ಕೌಟುಂಬಿಕ ಹಾಕಿ: ಮುಕ್ಕಾಟಿರ ಸೇರಿ ಏಳು ತಂಡಗಳಿಗೆ ಗೆಲವು

| Published : Apr 23 2024, 12:45 AM IST

ಸಾರಾಂಶ

ಮುಕ್ಕಾಟಿರ (ಬೋಂದ) ತಂಡವು ಅಮ್ಮಣಿಚಂಡ ತಂಡದ ವಿರುದ್ಧ 2-1ರಲ್ಲಿ ಜಯ ಗಳಿಸಿತು. ಅರೆಯಡ, ನೆಲ್ಲಮಕ್ಕಡ ವಿರುದ್ಧ 4-1ರಲ್ಲಿ ಗೆಲುವು ಸಾಧಿಸಿತು.

ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಸೋಮವಾರದ ಪಂದ್ಯಗಳಲ್ಲಿ ಮುಕ್ಕಾಟಿರ (ಬೋಂದ ), ನೆಲ್ಲಮಕ್ಕಡ, ನೆರವಂಡ, ಅಂಜಪರವಂಡ, ಕೂತಂಡ, ಕಲಿಯಂಡ, ಕುಪ್ಪಂಡ ತಂಡಗಳು ಮುನ್ನಡೆ ಸಾಧಿಸಿದವು.ಮುಕ್ಕಾಟಿರ (ಬೋಂದ) ತಂಡವು ಅಮ್ಮಣಿಚಂಡ ತಂಡದ ವಿರುದ್ಧ 2-1ರಲ್ಲಿ ಜಯ ಗಳಿಸಿತು. ಅರೆಯಡ, ನೆಲ್ಲಮಕ್ಕಡ ವಿರುದ್ಧ 4-1ರಲ್ಲಿ ಗೆಲುವು ಸಾಧಿಸಿತು. ನೆರವಂಡ ಮತ್ತು ಮೇಚಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆರವಂಡ 1-0 ಅಂತರದಿಂದ ಗೆಲುವು ಸಾಧಿಸಿದರೆ, ಅಂಜಪರವಂಡ ಮತ್ತು ಪೆಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಪರವಂಡ 4-1 ರಲ್ಲಿ ಗೆಲವು ಸಾಧಿಸಿತು. ಕೂತಂಡ ತಂಡಕ್ಕೆ ಬೊಳ್ಳಂಡ ವಿರುದ್ಧ 3-0 ಅಂತರದ ಜಯ ಲಭಿಸಿತು. ಕಲಿಯಂಡ ತಂಡಕ್ಕೆ ಮಾತ್ರಂಡ ವಿರುದ್ಧ 2-0 ಅಂತರದ ಗೆಲುವು ಸಿಕ್ಕರೆ, ಕುಪ್ಪಂಡ ತಂಡಕ್ಕೆ ನಾಪಂಡ ವಿರುದ್ಧ 1-0 ಅಂತರದ ಜಯ ಲಭಿಸಿತು.

ಇಂದಿನ ಪಂದ್ಯಗಳುಮೈದಾನ ಒಂದು 10 ಗಂಟೆಗೆ ಅಂಜಪರವಂಡ-ನೆಲ್ಲಮಕ್ಕಡ11 ಗಂಟೆಗೆ ಕೂತಂಡ-ಪುದಿಯೊಕ್ಕಡ12 ಗಂಟೆಗೆ ಮುಕ್ಕಾಟಿರ(ಬೋಂದ)-ನೆರವಂಡ1 ಗಂಟೆಗೆ ಕಲಿಯಂಡ-ಕುಪ್ಪಂಡ(ಕೈಕೇರಿ)