬು ಹೇಳಿದರು.

ನಗರದ ವಿನ್ನರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದುವುದರ ಕಡೆಗೆ ಹೆಚ್ಚು ಗಮನಹರಿಸಿದರೆ ಸಮಾಜದಲ್ಲಿ ಉತ್ತಮವಾದ ಗೌರವ ಪಡೆಯಲು ಸಾಧ್ಯ ಎಂದರು.

ಕಬ್ಬೂರ್ ಎಜುಕೇಶನ್ ಸೊಸೈಟಿ ನಿರ್ದೇಶಕ ಶಿವರಾಜ್ ಕಬ್ಬೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆಯುವ ಮೂಲಕ ತಮ್ಮ ಭವಿಷ್ಯ ಸುಧಾರಿಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಂಜಣ್ಣ ಶ್ರೀಗುರು, ನಾಗರಾಜ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -27ಕೆಡಿವಿಜಿ37ಃ:

ದಾವಣಗೆರೆಯ ವಿನ್ನರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಡಾ.ವೆಂಕಟೇಶ ಬಾಬು ಅವರನ್ನು ಸನ್ಮಾನಿಸಲಾಯಿತು.