ಸುಂಟಿಕೊಪ್ಪ : ರಾಜ್ಯದ್ಯಂತ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಇರ್ವರು ವಿದ್ಯಾರ್ಥಿನಿಯರು 625 ಅಂಕಗಳಿಗೆ 621 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ಕೆ.ಐ 621 ಅಂಕ ಪಡೆದಿದ್ದಾರೆ. ಇದೇ ಶಾಲೆಯ ರೇನಿತ್ 617 ಅಂಕಗಳಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಫಲಿತಾಂಶದಲ್ಲಿ ಸುಂಟಿಕೊಪ್ಪ ಹೋಬಳಿಯ ಪ್ರೌಢಶಾಲೆಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಮಕ್ಕಳು ಪೋಷಕರು ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ 4 ವರ್ಷಗಳಿಂದ ಸತತವಾಗಿ ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶ ಸಾಧನೆ ಮಾಡುತ್ತಿದೆ. ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢಶಾಲೆ, ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲೆ ವಿಭಾಗ), ಮಾದಾಪುರದ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು, 7ನೇ ಹೊಸಕೋಟೆ ಪ್ರೌಢಶಾಲೆ ಶೇ. 100 ಫಲಿತಾಂಶ ಪಡೆದುಕೊಂಡಿದೆ. ಶಾಂತಿನಿಕೇತನ ಶಾಲೆಯ 104 ವಿದ್ಯಾರ್ಥಿಗಳಲ್ಲಿ 104 ಮಕ್ಕಳು ಉತ್ತೀರ್ಣಗೊಂಡಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 41 ಮಕ್ಕಳು ಮತ್ತು ಪ್ರಥಮದರ್ಜೆಯಲ್ಲಿ 58 ಹಾಗೂ ದ್ವಿತೀಯ ಶ್ರೇಣಿಯಲ್ಲಿ 05 ಮಕ್ಕಳು ಉತ್ತೀರ್ಣರಾಗಿದ್ದು ಈ ಪೈಕಿ ಸಿಂಚನ ಕೆ.ಐ 621 ಅಂಕಗಳಿಸಿ ಶೇ. 99.33 ಅಂಕಗಳನ್ನು ಗಳಿಸಿದ್ದು ದ್ವಿತೀಯ ಸ್ಥಾನದಲ್ಲಿ ರೇನಿತ್ 617 ಅಂಕಗಳಿಸಿ ಶೇ. 98.72 ಅಂಕಗಳನ್ನು ಗಳಿಸಿದ್ದಾರೆ, ಜನನಿ ಪೊನ್ನಮ್ಮ 605 ಶೇ.96.80 ಅಂಕಗಳೊಂದಿಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಸಂತಮೇರಿ 131 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 127 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ. 96.94 ಫಲಿತಾಂಶ ದಾಖಲಿಸಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ ಒಟ್ಟು 11 ಮಂದಿ ತೇರ್ಗಡೆಗೊಂಡರೆ, ಪ್ರಥಮ ಶ್ರೇಣಿಯಲ್ಲಿ 73 ಮಂದಿ ಬಾಲಕರು, ಬಾಲಕಿಯರು ತೇರ್ಗಡೆಗೊಂಡರೆ, ದ್ವಿತೀಯ ಶ್ರೇಣಿಯಲ್ಲಿ 28 ಮಂದಿ ಬಾಲಕರು, ಬಾಲಕಿಯರು ತೇರ್ಗಡೆಗೊಂಡಿದ್ದು ತೃತೀಯ ಶ್ರೇಣಿಯಲ್ಲಿ 15 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ ಭೂಮಿಕ ಎಂ.