ಸಾರಾಂಶ
ಕಟ್ಟೆಮಾಡಿನಲ್ಲಿ ಕೊಡವ ಭಕ್ತಾದಿಗಳು ಸಾಂಪ್ರದಾಯಿಕ ಉಡುಪು ತೊಟ್ಟು ದೇವಸ್ಥಾನ ಪ್ರವೇಶಕ್ಕೆ ತಡೆ ಮಾಡಿದ ಹಾಗೂ ಕೊಡವ ಭಕ್ತಾದಿಗಳ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು, ಸಿಎನ್‌ಸಿ ಅಧ್ಯಕ್ಷ ಎನ್. ಯು. ನಾಚಪ್ಪ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆ ರದ್ದುಗೊಳಿಸಬೇಕೇಂದು ಒತ್ತಾಯಿಸಿ ಬಿರುನಾಣಿಯಲ್ಲಿ ಮಂಗಳವಾರ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕಟ್ಟೆಮಾಡಿನಲ್ಲಿ ಕೊಡವ ಭಕ್ತಾದಿಗಳು ಸಾಂಪ್ರದಾಯಿಕ ಉಡುಪು ತೊಟ್ಟು ದೇವಸ್ಥಾನ ಪ್ರವೇಶಕ್ಕೆ ತಡೆ ಮಾಡಿದ ಹಾಗೂ ಕೊಡವ ಭಕ್ತಾದಿಗಳ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು, ಸಿಎನ್‌ಸಿ ಅಧ್ಯಕ್ಷ ಎನ್. ಯು. ನಾಚಪ್ಪ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆ ರದ್ದುಗೊಳಿಸಬೇಕೇಂದು ಒತ್ತಾಯಿಸಿ ಬಿರುನಾಣಿಯಲ್ಲಿ ಮಂಗಳವಾರ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.ಬಿರುನಾಣಿಯ ಮರೆನಾಡ್ ಕೊಡವ ಸಮಾಜ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕೊಡವ ಸಂಸ್ಕೃತಿ, ಧಾರ್ಮಿಕ ಕೇಂದ್ರ, ಉಡುಪು, ಆಭರಣಗಳನ್ನು ಕೆಲವರು ನಕಲಿ ಮಾಡುತ್ತ, ಕೊಡವ ಜನಾಂಗದ ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಕೊಡಗಿನ ಇತಿಹಾಸ ತಿರುಚಲಾಗುತ್ತಿದೆ. ಇಂತಹ ಕಿಡಿಗೇಡಿಗಳಿಂದ ಕೊಡಗಿನಲ್ಲಿ ಸಾಮರಸ್ಯ ಕದಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಕೊಡವ ಜನಾಂಗದ ಮೇಲೆ ಪ್ರಚೋದನಾತ್ಮಕ ನಿಂದನೆ ಮಾಡಲಾಗುತ್ತಿದೆ. ಇಂತಹವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.ಅಖಿಲ ಕೊಡವ ಸಮಾಜ ನೇತೃತ್ವ ಫೆ.2 ರಿಂದ 7 ವರೆಗೆ ಕುಟ್ಟದಿಂದ ಮಡಿಕೇರಿವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡಲು ಈ ಸಂದರ್ಭ ನಿರ್ಧರಿಸಲಾಯಿತು.
ಬಿರುನಾಣಿಯ ಮರೆನಾಡ್ ಕೊಡವ ಸಮಾಜ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ, ಕಾರ್ಯದರ್ಶಿ ಅಯ್ಯಮಾಡ ಮುತ್ತಣ್ಣ, ಉಪಾಧ್ಯಕ್ಷ ಬೊಳ್ಳೇರ ಪೊನ್ನಪ್ಪ, ಮಾಜಿ. ಗ್ರಾ. ಪಂ. ಸದಸ್ಯ ಬೊಟ್ಟಂಗಡ ಗಿರೀಶ್ ಮಾತನಾಡಿದರು.