ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಅಂತರಶಾಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಜಿಲ್ಲೆಯ 15 ಶಾಲೆಗಳ ಕ್ರೀಡಾಳುಗಳು ಪಾಲ್ಗೊಂಡಿದ್ದರು. 14 ಮತ್ತು 16 ವಯೋಮಾನದ ಬಾಲಕ-ಬಾಲಕಿಯರ ನಡುವೆ ಈ ಪಂದ್ಯಾವಳಿ ನಡೆಯಿತು.14 ವಯೋಮಾನದ ಬಾಲಕರ ವಿಭಾಗದಲ್ಲಿ ಲಿತೇಶ್ ಕೆ (ಸರ್ವದೈವತಾ ಶಾಲೆ) ಮತ್ತು ಅವನೀಶ್ ಕೃಷ್ಣ ಜಿ.ಎಚ್. (ಕೊಡಗು ವಿದ್ಯಾಲಯ) ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು
14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಹಲ್ಯಾ ಮನೋಹರ್ (ಸೆಂಟ್ ಮೇರಿಸ್ ಶಾಲೆ) ಮತ್ತು ದಕ್ಷತಾ ಡಿ (ಶಾಂತಿನಿಕೇತನ ಶಾಲೆ) ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು.16 ವಯೋಮಾನದ ಬಾಲಕರ ವಿಭಾಗದಲ್ಲಿ ಐಜಾನ್ (ಕೆಂದ್ರೀಯ ವಿದ್ಯಾಲಯ) ಮತ್ತು ಜಿ ಎಸ್ ಸುಧಾನ್ವ (ಜೂನಿಯರ್ ಕಾಲೇಜು ಮಡಿಕೇರಿ) ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರು.
16 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಎಂ ಲೋಚನ್ ಸೂರಜ್ ( ಕಾಪ್ಸ್) ಮತ್ತು ಖ್ಯಾತಿ ಕಾವೇರಮ್ಮ (ಕೊಡಗು ವಿದ್ಯಾಲಯ) ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರು.ಡಬಲ್ಸ್ ವಿಭಾಗದಲ್ಲಿ - 14 ವಯೋಮಾನದ ಬಾಲಕರ ವಿಭಾಗದಲ್ಲಿ ಶ್ಕಂದ ವಿಟಿ ಮತ್ತು ಓಂಕಾರ (ಶಾಂತಿನಿಕೇತನ) ಪ್ರಥಮ ಸ್ಥಾನ, ಅವನೀಶ್ ಕೃಷ್ಣ ಮತ್ತು ರಿಶಿತ್ ಬಿ ಟಿ (ಕೊಡಗು ವಿದ್ಯಾಲಯ) ದ್ವಿತೀಯ ಸ್ಥಾನ ಗಳಿಸಿದರು .
14 ವಯೋಮಾನದ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಫಿದಾ ಮತ್ತು ಹೆಮಾನಿ (ಶಾಂತಿನಿಕೇತನ) ಪ್ರಥಮ ಸ್ಥಾನ, ಸಾಧನ ಕಾವೇರಮ್ಮ ಮತ್ತು ಅಮೃತ ನೀಲಮ್ಮ (ಕೊಡಗು ವಿದ್ಯಾಲಯ) ದ್ವಿತೀಯ ಸ್ಥಾನ ಗಳಿಸಿದರು.16 ವಯೋಮಾನ ದ ಬಾಲಕರ ಡಬಲ್ಸ್ ವಿಭಾಗದಲ್ಲಿ ಜಿ ಎಸ್ ಸುಧಾನ್ವ ಮತ್ತು ಜಿ ಎಸ್ ಶಿಶಿರ್ (ಜೂನಿಯರ್ ಕಾಲೇಜು) ಪ್ರಥಮ ಸ್ಥಾನ, ರಫಾನ್ ಮತ್ತು ಶ್ರೇಯಸ್ ವೆಂಕಟಾದ್ರಿ (ಕೊಡಗು ವಿದ್ಯಾಲಯ) ದ್ವಿತೀಯ ಸ್ಥಾನ ಗಳಿಸಿದರು .
16 ವಯೋಮಾನದ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಖ್ಯಾತಿ ಕಾವೇರಮ್ಮ ಮತ್ತು ಅಮೃತಾ ಬಿ ಎಸ್ (ಕೊಡಗು ವಿದ್ಯಾಲಯ) ಪ್ರಥಮ ಸ್ಥಾನ, ಎಂ ಎನ್ ಶ್ರೇಯಾ ಮತ್ತು ಜಿ ಆರ್ ಅನೂಹ್ಯಾ (ಕೊಡಗು ವಿದ್ಯಾಲಯ) ದ್ವಿತೀಯ ಸ್ಥಾನ ಗಳಿಸಿದರು.ಸಮಾರೋಪ ಸಮಾರಂಭದಲ್ಲಿ ಮಂಗಳೂರು ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ನಿವೃತ್ತ ಡೀನ್ ಡಾ. ಶಿವಪ್ರಸಾದ ಕೆ, ಮಡಿಕೇರಿಯ ರೊಟೇರಿ ನಿದೇ೯ಶಕ ದೇವಣಿರ ತಿಲಕ್ ಕೊಡಗು ವಿದ್ಯಾಲಯದ , ಪ್ರಾಂಶುಪಾಲ ಸುಮಿತ್ರ ಕೆ.ಎಸ್ , ಆಡಳಿತ ನಿರ್ವಹಣಾಧಿಕಾರಿ ರವಿ ಪಿ, ಟೇಬಲ್ ಟೆನ್ನಿಸ್ ತರಬೇತುದಾರ ರಚನ್ ಪೊನ್ನಪ್ಪ ಹಾಗೂ ಟೂರ್ನಮೆಂಟ್ ಸಂಚಾಲಕರಾದ ದಿನೇಶ್ ಭಾಗವಹಿಸಿದ್ದರು.