ಸಾರಾಂಶ
ಹೊಸ ತಂತ್ರಜ್ಞಾನಗಳ ಮಧ್ಯೆ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ, ಅಪ್ಪಟ ಕನ್ನಡ ಜನಪದ, ಪುರಾತನ ಇತಿಹಾಸದ ಆರಾಧನಾ ಕಲೆಯಾದ ಯಕ್ಷಗಾನ ಪ್ರದರ್ಶನ ಕೇವಲ ಮನರಂಜನೆಗೆ ಸೀಮಿತವಾಗಬಾರದು. ಬದಲಿಗೆ ಹೊಸ ಪೀಳಿಗೆಗಳಿಗೆ ಆರಾಧನಾ ಕಲೆಯಾಗುವಂತೆ ಯಕ್ಷಗಾನ ಅರಿವು ಮೂಡಿಸುವ ಅಗತ್ಯವಿದೆ ಎಂದು ಯಕ್ಷಗಾನ ಭಾಗವತ ಜಿ.ರಾಘವೇಂದ್ರ ಮಯ್ಯ ಹೇಳಿದರು.
ದಾವಣಗೆರೆ: ಹೊಸ ತಂತ್ರಜ್ಞಾನಗಳ ಮಧ್ಯೆ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ, ಅಪ್ಪಟ ಕನ್ನಡ ಜನಪದ, ಪುರಾತನ ಇತಿಹಾಸದ ಆರಾಧನಾ ಕಲೆಯಾದ ಯಕ್ಷಗಾನ ಪ್ರದರ್ಶನ ಕೇವಲ ಮನರಂಜನೆಗೆ ಸೀಮಿತವಾಗಬಾರದು. ಬದಲಿಗೆ ಹೊಸ ಪೀಳಿಗೆಗಳಿಗೆ ಆರಾಧನಾ ಕಲೆಯಾಗುವಂತೆ ಯಕ್ಷಗಾನ ಅರಿವು ಮೂಡಿಸುವ ಅಗತ್ಯವಿದೆ ಎಂದು ಯಕ್ಷಗಾನ ಭಾಗವತ ಜಿ.ರಾಘವೇಂದ್ರ ಮಯ್ಯ ಹೇಳಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆ ಸಭಾಂಗಣದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಮಂಡಳಿಯ ನೇತೃತ್ವದಲ್ಲಿ ನಡೆದ ಚಕ್ರವ್ಯೂಹ, ಭಕ್ತಪ್ರಹ್ಲಾದ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನ ಕಲೆ ದೇವರ ಸೇವೆ, ಪೂಜೆಯೂ ಹೌದು. ದಾವಣಗೆರೆಯಲ್ಲಿ ಈ ಯಕ್ಷಗಾನ ಕಲೆಯನ್ನು ಮೊಟ್ಟಮೊದಲು 5 ದಶಕಗಳಿಂದ ಪರಿಚಯಿಸಿದ್ದು ದಾವಣಗೆರೆಯ ಯಕ್ಷರಂಗ ಸಂಸ್ಥೆ ಹೆಗ್ಗಳಿಕೆ ಎಂದರು.ಯಕ್ಷರಂಗದ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ, ಯಕ್ಷಾಭಿಮಾನಿಗಳ ಸಹಕಾರ, ಸಹಯೋಗದೊಂದಿಗೆ ಈ ಯಕ್ಷಗಾನ ಪ್ರದರ್ಶನ ವರ್ಷಂಪ್ರತಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿದರು. ಯಕ್ಷರಂಗ ಕಲಾವಿದ ಕೋಡಿ ವಿಶ್ವನಾಥ ಗಾಣಿಗ, ಕಲಾಕುಂಚ, ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಯಕ್ಷರಂಗದ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ ಶೆಟ್ಟಿ ಇತರರು ಇದ್ದರು.- - -
-15ಕೆಡಿವಿಜಿ32:ದಾವಣಗೆರೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನವನ್ನು ಜಿ.ರಾಘವೇಂದ್ರ ಮಯ್ಯ ಉದ್ಘಾಟಿಸಿದರು.