ಸಾರಾಂಶ
ಶಿಕ್ಷಣದ ಪ್ರಾಮುಖ್ಯತೆ ಬಗೆಗೆ ಪ್ರತಿಯೊಬ್ಬರಲ್ಲಿಯೂ ಸಹ ಅರಿವು ಮೂಡುತ್ತಿದೆ. ಕಷ್ಟ ಇದ್ದರೂ ಸಹ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಕಾಳಜಿ ವಹಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಶಾಲೆ, ಕಾಲೇಜು, ವಸತಿ ನಿಲಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲ:
ಶಿಕ್ಷಣದ ಪ್ರಾಮುಖ್ಯತೆ ಬಗೆಗೆ ಪ್ರತಿಯೊಬ್ಬರಲ್ಲಿಯೂ ಸಹ ಅರಿವು ಮೂಡುತ್ತಿದೆ. ಕಷ್ಟ ಇದ್ದರೂ ಸಹ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಕಾಳಜಿ ವಹಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಶಾಲೆ, ಕಾಲೇಜು, ವಸತಿ ನಿಲಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಇಲ್ಲಿನ ನವನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅಕ್ಷರ ಜ್ಞಾನಕ್ಕೆ ಮಾತ್ರ ಭವಿಷ್ಯ ರೂಪಿಸುವ ಶಕ್ತಿ ಇದೆ. ಶಿಕ್ಷಣ ಕ್ಷೇತ್ರಕ್ಕೆ ಸೌಲಭ್ಯ ಕಲ್ಪಿಸಿದಾಗ ಮಾತ್ರ ದೇಶದ ಭವಿಷ್ಯ ಸದೃಢಗೊಳ್ಳಲಿದೆ. ಆದರೆ ಕಳೆದ ೫ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ವಸತಿ ನಿಲಯಗಳ ಸಮಸ್ಯೆ ಹೆಚ್ಚಿದೆ, ಶಾಲಾ ಕೊಠಡಿಗಳಿಲ್ಲ, ಹಲವು ಸಮಸ್ಯೆಗಳು ಶಿಕ್ಷಣ ಕ್ಷೇತ್ರದಲ್ಲಿ ಸೃಷ್ಟಿಯಾಗಿದ್ದು ಇವೆಲ್ಲ ಕಾರಣಗಳಿಂದ ಬಡವರು ತಮ್ಮ ಮಕ್ಕಳ ಶಿಕ್ಷಣ ಮೊಟಕುಗೊಳಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಶ್ರೀನಿವಾಸ ಮಾನೆ, ಈಗಿನ ಸರ್ಕಾರ ಇದನ್ನೆಲ್ಲ ಅರಿತು ಕಾರ್ಯೋನ್ಮುಖವಾಗಿದೆ. ದೇವಸ್ಥಾನ, ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ತೋರುವ ಕಾಳಜಿ, ಶ್ರದ್ಧೆಯನ್ನು ಶಾಲೆ, ಕಾಲೇಜು ಕಟ್ಟಲೂ ಸಹ ತೋರಬೇಕಿದೆ. ನಾವೆಲ್ಲರೂ ಸೇರಿ ವ್ಯವಸ್ಥೆ ಸುಧಾರಿಸಲು ಶ್ರಮಿಸೋಣ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್, ಸಹಾಯಕ ನಿರ್ದೇಶಕಿ ಜಿ.ಬಿ. ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ., ಸದಸ್ಯರಾದ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಪರಶುರಾಮ್ ಖಂಡೂನವರ, ಮಮತಾ ಆರೆಗೊಪ್ಪ, ಶಂಶಿಯಾ ಬಾಳೂರ, ಮಹೇಶ ಪವಾಡಿ, ಪ್ರಸಾದಗೌಡ, ಸುನಿತಾ ಭದ್ರಾವತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಮೇಕಾಜಿ ಕಲಾಲ, ಸುರೇಶ ನಾಗಣ್ಣನವರ, ಸಂತೋಷ ಸುಣಗಾರ, ಉಮೇಶ ಮಾಳಗಿ, ದುದ್ದು ಅಕ್ಕಿವಳ್ಳಿ, ವಿನಯ ಬಂಕನಾಳ ಈ ಸಂದರ್ಭದಲ್ಲಿದ್ದರು.