ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಕೊಲ್ಲಿರ ತಂಡ ಬಲ್ಲಂಡ ತಂಡದ ವಿರುದ್ಧ 8-0 ಅಂತರದ ಭರ್ಜರಿ ಜಯ ಸಾಧಿಸಿತು. ಕೊಲ್ಲಿರ ತಂಡದ ಕೊಲ್ಲಿರ ಜಾನೀಶ್ ಅಪ್ಪಯ್ಯ ಅತಿ ವೇಗದ ಗೋಲು (21 ಸೆಕೆಂಡ್) ದಾಖಲಿಸಿದರು.

ಉಳಿದಂತೆ ನಾಯಕಂಡ, ಮೇಕತಂಡ, ಪಾಲೆಯಡ, ಕಯ್ಮಂಡ, ಬೊಳ್ಳಚೆಟ್ಟಿರ, ತಡಿಯಂಗಡ

ತಂಡಗಳು ಗೋಲು ಗಳಿಸಲು ವಿಫಲವಾದವು. ನಾಯಕಂಡ ತಂಡ ಅಚ್ಚಕಾಳಿರ ವಿರುದ್ಧ 5-0 ಅಂತರದಿಂದ, ಕೊಟ್ಟಂಗಡ ಮೇಕ ತಂಡ ವಿರುದ್ಧ 5-0 ಅಂತರದಿಂದ, ಪಾಲೆಯಡ ಆಪಾಡಂಡ ವಿರುದ್ಧ 1-0 ಅಂತರದಿಂದ, ಮುಕ್ಕಾಟಿರ (ಕುಂಬಳದಾಳು)


ಕುಯ್ಮಂಡ ವಿರುದ್ಧ 2-0 ಅಂತರದಿಂದ, ಚೇಂದಿರ ತಾಳಚಿರ ವಿರುದ್ಧ 5-0 ಅಂತರದಿಂದ, ತಡಿಯಂಗಡ ಮಾದೆಯಂಡ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದವು. ಬಾಚಳ್ಳಿರ ಮತ್ತು ನಾಗಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 1-1 ಅಂತರದ ಸಮಬಲ ಸಾಧಿಸಿದವು. ನಂತರ ನಡೆದ ಟೈ ಬ್ರೇಕರ್ ನಲ್ಲಿ ಬಾಚಳ್ಳಿರ ತಂಡ 3-1 ಅಂತರದಿಂದ ಗೆಲುವು ಸಾಧಿಸಿತು. ಮೂಡೇರ ಮತ್ತು ಮುಂಡಚಾಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2- 2 ಸಮಬಲದ ಹೋರಾಟ ನಡೆಸಿದವು ನಂತರ ಟೈ ಬ್ರೇಕರ್ ನಲ್ಲಿ ಮುಂಡಚಾಡಿರ ತಂಡ 4-2 ಅಂತರದಿಂದ ಗೆಲುವು ಸಾಧಿಸಿತು.

ಚೇಂದ್ರಿಮಾಡ ಮತ್ತು ಬೊಜ್ಜಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2-2 ಅಂತರದ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಚೇಂದ್ರಿಮಾಡ 3-2 ಅಂತರದಿಂದ ಜಯ ಸಾಧಿಸಿತು. ಉಳಿದಂತೆ ಕಲ್ಲುಮಾಡಂಡ ಪಾಂಡಂಡ ವಿರುದ್ಧ 3-1ರಿಂದ, ಬಲ್ಲಂಡ ಕೊಲ್ಲಿರ ವಿರುದ್ಧ 2-1 ರಿಂದ, ಕರ್ತ ಚಿರ

ತಾತಪಂಡ ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿದವು. ಯುವ ಆಟಗಾರ ಕೀತಿಯಂಡ ಪೂರ್ವಿ ಪೂವಣ್ಣ ಕರ್ನಾಟಕ ಸಬ್ ಜೂನಿಯರ್ ರಾಷ್ಟ್ರೀಯ ತಂಡದ ಆಟಗಾರ ತಂಡದಲ್ಲಿ ಆಟವಾಡಿ ಗಮನ ಸೆಳೆದರು.

ಇಂದಿನ ಪಂದ್ಯಗಳು:

ಮೈದಾನ19 ಕ್ಕೆ ಪೊರಂಗಡ v/s ಮಾದೇಟಿರ

10ಕ್ಕೆ ಮೇದುರ v/s ಕಲ್ಲೆಂಗಡ (ಬೆಳ್ಳೂರ್)

ಕುಂಜಿಲಂಡ v/s ಚಾಮೇರ 1 ಕ್ಕೆ ಪಾರವಂಗಡ v/s ಪಾಲೇಕಂಡ

2 ಕ್ಕೆ ಕಲ್ಲೇಂಗಡ (ನಾಪೋಕ್ಲು) v/s ಚೊಟ್ಟಂಗಡ

3ಕ್ಕೆ ಪುಲ್ಲಂಗಡ v/s ಚೆರುಮಂದಂಡ

ಮೈದಾನ 29ಕ್ಕೆ ನಂದೇಟಿರ v/s ಪಟ್ರಪಂಡ10 ಕ್ಕೆ ಮುಕ್ಕಾಟಿರ (ಮೂವತ್ತೋಕ್ಲು)

v/s ತಂಬುಕುತ್ತೀರ11ಕ್ಕೆ ಮಚ್ಚಂಡ v/s ಚಾವಂಡ12 ಕ್ಕೆ ಉದಿಯಂಡ v/s ಬೊಳ್ಳಿಮಾಡ1ಕ್ಕೆ ಕೇಚೆಟ್ಟೀರ v/s ಮಾಪನಮಾಡ2 ಕ್ಕೆ ಕಬ್ಬಚ್ಚೀರ v/s ದೇಯಂಡ3ಕ್ಕೆ ಬಯವಂಡ v/s ತೀತರಮಾಡ

ಮೈದಾನ 39ಕ್ಕೆ ಚೀಯಕ್ ಪೂವಂಡ v/s ಕಾಳಚಂಡ 10ಕ್ಕೆ ಬೊಳಿಯಂಡ v/s ಪೊನ್ನೊಲ್ತಂಡ 11ಕ್ಕೆ ಮೋರ್ಕಂಡ v/s ವಾಂಚಿರ

12ಕ್ಕೆ ಅಪ್ಪಾರಂಡ v/s ತಾಪಂಡ 1ಕ್ಕೆ ಮಂದೆಯಂಡv/s ಚೆಯ್ಯಂಡ (ಮುಗುಟಗೇರಿ)2ಕ್ಕೆ ಪಳಂಗಿಯಂಡ v/s ಬೈರೇಟಿರ 3ಕ್ಕೆನಂದಿನೆರವಂಡ v/ s ತೇಲಪಂಡ

3.30ಕ್ಕೆ ಮುದ್ದಂಡ v/s ಬಟ್ಟಿಯಂಡ