ಅನಿವಾಸಿ ಭಾರತೀಯ ಬಲ್ಯಾಟಂಡ ಕವೇರ ಪೂಣಚ್ಚ ನೇತೃತ್ವದಲ್ಲಿ ಕೊಡಗು ಶಕ್ತಿ ನಡ್ಪು ಬೃಹತ್ ಪಾದಯಾತ್ರೆ ಭಾನುವಾರ ನಡೆಯಿತು.

ನಾಪೋಕ್ಲು : ಅನಿವಾಸಿ ಭಾರತೀಯ ಬಲ್ಯಾಟಂಡ ಕವೇರ ಪೂಣಚ್ಚ ನೇತೃತ್ವದಲ್ಲಿ ಕೊಡಗು ಶಕ್ತಿ ನಡ್ಪು ಬೃಹತ್ ಪಾದಯಾತ್ರೆ ಭಾನುವಾರ ನಡೆಯಿತು.

ಕೊಡಗಿನ ಮೂಲನಿವಾಸಿಗಳ ಸಂಸ್ಕೃತಿ, ಉಡುಪು, ನೆಲ-ಜಲ, ದೇವರಕಾಡು, ಶ್ರೀ ಇಗ್ಗುತ್ತಪ್ಪ ದೇವರು ನೆಲೆನಿಂತ ಪವಿತ್ರ ಮಲ್ಮ ಬೆಟ್ಟವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ದೇಶ ತಕ್ಕರಾದ ಪರದಂಡ ಪ್ರಿನ್ಸ್ ಪ್ರಾರ್ಥನೆ ನೆರವೇರಿಸಿದರು. ತಾಯಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು.

ಭಾಗಮಂಡಲ ಮತ್ತು ಅಯ್ಯಂಗೇರಿ ಮಾರ್ಗವಾಗಿ ಸಾಗಿದ ಪಾದಯಾತ್ರೆಯನ್ನು ಪುಲಿಕೋಟು ಗ್ರಾಮದಲ್ಲಿ ಕರವಂಡ, ಪೆಬ್ಬಟ್ಟಿರ, ಮುಕ್ಕಾಟಿರ ಹಾಗೂ ಮಣವಟ್ಟಿರ ಕುಟುಂಬಸ್ಥರು ಸ್ವಾಗತಿಸಿ ಆತಿಥ್ಯ ನೀಡಿದರು. ನಂತರ ಪೇರೂರು ಶ್ರೀ ಇಗ್ಗುತ್ತಪ್ಪ ದೇವರ ದರ್ಶನ ಪಡೆದು, ಬಳಿಕ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳಿ ಪಾದಯಾತ್ರಿ ತಂಡ ಪ್ರಾರ್ಥನೆ ಸಲ್ಲಿಸಿತು. ನಂತರ ಕಾಲ್ನಡಿಗೆ ಮೂಲಕ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನವನ್ನು ತಲುಪಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಮುಕ್ತಾಯಗೊಳಿಸಲಾಯಿತು.

ಜಾಗೃತಿ ಪ್ರಚಾರ: ಪಾದಯಾತ್ರೆಯುದ್ದಕ್ಕೂ ಚೋಕಿರ ಅನಿತಾ ಹಾಗೂ ಮಾಳೇಟಿರ ಶ್ರೀನಿವಾಸ್ ಅವರು ಕೊಡಗಿನ ಪ್ರಕೃತಿ ಮತ್ತು ಸಂಸ್ಕೃತಿಯ ರಕ್ಷಣೆಯ ಉದ್ದೇಶಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಪ್ರಚಾರ ನಡೆಸಿದರು.

ಈ ಪಾದಯಾತ್ರೆಯಲ್ಲಿ ಬಾಲ್ಯಾಟಂಡ ಕೌಶಿಕ್ ಕುಟ್ಟಯ್ಯ, ನೆಲಜಿ ಗ್ರಾಮದ ಮಲ್ಮ ಹಿತರಕ್ಷಣಾ ಮುಖ್ಯ ಸಮಿತಿಯ ಮಣವಟ್ಟಿರ ಹರೀಶ್ ಕುಶಾಲಪ್ಪ, ಮಣವಟ್ಟಿರ ಅರುಣ್ ಪಳಂಗಪ್ಪ, ಮಂಡೀರ ಸಚಿನ್, ರಿಪ್ಪನ್, ಕೈಬುಲಿರ ಸಾಬು ಗಣಪತಿ, ದಿನು ಕಾವೇರಪ್ಪ, ಉಮೇಶ್ ಉತ್ತಪ್ಪ, ಮಚ್ಚುರ ರವೀಂದ್ರ, ಚಂಗೇಟಿರ ಕುಶಾಲಪ್ಪ, ಮಾಳೆಯಂಡ ವಿಜು ಅಪ್ಪಚ್ಚ, ಜಗಧ ಈರಪ್ಪ, ಕರವಂಡ ಲವ ನಾಣಯ್ಯ, ಚೀಯಕಪೂವಂಡ ಸುನೀಲ್ ಮಾಚಯ್ಯ, ಬಾಳೆಯಡ ಲವ ಬೆಳ್ಯಪ್ಪ ಸೇರಿದಂತೆ ನೆಲಜಿ, ಬಲ್ಲಮಾವಟಿ, ಪೇರೂರು ಗ್ರಾಮಸ್ಥರು ಭಾಗವಹಿಸಿದ್ದರು.

ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್, ಕನೆಕ್ಟಿಂಗ್ ಕೊಡವಾಸ್, ವಿರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಳೆಟೀರ ಶ್ರೀನಿವಾಸ್, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕರಾದ ಮೂಕಳೆರ ಕಾವ್ಯ, ವಿರಾಜಪೇಟೆಯ ಪೊಮ್ಮಕ್ಕಡ ಕೂಟ, ತಿಂಗಕೋರ್ ಮೊಟ್ ತಂಡ, ಚೇರಂಬಾಣಿ ಕೊಡವ ಸಮಾಜ, ನಾಪೋಕ್ಲು ಭಗವತಿ ಸಂಘ ಹಾಗೂ ವಿರಾಜಪೇಟೆಯ ಆದಿ ಬೈತೂರು ಸಂಘ ಪದಾಧಿಕಾರಿಗಳು ಪಾಲ್ಗೊಂಡಿದ್ದರು.