ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಕೊಕ್ಕಂಡ , ಪುತ್ತರೀರ, ಚೊಟ್ಟೆಯನಮಾಡ, ಬಡುವಮಂಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.ಮಾದಂಡ ಮತ್ತು ಕೊಕ್ಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಕ್ಕಂಡ 4 -0 ಅಂತರದ ಗೆಲುವು ಸಾಧಿಸಿತು. ಮೊಣ್ಣಂಡ ಮತ್ತು ಪುತ್ತರೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುತ್ತರೀರ ತಂಡ ಟೈಬ್ರೇಕರ್ ನಲ್ಲಿಗೆಲುವು ಸಾಧಿಸಿತು. ಚೊಟ್ಟೆಯನಮಾಡ ತಂಡವು ತಾತಂಡ ವಿರುದ್ಧ 3 -0 ಅಂತರದ ಗೆಲುವು ಸಾಧಿಸಿದರೆ ಬಡುವಮಂಡ ತಂಡವು ಬಡುವಂಡ ತಂಡದ ವಿರುದ್ಧ 7-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಪೂಲಂಡ ತಂಡವು ಪಾಲಚಂಡ ವಿರುದ್ಧ ನಡೆದ ಸ್ಪರ್ಧೆಯಲ್ಲಿ 0-4 ಅಂತರದಿಂದ ಸೋಲನ್ನನುಭವಿಸಿತು. ಚಂದುರ ಮತ್ತು ಮೂಕಳೇರ ನಡುವೆ ನಡೆದ ಪಂದ್ಯದಲ್ಲಿ ಚಂದುರ 2-1 ಅಂತರದಿಂದ ಗೆಲುವು ಸಾಧಿಸಿತು. ಚಂದಪಂಡ ಮತ್ತು ಬಲ್ಲಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲಚಂಡ 4-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮರುವಂಡ ತಂಡ ಅಯ್ಯಮಂಡ ವಿರುದ್ಧ ಸ್ಪರ್ಧಿಸಿತು. ಮರುವಂಡ 3- 2 ಅಂತರದಿಂದ ಅಯ್ಯಮಂಡ ವಿರುದ್ಧ ಗೆಲುವು ಸಾಧಿಸಿತು ಹಂಚಟ್ಟಿರ ಮತ್ತು ಅಲ್ಲು ಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲ್ಲುಮಾಡ 1-0 ಅಂತರದ ಗೆಲುವು ಸಾಧಿಸಿತು. ಬಾರಿಯಂಡ ಮತ್ತು ಬಲಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾರಿಯಂಡ 6-0 ಅಂತರದ ಭರ್ಜರಿ ಜಯ ಸಾಧಿಸಿತು. ಬೈರಜಂಡ ಮತ್ತು ಪೊನ್ನಚಂಡ ತಂಡಗಳ ನಡೆದ ಪಂದ್ಯದಲ್ಲಿ ಪೊನ್ನಚಂಡ
