ಕುಡಿಯುವ ನೀರಿನ ಮಹತ್ವ ಅರಿತು ಸರಿಯಾಗಿ ಸದ್ಬಳಕೆ ಮಾಡಿ: ಧನಂಜಯ

| Published : Jul 24 2025, 01:45 AM IST

ಸಾರಾಂಶ

ಕೇಂದ್ರ ಸರ್ಕಾರ ಮಹತ್ವಕಾಂಕ್ಷೆ ಯೋಜನೆ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಗ್ರಾಮಸ್ಥರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾರ್ವಜನಿಕರು ಕುಡಿಯುವ ನೀರಿನ ಮಹತ್ವ ಅರಿತು ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಆ ಮೂಲಕ ಮುಂದಿನ ಪೀಳಿಗೆಗೂ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಗ್ರಾಪಂ ಅಧ್ಯಕ್ಷ ಧನಂಜಯ ಮನವಿ ಮಾಡಿದರು.

ಹಳೇಬೀಡು ಗ್ರಾಪಂ ಕಚೇರಿ ಆವರಣದಲ್ಲಿ ಹಳೇಬೀಡು ಮತ್ತು ನರಹಳ್ಳಿ ಗ್ರಾಮಗಳಿಗೆ 24/7 ನಿರಂತರ ಕುಡಿಯವ ನೀರು ಸರಬರಾಜು ಗ್ರಾಮ ಎಂದು ಘೋಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಮಹತ್ವಕಾಂಕ್ಷೆ ಯೋಜನೆ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಗ್ರಾಮಸ್ಥರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಾಂಡವಪುರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರೆ ಮಮತಾ ಮಾತನಾಡಿ, 24/7 ಕುಡಿಯುವ ನೀರು ಸರಬರಾಜು ಮಾಡುವುದರಿಂದ ನೀರಿನಿಂದ ಹರಡುವ ರೋಗಗಳು ಕಡಿಮೆಯಾಗುತ್ತವೆ. ನಿರಂತರ ನೀರು ಸರಬರಾಜು ಮಾಡಲಾಗುವುದರಿಂದ ಯಾವ ಸಮಯದದರೂ ನೀರು ಪಡೆಯಬಹುದು. ಇದರಿಂದ ಸಮಯವಕಾಶ ವ್ಯರ್ಥವಾಗುವುದು ತಪ್ಪುತ್ತದೆ ಎಂದರು.

ತಾಪಂ ಇಒ ವೀಣಾ ಮಾತನಾಡಿ, ಜಲ ಜೀವನ ಮಿಷನ್ ಯೋಜನೆಯಡಿ ಹೊಸದಾಗಿ ಪೈಪ್ ಲೈನ್ ಅಳವಡಿಸಲಾಗಿದೆ ಗ್ರಾಮದ ಎಸ್ಸಾ ಕುಟುಂಬಗಳಿಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಸಾರ್ವಜನಿಕರು ನೀರನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಸಲಹೆ ನೀಡಿದರು.

ಹಳೇಬೀಡು ಗ್ರಾಪಂನ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಪಿಡಿಒ ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಂಡ್ಯ ಕಚೇರಿಯ ಲೋಹಿತ್, ರಶ್ಮಿ, ದೊಡ್ಡಮಾಯಿಗೌಡ, ದೀಪಾ ಹಾಗೂ ಕಿರಿಯ ಎಂಜಿನಿಯರ್ ಪ್ರದೀಪ್ ಹಾಗೂ ಸಪೋರ್ಟ್ ಎಂಜಿನಿಯರ್ ಅಜಯ್ ಇತರರು ಇದ್ದರು.