ಸಾರಾಂಶ
ಸರ್ಜಾಪುರದ ಪುರಾಣ ಪ್ರಸಿದ್ಧ ಶ್ರೀ ಕಲ್ಯಾಣ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವವು ಸಂಭ್ರಮ ಸಡಗರಗಳಿಂದ ನೆರವೇರಿತು. ನೆರೆಯ ರಾಜ್ಯಗಳ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು.
ಆನೇಕಲ್: ಸರ್ಜಾಪುರದ ಪುರಾಣ ಪ್ರಸಿದ್ಧ ಶ್ರೀ ಕಲ್ಯಾಣ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವವು ಸಂಭ್ರಮ ಸಡಗರಗಳಿಂದ ನೆರವೇರಿತು. ನೆರೆಯ ರಾಜ್ಯಗಳ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು.
ಮಂಟಪ ಪಡಿ ಸೇವೆಯ ನಂತರ ಉತ್ಸವಮೂರ್ತಿಯನ್ನು ತೇರಿನಲ್ಲಿ ಕುಳ್ಳಿರಿಸುತ್ತಿದ್ದಂತೆ ಭಕ್ತರು ಜಯಘೋಷ ಮಾಡಿ ಬಾಳೆಹಣ್ಣು ದವನವನ್ನು ಶಿಖರದತ್ತ ಎಸೆಯುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಸಂಕಲ್ಪ ಮಾಡಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಮುನಿರಾಜು ದೇಗುಲ ಹಾಗೂ ನಗರಕ್ಕೆ ವಿದ್ಯುತ್ ಅಲಂಕಾರ ಸೇವೆಯನ್ನು ಅದ್ಧೂರಿಯಾಗಿ ನೆರವೇರಿಸಿದರು.
ಶ್ರೀ ವೆಂಕಟರಮಣ ಸೇವಾ ಸಮಿತಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ, ಜೈ ಭುವನೇಶ್ವರಿ ಗ್ರಾಮೀಣಾಭಿವೃದ್ಧಿ ಮತ್ತು ಕನ್ನಡ ಸೇವಾ ಸಂಘ, ಹಿಂದೂ ಸೇವಾ ಸಮಿತಿಯವರು ದಿನವಿಡೀ ಅನ್ನದಾಸೋಹವನ್ನು ನಡೆಸಿದರು.ದೇಗುಲ ಅಭಿವೃದ್ಧಿ ಸಮಿತಿಯ ಎಸ್.ವೈ.ಅನಿಲ್ ರೆಡ್ಡಿ, ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಆರ್.ಮನೋಹರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಎಸ್.ಎಂ.ಶ್ರೀನಿವಾಸ್, ಬುಡಗಪ್ಪ, ಸುನೀತಾ ಶಶಿಧರ್, ಎ.ಸತೀಶ್ ಕುಮಾರ್, ನವೀನ್ ಕುಮಾರ್ ಪಾಲ್ಗೊಂಡಿದ್ದರು.ಚಿತ್ರ: ಆನೇಕಲ್ ತಾಲೂಕಿನ ಸರ್ಜಾಪುರದ ಶ್ರೀ ಕಲ್ಯಾಣ ಕೋದಂಡರಾಮಸ್ವಾಮಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಪ್ರಮುಖ ಸೇವಾ ಕರ್ತರಾದ ಸಿ.ಮುನಿರಾಜು, ಸಿ.ಆರ್.ಮನೋಹರ್ ಹಾಗೂ ಸಮಿತಿಯ ಸದಸ್ಯರಿದ್ದಾರೆ.