ಭಗವಂತನಿಗೆ ಭೌತಿಕ ಬೆಳಕಿನ ದೀಪದ ಅವಶ್ಯಕತೆ ಇಲ್ಲ. ನಿಮ್ಮ ಅಂತರಂಗ ಅರಿವಿನ ಅವಶ್ಯಕತೆ ಇದೆ

ಕುರುಗೋಡು: ಭಗವಂತನಿಗೆ ಭೌತಿಕ ಬೆಳಕಿನ ದೀಪದ ಅವಶ್ಯಕತೆ ಇಲ್ಲ. ನಿಮ್ಮ ಅಂತರಂಗ ಅರಿವಿನ ಅವಶ್ಯಕತೆ ಇದೆ ಎಂದು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಕಿರಿಯ ಶ್ರೀಗಳು ಅಭಿಪ್ರಾಯಪಟ್ಟರು.

ಸಮೀಪದ ಸಿದ್ದರಾಂಪುರ ಗ್ರಾಮದ ಕದಳೀವಲ ಸಿದ್ದೇಶ್ವರ ಸ್ವಾಮಿಗಳ ಮಠದಲ್ಲಿ ಗುರುವಾರ ಅರಿವಿನ ಯಾತ್ರೆ ಕಾರ್ಯಕ್ರಮದಲ್ಲಿ ಜರುಗಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಮೌಲ್ಯಗಳ ಅರಿವಿಲ್ಲದಿದ್ದರೆ ಮನುಸ್ಯ ಜೀವನ ನಸ್ವರವಾಗುತ್ತದೆ. ಅಂತರಂಗದ ಅವಿರು ಮೌಗೂಡಿಸಿಕೊಂಡರೆ ಮಾತ್ರ ಶಿವ ಸಾಕ್ಷಾತ್ಕಾರ ಸಾಧ್ಯ ಎಂದರು.

ಶಿವಕುಮಾರ ಶ್ರೀಗಳು ಜೀವಿಸಿನ ಕಾಲಘಟ್ಟದಲ್ಲಿ ಬದುಕಿರುವ ನಾವು ನೀವೇ ಪರಮ ಪವಿತ್ರರು. ಶ್ರೀಗಳ ಜೀವನ ಮೌಲ್ಯ ಮತ್ತು ಸಂದೇಶಗಳನ್ನು ಯುವ ಪೀಳಿಗೆಗೆ ಮುಟ್ಟಿಸುವ ಕೆಲಸ ಶ್ರೀಮಠದ ಹಳೇ ವಿದ್ಯಾರ್ಥಿಗಳು ಮಾಡುವ ಅಗತ್ಯವಿದೆ. ಅವರು ನಮ್ಮನ್ನು ಭೌತಿಕವಾಗಿ ಅಗಲಿದ್ದಾರೆ. ಆದರೆ ಅವರ ಜೀವನ ಮೌಲ್ಯಗಳು ಸದಾಕಾಲ ಜೀವಂತವಾಗಿರುತ್ತವೆ. ಶ್ರೀಗಳು ಎಲ್ಲರಿಗೂ ಹತ್ತಿರವಾಗಲು ಅವರು ಅನುಕರಿಸಿದ ದಾರಿಯಿಂದ ಮತ್ತು ಬಸವಣ್ಣ ನವರ ಕಾಯಕ, ಪ್ರಸಾದ ಮತ್ತು ದಾಸೋಹ ವನ್ನು ಅನುಒರಿಸಿ ಅಭಿನವ ಬಸವಣ್ಣನಾದರು. ಅವರ ಜೀವನ ಶೈಲಿ, ಅವರ ಜೀವನ ಮೌಲ್ಯ ಮತ್ತು ಅವರು ನೀಡಿದ ಸಂದೇಶ ಪ್ರಮುಖದವು ಎಂದರು.

ಜೀವನ ಮತ್ತು ಆಹಾರ ಶೈಲಿ ಗಣನೀಯವಾಗಿ ಬದಲಾಗುತ್ತದೆ. ಪಾಶ್ಚಿಮಾತ್ಯ ಜೀವನ ಶೈಲಿಯನ್ನು ಅನುಕರಿಸುತ್ತಿರುವುದರಿಂದ ಗೋಬಿ, ಪಾನಿಪುರಿ, ಪಿಜ್ಜಾ, ಬರ್ಗರ್ ಮೊರೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮೊಬೈಲ್ ಗೀಳು ಅಂಟಿಸಿಕೊಳ್ಳುತ್ತಿರುವ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಅಗತ್ಯವಿದೆ. ನೆರೆಹೊರೆಯವರೊಂದಿಗೆ ಪರಸ್ಪರ ಸ್ನೇಹಭಾಗ ಮೂಡಿಸುವ ಅಗತ್ಯವಿದೆ ಎಂದರು.

ಕದಳೀವನ ಸಿದ್ದೇಶ್ವರ ತಾತನವರ ಮಠದ ಪೀಠಾಧಿಪತಿ ಕಾಯಕಯೋಗಿ ಚಿದಾನಂದ ಶ್ರೀಗಳು ಮಾತನಾಡಿ, ಹೆಣ್ಣು, ಮಣ್ಣು ಮತ್ತು ಹೊನ್ನಿಗಾಗಿ ಬಂದವರು ಅಲ್ಲ. ಮನುಕುಲದ ಉದ್ದಾರಕ್ಕಾಗಿ ಬಂದವರು ಸಿದ್ದಗಂಗಾ ಶಿವಕುಮಾರ ಸ್ವಾಮಿಗಳು ಎಂದು ಹೇಳಿದರು.

ಮುಖಂಡರಾದ ಸಿ.ಎಂ. ನಾಗರಾಜ್, ತೇಜಮೂರ್ತಿ, ಮಹಾಬಲೇಶ್ವರ ಗೌಡ್ರು, ಕೊಂಚ್ಗೇರಿ ಎಣ್ಣೆ ನಾಗರಾಜ್, ಭೀಮೇಶ್, ಗ್ರಾಮಗಳ ಭಕ್ತರು ಇದ್ದರು.

ಕುರುಗೋಡು ಧರ್ಮಸಭೆಯಲ್ಲಿ ಸಿದ್ದಗಂಗಾ ಮಠದ ಶಿವಶಿದ್ದೇಶ್ವರ ಕಿರಿಯ ಶ್ರೀಗಳು ಆಶೀರ್ವಚನ ನೀಡಿದರು