ವಿಜೃಂಭಣೆಯಿಂದ ನಡೆದ ಕೋಡಮ್ಮದೇವಿ ರಥೋತ್ಸವ

| Published : Apr 13 2025, 02:01 AM IST

ಸಾರಾಂಶ

ಗ್ರಾಮದೇವತೆ ಕೋಡಮ್ಮದೇವಿ ರಥೋತ್ಸವ ನಡೆಯಿತು. ಕೋಡಮ್ಮದೇವಿ ಮೂಲ ಸನ್ನಿಧಾನದಲ್ಲಿ ಶ್ರೀ ದೇವಿಗೆ ಜಾತ್ರಾ ಪ್ರಯುಕ್ತ ವಿಶೇಷ ಪೂಜೆ ಅಲಂಕಾರವನ್ನು ಏರ್ಪಡಿಸಲಾಗಿತ್ತು. ಯಳವಾರೆ ಹುಚ್ಚಮ್ಮದೇವಿ, ಕೋಡಮ್ಮದೇವಿ, ಧೂತರಾಯಸ್ವಾಮಿ, ವೀರಭದ್ರಸ್ವಾಮಿ ಉತ್ಸವವು ಕೋಡಿಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಜಾತ್ರಾ ಆವರಣದಲ್ಲಿ ಸಿಡಿಸೇವೆ ಯಲ್ಲಿ ನೂರಾರು ಮಹಿಳೆಯರು ಮಕ್ಕಳು ಸಿಡಿ ಕಂಬಸುತ್ತಿ ದೇವಿಯವರನ್ನು ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ, ಹಾರನಹಳ್ಳಿ

ಉಯ್ಯಾಲೆಸೇವೆ ಶ್ರೀ ಹುಚ್ಚಮ್ಮದೇವಿ ಕೋಡಮ್ಮದೇವಿಯವರನ್ನು ಉಯ್ಯಾಲೆಯಲ್ಲಿ ಕುಳಿರಿಸಿ ಶ್ರೀ ದೂತರಾಯಸ್ವಾಮಿ, ಚಲುವರಾಯಸ್ವಾಮಿ, ವೀರಭದ್ರಸ್ವಾಮಿಯವರು ಅಮ್ಮನವರನ್ನು ಉಯ್ಯಾಲೆಯಲ್ಲಿ ತೂಗಿದ ನಂತರ ಜಾತ್ರೇಗೆ ಬಂದ ಭಕ್ತರುಗಳು ಅಮ್ಮನವರನ್ನು ತೂಗಿ ಭಕ್ತಿಯಿಂದ ನಮಿಸಿದರು.

ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದರು. ದೇವಾಲಯ ಸಮಿತಿಯಿಂದ ಶಾಲು ಹಾರ ನೀಡಿ ಗೌರವ ಸಮರ್ಪಣೆ ಮಾಡಿದರು.

ಜಾತ್ರೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತ್ತು.ಹಾರನಹಳ್ಳಿ ಗ್ರಾಮದೇವತೆಯ ಶಕ್ತಿ ದೇವತೆಯಾದ ಶ್ರೀ ಧೂತರಾಯಸ್ವಾಮಿ ಕತ್ತಿಸೇವೆ ಆಕರ್ಷಣೆಯಾಗಿತ್ತು ಈ ಕತ್ತಿ ಸೇವೆ ಮುಳ್ಳವಾಗಿಗೆ ಸೇವೆ ನೋಡಿ ಭಕ್ತಿಯಿಂದ ಪ್ರಾರ್ಥಿಸಿದರು. ಕೋಡಮ್ಮದೇವಿ ಹಾಗೂ ಹುಚ್ಚಮ್ಮದೇವಿಯವರನ್ನು ರಥದಲ್ಲಿ ಕುಳ್ಳರಿಸಿ ಬಲಿಪ್ರಧಾನ ಪುಣ್ಯಾಹಃದ ನಂತರ ಚಲುವರಾಯಸ್ವಾಮಿ ವೀರಭದ್ರದೇವರು ಧೂತರಾಯಸ್ವಾಮಿ ರಥಕ್ಕೆ ಕಾಯಿ ಹೊಡೆದ ನಂತರ ಹಾರನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ರಥಕ್ಕೆ ಕಾಯಿ ಹೊಡೆದು ರಥ ಎಳೆದರು. ದೇವಾಲಯ ಸಮಿತಿ ಅಧ್ಯಕ್ಷರು ಸದಸ್ಯರುಗಳು ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಸದಸ್ಯರುಗಳು ಹಾರನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ರಥಕ್ಕೆ ಹಾಗೂ ದೇವಾಲಯಕ್ಕೆ ವಿವಿಧ ಹೂಗಳಿಂದ ಶೃಂಗಾರಗೊಳಿಸಲಾಗಿತ್ತು. ಕೋಡಮ್ಮದೇವಿ ಸಮುದಾಯ ಭವನ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.