ಕೊಡಂಗೆ: ಶ್ರೀ ರಾಮ ವೃತ್ತ ಉದ್ಘಾಟನೆ

| Published : Apr 09 2025, 12:34 AM IST

ಸಾರಾಂಶ

ಪರ್ಕಳ ಸಮೀಪದ ಕೊಡಂಗೆ ಶ್ರೀರಾಮ ಮಂದಿರದ ವತಿಯಿಂದ ಮಂದಿರದ ಮುಂಭಾಗದಲ್ಲಿ ಪರ್ಕಳ-ಕೊಡಂಗೆ-ಸರಳೇಬೆಟ್ಟು ರಸ್ತೆಗಳು ಕೂಡುವ ಕೇಂದ್ರಭಾಗದಲ್ಲಿ ಅಂದಾಜು ೭೫ ಸಾವಿರ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ‘ಶ್ರೀರಾಮ ವೃತ್ತ’ವನ್ನು ಭಾನುವಾರ ಶ್ರೀರಾಮ ನವಮಿಯ ಶುಭಾವಸರದಲ್ಲಿ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಪರ್ಕಳ ಸಮೀಪದ ಕೊಡಂಗೆ ಶ್ರೀರಾಮ ಮಂದಿರದ ವತಿಯಿಂದ ಮಂದಿರದ ಮುಂಭಾಗದಲ್ಲಿ ಪರ್ಕಳ-ಕೊಡಂಗೆ-ಸರಳೇಬೆಟ್ಟು ರಸ್ತೆಗಳು ಕೂಡುವ ಕೇಂದ್ರಭಾಗದಲ್ಲಿ ಅಂದಾಜು ೭೫ ಸಾವಿರ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ‘ಶ್ರೀರಾಮ ವೃತ್ತ’ವನ್ನು ಭಾನುವಾರ ಶ್ರೀರಾಮ ನವಮಿಯ ಶುಭಾವಸರದಲ್ಲಿ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಶ್ರೀರಾಮ ಮಂದಿರದ ಪರಿಸರಕ್ಕೆ ‘ಶ್ರೀರಾಮನಗರ’ ಎಂಬ ಹೆಸರು ಅಧಿಕೃತ ಮಾಡಲು ನಗರಸಭಾ ವಾರ್ಡ್ ಸದಸ್ಯರಿಗೆ ಕಾರ್ಯ ಪ್ರವರ್ತರಾಗಲು ತಿಳಿಸಿದರು.ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಸುಮಿತ್ರಾ ಆರ್. ನಾಯಕ್, ಹಾಸನ ಮತ್ತು ದ.ಕ. ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಎಂ.ಗೋಕುಲ್‌ದಾಸ್ ನಾಯಕ್, ಸ್ಥಳೀಯ ನಗರಸಭಾ ಸದಸ್ಯೆ ವಿಜಯಲಕ್ಷ್ಮೀ, ಶ್ರೀ ದುರ್ಗಾಪರಮೆಶ್ವರೀ ಸೊಸೈಟಿ ಅಧ್ಯಕ್ಷ ಅಶೋಕ ಕಾಮತ್, ಬಂಟಕಲ್ಲು ಶ್ರೀ ದುರ್ಗಾಪರಮೆಶ್ವರಿ ದೇವಳದ ಮಾಜಿ ಆಡಳಿತ ಮೊಕ್ತೇಸರ ಸರಳೇಬೆಟ್ಟು ರಮಾನಾಥ ನಾಯಕ್ ಭಾಗವಹಿಸಿದ್ದರು.ಸಾರಸ್ವತ್ ಸಂದೇಶ್ ಪತ್ರಿಕೆಯ ಸಂಪಾದಕ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್, ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್ ಧಾರ್ಮಿಕ ಸಂದೇಶ ನೀಡಿದರು. ಶ್ರೀರಾಮ ಮಂದಿರದ ಅಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ನಾಯಕ್ ನಿರೂಪಿಸಿದರು. ಚಂದ್ರಿಕಾ ನಾಯಕ್ ವಂದಿಸಿದರು.