ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯ ಗುರುವಾರದ ಪಂದ್ಯಗಳಲ್ಲಿ ನೆಲ್ಲಮಕ್ಕಡ, ಕುಪ್ಪಂಡ, ಅರೆಯಡ, ಕುಲ್ಲೇಟಿರ, ಅಂಜಪರವಂಡ, ಕೊಕ್ಕಂಡ ತಂಡಗಳು ಜಯಭೇರಿ ಬಾರಿಸಿದವು.
ನೆಲ್ಲಮಕ್ಕಡ ಮತ್ತು ಕರ್ತಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ 3- 0 ಅಂತರದಿಂದ ಕರ್ತಮಾಡ ವಿರುದ್ಧ ಭರ್ಜರಿ ಜಯ ಗಳಿಸಿತು. ಕುಪ್ಪಮಡ (ಕೈಕೇರಿ) ಬೊಪ್ಪಂಡ ವಿರುದ್ಧ 4- 0 ಅಂತರದಲ್ಲಿ ಗೆಲುವು ಸಾಧಿಸಿತು.ಅರೆಯಡ ಕರೋಟಿರ ವಿರುದ್ಧ 5-4 ಅಂತರದಲ್ಲಿ ಟೈ ಬ್ರೇಕರ್ ನಲ್ಲಿ ಗೆಲವು ಸಾಧಿಸಿತು. ಕುಲ್ಲೇಟಿರ ಕಲಿಯಾಟಂಡ ವಿರುದ್ಧ 4-0 ಅಂತರದಲ್ಲಿ ಗೆಲವು ದಾಖಲಿಸಿತು. ಅಂಜಪರವಂಡ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಪರವಂಡ 3-1 ಅಂತರದ ಗೆಲವು ದಾಖಲಿಸಿತು.
ಕೊಕ್ಕಂಡ ಮುಕ್ಕಾಟಿರ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿತು. ಚೆರುಮಮದಂಡ ಬಲ್ಲಚಂಡ ವಿರುದ್ಧ ಟೈ ಬ್ರೇಕರ್ ನಲ್ಲಿ 5-4 ಅಂತರದಿಂದ ಜಯ ದಾಖಲಿಸಿದರೆ ಮಂಡೇಪಂಡ ನಾಗಂಡ ವಿರುದ್ಧ 5-0 ಅಂತರದ ಗೆಲವು ದಾಖಲಿಸಿತು. ಪೆಮ್ಮಂಡ ತಂಡಕ್ಕೆ ಪಾಂಡಂಡ ವಿರುದ್ಧ 2-0 ಅಂತರದ ಜಯ ಲಭಿಸಿತು.ಐನಂಡ ಮುರುವಂಡ ವಿರುದ್ಧ 3-1 ಅಂತರದಿಂದ ಗೆದ್ದರೆ ಕೂತಂಡ ಚಿಂದಮಾಡ ತಂಡದ ವಿರುದ್ಧ 2-0 ಅಂತರದಿಂದ ಗೆಲವು ಸಾಧಿಸಿತು.ಬಾಳೆಯಡ ಚೌರೀರ ವಿರುದ್ಧ 3-1 ರಲ್ಲಿ, ಬೊಳ್ಳಂಡ ಮೂಕಂಡ ವಿರುದ್ಧ 1-0 ರಲ್ಲಿ, ಚೀಯಕಪೂವಂಡ ಕಳ್ಳಿಚಂಡ ವಿರುದ್ಧ 3-2 ರಲ್ಲಿ ಜಯ ಸಾಧಿಸಿತು.
...............ಇಂದಿನ ಪಂದ್ಯಗಳು
ಮೈದಾನ 19 ಗಂಟೆಗೆ: ಮಮಡೆಟಿರ-ಪುಲ್ಲಂಗಡ
10 ಗಂಟೆಗೆ: ಚಂದುರ-ಪುಲಿಯಂಗಡ11 ಗಂಟೆಗೆ: ಮಾಣಿಚಂಡ-ಕೋಡಿಮಣಿಯಂಡ
12 ಗಂಟೆಗೆ: ಚೆಟ್ಟಂಗಡ-ಕೊಟ್ಟಂಗಡ1 ಗಂಟೆಗೆ: ಮುಕ್ಕಾಟಿರ (ಬೋಂದ)-ಬಿದ್ದಂಡ
2 ಗಂಟೆಗೆ: ಕುಲ್ಲಚಂಡ-ಮೇಚಿಯಂಡ3 ಗಂಟೆಗೆ: ಬೊಟ್ಟೋಳಂಡ-ನೆರವಂಡ
..............ಮೈದಾನ 2
9 ಗಂಟೆಗೆ: ಮಣವಟ್ಟೀರ-ಚೆಪ್ಪುಡಿರ10 ಗಂಟೆಗೆ: ಮಾಚಿಮಂಡ-ಚೇನಂಡ
11 ಗಂಟೆಗೆ: ತೀತಮಾಡ-ಚೆಕ್ಕೇರ1 ಗಂಟೆಗೆ: ಕಂಬೀರಂಡ-ಕೊಂಗೇಟಿರ
2 ಗಂಟೆಗೆ: ಚೇಂದಂಡ-ಚೀಯಕಪೂವಂಡ3 ಗಂಟೆಗೆ: ಚೋಯಮಾದಂಡ-ಚೆರುಮಂದಂಡ