ಜಯ ಸಾಧಿಸಿತು . ಕುಟ್ಟಂಡ ತಂಡವು ವಾಕ್ಓವರ್ ನಲ್ಲಿ ಮುಂದಿನ ಸುತ್ತು ಪ್ರವೇಶಿಸಿತು. ಮಾಚಂಗಡ ಮತ್ತು ಕುಟ್ಟೆಟ್ಟಿರ ತಂಡಗಳ ನಡೆದ ಪಂದ್ಯದಲ್ಲಿ ಮಾಚಂಗಡ 3-0 ಅಂತರದ ಗೆಲುವು ಸಾಧಿಸಿತು. ಅಜ್ಜಿನಿಕಂಡ ಮತ್ತು ಬಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಬಟ್ಟೀರತಂಡ ಜಯ ಸಾಧಿಸಿತು.ಮೈದಾನ ಮೂರರಲ್ಲಿ ನಡೆದ ಪಂದ್ಯದಲ್ಲಿ ಬೊಟ್ಟಂಗಡ ಕೆಚೆಟ್ಟಿರ ವಿರುದ್ಧ 2-0 ಅಂತರದಿಂದ , ಅಚ್ಚಪಂಡ ಕೂಪದಿರ ವಿರುದ್ಧ 4-1 ಅಂತರದಿಂದ, ಅಳಮೆಂಗಡ ಚೆಟ್ಟಂಗಡ ವಿರುದ್ಧ 6-0 ಅಂತರದಿಂದ, ಮಾಚ ಮಂಡ ಮಾಲೇಟಿರ (ಕುಕ್ಲೂರ್) ವಿರುದ್ಧ 3-0ಅಂತರದಿಂದ, ಮಾಣಿಪಂಡ ಬೊದ್ದಂಡ ವಿರುದ್ಧ 7-0 ಅಂತರದಿಂದ ಗೆಲುವು ಸಾಧಿಸಿತು . ಅಮ್ಮಾಟಂಡ ಕೊರವಂಡ ವಿರುದ್ದ 1-0 ಅಂತರದಲ್ಲಿ ಸಾಧಿಸಿತು. ಮಾಲೇಟಿರ ವಾಕ್ ಓವರ್ ನಿಂದಾಗಿ ಮುಂದಿನ ಸುತ್ತು ಪ್ರವೇಶಿಸಿತು.
ಈದಿನದಪಂದ್ಯಾಟ:
ಮೈದಾನ ಒಂದು
10 ಗಂಟೆಗೆ ಮಂದನೆರವಂಡ - ಚಿಲ್ಲಪಂಡ11 ಗಂಟೆಗೆ ಮಾಚೆಟ್ಟಿರ - ಮುಂಡಂಡ
12 ಗಂಟೆಗೆ ಮೂವೆರ - ಕೊಚೆರ1 ಗಂಟೆಗೆ ಮುರುವಂಡ - ಕುಲ್ಲಚಂಡ
2 ಗಂಟೆಗೆ ಕಲ್ಕಂಡ - ಪುಳಿಯಂಡ3 ಗಂಟೆಗೆ ಪುಟ್ಟಿಚಂಡ - ಬೊಳ್ಳರ್ಪಂಡ
ಮೈದಾನ ಎರಡು
9 ಗಂಟೆಗೆ ಪಾಲಂಗಟ್ಟಿರ - ಕೋಡಿರ10 ಗಂಟೆಗೆ ಪುಚ್ಚಿಮಾಡ - ಕೈಪೆಟ್ಟಿರ
11 ಗಂಟೆಗೆ ಚಿಂಡಮಾಡ - ಕಾಂಜಿತಂಡ12 ಗಂಟೆಗೆ ಅಪ್ಪುಮಣಿಯಂಡ - ಗೀಜಿಗಂಡ
1 ಗಂಟೆಗೆ ಕೆಟೋಳಿರ - ಸರ್ಕಂಡ2 ಗಂಟೆಗೆ ಕಲ್ಲಂಗಡ - ಚೋಕಿರ
3 ಗಂಟೆಗೆ ಅಂಗೇರಿರ (ಚೆಟ್ಟಿಮಾಡ) - ಅಮ್ಮಂಡಮೈದಾನ ಮೂರು
9 ಗಂಟೆಗೆ ಪೆರಿಯಂಡ - ಮೂಕಂಡ10 ಗಂಟೆಗೆ ನಂಬುಡಮಾಡ - ಪೊನ್ನಕಚಿರ
11 ಗಂಟೆಗೆ ತಿರುಟೆರ - ಮಿಣ್ಣಂಡ12 ಗಂಟೆಗೆ ತೆಕ್ಕಡ - ಅಮ್ಮೆಕಂಡ
1 ಗಂಟೆಗೆ ಬಳ್ಳಾರಂಡ - ಗಂಡಂಗಡ