ಸಾರಾಂಶ
ನರಗುಂದ: ಭಾರತದಲ್ಲಿ ವಿಜ್ಞಾನಿಗಳ ಕೊಡುಗೆಗಳನ್ನು ಗೌರವಿಸುವ ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಎತ್ತಿ ತೋರಿಸುವ ಒಂದು ಮಹತ್ವದ ಘಟನೆಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ವಿ. ಮಮಟಗೇರಿ ಹೇಳಿದರು.
ಅವರು ಪಟ್ಟಣದ ಜ್ಞಾನ ಮುದ್ರಾ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಷ್ಟ್ರೀಯ ವಿಜ್ಞಾನ ದಿನವು ಭಾರತದಲ್ಲಿ ವಿಜ್ಞಾನಿಗಳ ಕೊಡುಗೆಗಳನ್ನು ಗೌರವಿಸುವ ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಎತ್ತಿ ತೋರಿಸುವ ಒಂದು ಮಹತ್ವದ ಘಟನೆಯಾಗಿದೆ. ಈ ದಿನವು 1928ರಲ್ಲಿ ಪ್ರಸಿದ್ಧ ಭಾರತೀಯ ಭೌತಶಾಸ್ತ್ರಜ್ಞ ಡಾ. ಸಿ.ವಿ. ರಾಮನ್ ಆವಿಷ್ಕಾರವನ್ನು ಸ್ಮರಿಸುತ್ತದೆ. ಈ ಆವಿಷ್ಕಾರವು ಅವರಿಗೆ 1930ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿತು. ರಾಷ್ಟ್ರೀಯ ವಿಜ್ಞಾನ ದಿನವು ರಾಷ್ಟ್ರದ ಅಭಿವೃದ್ಧಿಯಲ್ಲಿ ವಿಜ್ಞಾನವು ವಹಿಸುವ ನಿರ್ಣಾಯಕ ಪಾತ್ರವನ್ನು ನೆನಪಿಸುತ್ತದೆ ಮತ್ತು ದೇಶಾದ್ಯಂತ ವೈಜ್ಞಾನಿಕ ಜ್ಞಾನ ಮತ್ತು ಜಾಗೃತಿಯನ್ನು ಉತ್ತೇಜಿಸುತ್ತದೆ ಎಂದರು.
ಪ್ರಾಚಾರ್ಯರಾದ ದೀಪಾ ಕುಲಕರ್ಣಿ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನದ ಧ್ಯೇಯವಾಕ್ಯಗಳ ಕಾಲಾನುಕ್ರಮವು ವಿಜ್ಞಾನದ ಮೇಲೆ ಭಾರತದ ವಿಕಸನಗೊಳ್ಳುತ್ತಿರುವ ಗಮನ ಮತ್ತು ಅದರ ಸಾಮಾಜಿಕ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಥರ್ಮಲ್ ವಿದ್ಯುತ್ ಉತ್ಪದಿಸುವ ಘಟಕ, ವಾಟರ್ ಪೂರಿಫಿವಷನ್, ಸೋಲಾರ್ ಸಿಸ್ಟಮ್, ಸ್ಮಾರ್ಟ್ ಸಿಟಿ, ಅಲೆರ್ಮ್, ಸುಭ್ಮಿರಿನೇ, ಡ್ರಿಪ್ ಇರ್ರಿಗಿಷನ್, ಮಳೆ ಕೊಯ್ಲು, ಸಾಯಿಲ್ ಮೊಯಸ್ಟರ್ ಸೆನ್ಸರ್ ಮುಂತಾದ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಬಿಂಗಿ, ವಿನಯಗೌಡ ಪಾಟೀಲ, ಸುಜಾತಾ ಬೋಯೇಟೆ, ಜ್ಯೋತಿ ಕಲಹಾಳ, ಮಮತಾಜ ಮುಲ್ಲಾನವರ, ವಾಣಿಶ್ರೀ, ಅಕ್ಷತಾ, ಉಮಾ, ಮೇಧಾ, ಶಂಕ್ರಮ್ಮ ಯಾವಗಲ್, ವಿದ್ಯಾರ್ಥಿಗಳು ಶಾಲಾ ಸಿಬ್ಬಂದಿ ವರ್ಗದವರು ಇದ್ದರು.