ಕೊಡವ ಕೌಟುಂಬಿಕ ಹಾಕಿ: ಟೈ ಬ್ರೇಕರ್‌ನಲ್ಲಿ ಕುಲ್ಲಚಂಡ ತಂಡ 6-5ರ ಗೆಲವು

| Published : Apr 17 2024, 01:22 AM IST

ಕೊಡವ ಕೌಟುಂಬಿಕ ಹಾಕಿ: ಟೈ ಬ್ರೇಕರ್‌ನಲ್ಲಿ ಕುಲ್ಲಚಂಡ ತಂಡ 6-5ರ ಗೆಲವು
Share this Article
  • FB
  • TW
  • Linkdin
  • Email

ಸಾರಾಂಶ

ಚೆರಿಯ ಪರಂಬು ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಉತ್ಸವದಲ್ಲಿ ಮಂಗಳವಾರ ಕುಲ್ಲಚಂಡ ಮತ್ತು ಪುಟ್ಟಿಚಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ನಂತರ ನಡೆದ ಟೈ ಬ್ರೇಕರ್ ನಲ್ಲಿ ಕುಲ್ಲಚಂಡ 6-5 ರ ಮುನ್ನಡೆಯೊಂದಿಗೆ ಮುಂದಿನ ಸುತ್ತು ಪ್ರವೇಶಿಸಿತು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬು ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಉತ್ಸವದ ಮಂಗಳವಾರದ ಪಂದ್ಯಗಳಲ್ಲಿ ಬಿದ್ದಂಡ, ಚೋಯಮಾದಂಡ, ಕುಲ್ಲಚಂಡ, ಪಾಡೆಯಂಡ, ಮೇರಿಯಂಡ ಕರಿನೆರವಂಡ ತಂಡಗಳು ಮುನ್ನಡೆ ಸಾಧಿಸಿದವು.

ದಿನದ ಮೊದಲ ಪಂದ್ಯದಲ್ಲಿ ಬಿದ್ದಂಡ ಮೇಕೆರಿರ ವಿರುದ್ಧ 1-0 ಅಂತರದ ಜಯ ಗಳಿಸಿದರೆ ಚೋಯಮಾಡಂಡ ಪಟ್ಟಡ ವಿರುದ್ಧ -1 0 ಅಂತರದ ಜಯ ಗಳಿಸಿತು. ಕುಲ್ಲಚಂಡ ಮತ್ತು ಪುಟ್ಟಿಚಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು ನಂತರ ನಡೆದ ಟೈ ಬ್ರೇಕರ್ ನಲ್ಲಿ ಕುಲ್ಲಚಂಡ 6-5 ರ ಮುನ್ನಡೆಯೊಂದಿಗೆ ಮುಂದಿನ ಸುತ್ತು ಪ್ರವೇಶಿಸಿತು.

ಮಲ್ಲಂಗಡ ಮತ್ತು ಪಾಡೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಾಡೆಯಂಡ 5-1 ರ ಮುನ್ನಡೆ ಸಾಧಿಸಿತು. ಮೇರಿಯಂಡ ಕೋಟೆರ ವಿರುದ್ಧ 2-1ಅಂತರದ ಜಯ ಗಳಿಸಿದರೆ ಕರಿನೆರವಂಡ ಮಲ್ಲಮಾಡ ವಿರುದ್ಧ 3-0 ಅಂತರದ ಜಯ ಗಳಿಸಿತು. ಬೊಟ್ಟೋಳಂಡ ಚೊಟ್ಟೇರ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿತು.

ಬೊವ್ವೇರಿಯಂಡ ಚಿಮ್ಮಣಮಾಡ ವಿರುದ್ಧ 3-1ರ ಅಂತರದಿಂದ, ನೆರವಂಡ ಕೊಂಗಂಡ ವಿರುದ್ಧ 1-0 ಅಂತರದಿಂದ, ಅಪ್ಪನೆರವಂಡ ಗಂದಂಗಡ ವಿರುದ್ಧ 4 -1 ಅಂತರದಿಂದ ಗೆಲವು ಸಾಧಿಸಿದವು. ಕಲಿಯಂಡ ಮಂಡೀರ (ನೆಲಜಿ) ವಿರುದ್ಧ 4-0 ಅಂತರದಿಂದ ಜಯ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು.

................

ಇಂದಿನ ಪಂದ್ಯಗಳು

ಮೈದಾನ 1

9 ಗಂಟೆಗೆ: ಸಣ್ಣುವಂಡ-ಐಚಂಡ

10 ಗಂಟೆಗೆ: ಮುದ್ದಂಡ-ಚೇಂದೀರ

11 ಗಂಟೆಗೆ: ಕೊಲ್ಲಿರ-ಮುಂಡಚಾಡೀರ

2 ಗಂಟೆಗೆ: ಪಳಂಗಂಡ-ಕಡೇಮಾಡ

3 ಗಂಟೆಗೆ: ಮೇರಿಯಂಡ-ಬಾರಿಯಂಡಮೈದಾನ 2

9 ಗಂಟೆಗೆ: ಕುಟ್ಟಂಡ-ಕನ್ನಂಡ

10 ಗಂಟೆಗೆ: ಸೋಮೇಯಂಡ-ಮಾತಾರಂಡ

1 ಗಂಟೆಗೆ: ತೀತಿಮಾಡ-ನಂಬುಡಮಾಡ

2 ಗಂಟೆಗೆ: ನಾಪಂಡ-ಮನೆಯಪಂಡ