ಪಿ. 596 ಅಂಕಗಳೊಂದಿಗೆ ಶೇ. 95.2 ಶಾಲೆಗೆ ಪ್ರಥಮ, ಆರ್ಯ ರೆಡ್ಡಿ ಎನ್. 575 ಅಂಕಗಳನ್ನು ಗಳಿಸುವುದರೊಂದಿಗೆ ಶೇ.90 ಸಾಧನೆ ಮಾಡಿ ಪ್ರಥಮ ದ್ವಿತೀಯ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆ ಹತ್ತನೇ ತರಗತಿಯಲ್ಲಿ ಶೇ. 43 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 41 ಮಂದಿ ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 7 ಮಂದಿ ಉತ್ತೀರ್ಣರಾಗಿದ್ದು, ಪ್ರಥಮ ಶ್ರೇಣಿಯಲ್ಲಿ 26 ಮಂದಿ, ದ್ವಿತೀಯ ಶ್ರೇಣಿಯಲ್ಲಿ 07 ಮಂದಿ ತೃತೀಯ ಶ್ರೇಣಿಯಲ್ಲಿ 1 ಉತ್ತೀರ್ಣರಾಗಿದ್ದು ಒಟ್ಟು 41 ಮಕ್ಕಳು ಉತ್ತೀರ್ಣರಾಗುವುದರೊಂದಿಗೆ ಶೇ. 95.34 ಪಡೆದುಕೊಂಡಿತು. ಈ ಪೈಕಿ 599 ಅಂಕಗಳಿಸುವ ಶ್ರೀಶಾ ಶೇಕಡ 95.84 ರ ಸಾಧನೆಯನ್ನು ಮಾಡಿದ್ದಾರೆ. ಶ್ರೀಶಾ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಕಷ್ಟು ಸಾಧನೆಯನ್ನು ಮಾಡಿರುವುದು ಸ್ಮರಿಸಬಹುದಾಗಿದೆ. ಸುಂಟಿಕೊಪ್ಪದ ಸರಕಾರಿ ಪ್ರೌಢಶಾಲೆಯಲ್ಲಿ 33 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 33 ಮಕ್ಕಳು ಉತ್ತೀರ್ಣಗೊಳ್ಳುವುದರೊಂದಿಗೆ ಶೇ.100 ಫಲಿತಾಂಶ ಪಡೆದುಕೊಂಡಿದೆ. ಉನ್ನತ ಶ್ರೇಣಿಯಲ್ಲಿ 3 ಮಂದಿ, ಪ್ರಥಮ ಶ್ರೇಣಿಯಲ್ಲಿ 12 ಮಂದಿ, ದ್ವಿತೀಯ ಶ್ರೇಣಿಯಲ್ಲಿ 13 ಮಂದಿ, ತೃತೀಯ ಶ್ರೇಣಿಯಲ್ಲಿ 5 ಉತ್ತೀರ್ಣಗೊಂಡಿದ್ದಾರೆ. ರೋಜ 559 ಅಂಕಗಳಿಸುವುದರೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ದ್ವಿತೀಯ ಸ್ಥಾನವನ್ನು ವೈಷ್ಣವಿ 536 ಅಂಕವನ್ನುಗಳಿಸಿಕೊಂಡರೆ, ತೃತೀಯ ಸ್ಥಾನವನ್ನು ಮೊಹಮದ್ ಅನಾಸ್ 533 ಅಂಕಗಳನ್ನು ಪಡೆಯುವ ಶಾಲೆಗೆ ಉತ್ತಮ ಸಾಧನೆ ತೋರಿದ್ದಾರೆ. 7ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆ ಹತ್ತನೇ ತರಗತಿಯಲ್ಲಿ 24 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 24 ಉತ್ತೀರ್ಣಗೊಂಡಿದ್ದು, ಉನ್ನತ ಶ್ರೇಣಿಯಲ್ಲಿ ಓರ್ವ ವಿದ್ಯಾರ್ಥಿನಿ, ಪ್ರಥಮ ಶ್ರೇಣಿಯಲ್ಲಿ 15 ಮಂದಿ ದ್ವಿತೀಯ ಶ್ರೇಣಿಯಲ್ಲಿ 5 ಮಂದಿ ಹಾಗೂ ತೃತೀಯ ಶ್ರೇಣಿಯಲ್ಲಿ 3 ಉತ್ತೀರ್ಣಗೊಂಡಿದ್ದಾರೆ. ಶೇ. 100 ಫಲಿತಾಂಶ ಪಡೆದುಕೊಂಡಿದೆ.ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆ ಹತ್ತನೇ ತರಗತಿಯಲ್ಲಿ 5 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ.