ನವಲಗುಂದ:
ಮನುಷ್ಯ ತನ್ನನ್ನು ತಾನು ಅರಿತು ಬದುಕುವುದರೊಂದಿಗೆ ತನ್ನೊಳಗಿನ ಆತ್ಮದಲ್ಲಿರುವ ಕನ್ನಡಿ ತೆರೆದುಕೊಳ್ಳುವುದೆ ಅಧ್ಯಾತ್ಮ ಎಂದು ಮಣಕವಾಡ ದೇವ ಮಂದಿರದ ಅಭಿನವ ಮೃತ್ಯುಂಜಯ ಶ್ರೀ ಹೇಳಿದರು.ಸ್ಥಳೀಯ ಹಿರೇಮಠದ ನೂತನ ಪೀಠಾಧಿಕಾರಿಗಳ ಗುರು ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಆಯೋಜಿಸಿದ್ದ 11 ದಿನಗಳ ನಿತ್ಯ ಧಾರ್ಮಿಕ ಪ್ರವಚನ, ಧರ್ಮ ಜಾಗೃತ ಜಾಥಾ ಹಾಗೂ ಬೈಕ್ ರ‍್ಯಾಲಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗುರು ಪಟ್ಟಾಧಿಕಾರ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಪಟ್ಟಣದಲ್ಲಿ 34 ವರ್ಷಗಳ ನಂತರ ಪಂಚಪೀಠಾಧ್ಯಕ್ಷರ ಸಮ್ಮುಖದಲ್ಲಿ ನೂತನ ಪೀಠಾಧಿಕಾರ ಮಹೋತ್ಸವ ನಿಮಿತ್ತ ಹಲವಾರು ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 1ರಿಂದ 13ರ ವರೆಗೆ ನಡೆಯುವ ಎಲ್ಲ ಧಾರ್ಮಿಕ ಕಾರ್ಯ ಹಾಗೂ ಪಟ್ಟಾಧಿಕಾರ ಮಹೋತ್ಸವಕ್ಕೆ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿನೊದ ಅಸೂಟಿ ಮಾತನಾಡಿದರು. ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಗವಿಮಠದ ಬಸವಲಿಂಗ ಶ್ರೀ, ಶಿರಕೋಳ ಹಿರೇಮಠದ ಸಿದ್ದರಾಮ ಸ್ವಾಮೀಜಿ, ತುಪ್ಪದಕುರಟ್ಟಿಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಅಭಿನವ ಸಿದ್ಧಾರೂಠ ಸ್ವಾಮೀಜಿ, ಅಮ್ಮಿನಭಾವಿ ಹಿರೇಮಠದ ಶಾಂತಲಿಂಗ ಶಿವಾಚಾರ್ಯ, ನರಗುಂದ ಹಿರೇಮಠದ ಸಿದ್ಧಲಿಂಗ ಶ್ರೀ, ನಾಗಲಿಂಗಸ್ವಾಮಿ ಮಠದ ವೀರಯ್ಯ ಶ್ರೀ, ವೀರಬಸವದೇವರು ನೇತೃತ್ವ ವಹಿಸಿದ್ದರು.
ವೀರೇಶ ಕೂಗುಮಠ, ಪಿ.ಜಿ. ಕೋನರಡ್ಡಿ, ಸಿದ್ದಲಿಂಗಯ್ಯ ಹಿರೇಮಠ, ಗಂಗಪ್ಪ ಹಳ್ಳದ, ಅಂದಾನಯ್ಯ ಹಿರೇಮಠ, ಬಿ.ಬಿ. ಗಂಗಾಧರಮಠ, ಶಿವಾಜಿ ಕಲಾಲ ಇದ್ದರು. ಅಣ್ಣಪ್ಪ ಬಾಗಿ ಸ್ವಾಗತಿಸಿದರು. ಎ.ಬಿ. ಕೊಪ್ಪದ ಹಾಗೂ ಆರ್.ಎಸ್. ನೇಗಲಿ ನಿರೂಪಿಸಿದರು. ಇದಕ್ಕೂ ಮೊದಲು ಶ್ರೀಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಧರ್ಮ ಜಾಗೃತಿ ಜಾಥಾದಲ್ಲಿ ನೂರಾರು ಮಹಿಳೆಯರು ಆರತಿ ಹಿಡಿದರು ಮೆರವಣೆಗೆ ನಡೆಸಿದರೆ. ಸಕಲ ವಾದ್ಯ ಮೇಳಗಳೊಂದಗೆ ಶ್ರೀಸಿದ್ದೇಶ್ವರ ಶಿವಾಚಾರ್ಯರನ್ನು ಸಾರೋಟದಲ್ಲಿ ಮೆರವಣೆಗೆ ನಡೆಸಲಾಯಿತು.