ಬದುಕಿನ ಆಯಾಮಗಳ ಮಹತ್ವ ತಿಳಿಯಿರಿ

| Published : Jun 09 2024, 01:35 AM IST

ಸಾರಾಂಶ

ದಾಬಸ್‌ಪೇಟೆ: ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿಯೇ ಬದುಕಿನ ಎಲ್ಲಾ ಆಯಾಮಗಳ ಮಹತ್ವ ಅರಿತುಕೊಳ್ಳುವುದು ತುಂಬಾ ಮುಖ್ಯ ಎಂದು ಯುವ ಸಾಹಿತಿ ನಾಗಲೇಖ ಹೇಳಿದರು.

ದಾಬಸ್‌ಪೇಟೆ: ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿಯೇ ಬದುಕಿನ ಎಲ್ಲಾ ಆಯಾಮಗಳ ಮಹತ್ವ ಅರಿತುಕೊಳ್ಳುವುದು ತುಂಬಾ ಮುಖ್ಯ ಎಂದು ಯುವ ಸಾಹಿತಿ ನಾಗಲೇಖ ಹೇಳಿದರು.

ತ್ಯಾಮಗೊಂಡ್ಲು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ.ಆರ್.ರತ್ನಮ್ಮ ಬರೆದಿರುವ "ಅರ್ಥಶಾಸ್ತ್ರಕ್ಕೆ ನೊಬೆಲ್ ಹಿರಿಮೆ " ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನಮ್ಮದು ನಾಡು, ನುಡಿ, ಸಂಪತ್ತಿನ ತವರೂರು. ವಿದ್ಯಾರ್ಥಿಗಳು ಅದರ ಆಳಗಲ ಅರಿಯಬೇಕು. ಇಂದಿನ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ಅನಾರೋಗ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ. ಅದರ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಡಾ.ರತ್ನಮ್ಮ ಅವರು ಸಾವಿರಾರು ವಿದ್ಯಾರ್ಥಿಗಳ ಶಕ್ತಿಯಾಗಿದ್ದಾರೆ. ಅವರ ಬರವಣಿಗೆ ಸಾಹಿತ್ಯ ಲೋಕಕ್ಕೆ ಮತ್ತಷ್ಟು ಲಭಿಸಲಿ ಎಂದು ಆಶಿಸಿದರು.

ಪ್ರಾಂಶುಪಾಲ ತಿಮ್ಮಹನುಮಯ್ಯ ಮಾತನಾಡಿ, ಅರ್ಥಶಾಸ್ತ್ರ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮಹನೀಯರ ಬದುಕು- ಬರಹ ಪರಿಚಯಿಸುವ ಕೃತಿಯನ್ನು ನಮ್ಮ ಕಾಲೇಜಿನ ಉಪನ್ಯಾಸಕಿ ರತ್ನಮ್ಮ ಬರೆದಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದರು.

ಕೃತಿಕಾರರು ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ಡಾ.ಆರ್.ರತ್ನಮ್ಮ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಾರುತಿ, ಉಪನ್ಯಾಸರಾದ ತಾರಾಮಣಿ, ದಿವಾಕರ್, ಸಾಯಿಪ್ರಸಾದ್, ರಮೇಶ್, ಅರವಿಂದ್, ಆನಂದ್, ಯಲ್ಲಣ್ಣ, ಲಕ್ಷ್ಮೀನರಸಿಂಹಯ್ಯ, ಮಹದೇವಯ್ಯ, ಗ್ರಂಥಪಾಲಕಿ ನಿರ್ಮಲ, ಸಂತೋಷ್, ಹರ್ಷಿತಾ, ವಿದ್ಯಾರ್ಥಿಗಳು ಭಾಗವಹಿಸಿದ್ದರು.(ಫೋಟೋ ಕ್ಯಾಪ್ಷನ್‌)

ತ್ಯಾಮಗೊಂಡ್ಲು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ.ಆರ್.ರತ್ನಮ್ಮ ಬರೆದಿರುವ "ಅರ್ಥಶಾಸ್ತ್ರಕ್ಕೆ ನೊಬೆಲ್ ಹಿರಿಮೆ " ಕೃತಿಯನ್ನು ಯುವ ಸಾಹಿತಿ ನಾಗಲೇಖ ಬಿಡುಗಡೆ ಮಾಡಿದರು. ಪ್ರಾಂಶುಪಾಲ ತಿಮ್ಮಹನುಮಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಾರುತಿ, ಉಪನ್ಯಾಸರಾದ ತಾರಾಮಣಿ, ದಿವಾಕರ್, ಸಾಯಿಪ್ರಸಾದ್ ಇತರರಿದ್ದರು.