ಕೊಡಗಿನಲ್ಲಿ ಹುಲಿ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಬಲಿ

| Published : Apr 19 2024, 01:01 AM IST / Updated: Apr 19 2024, 08:39 AM IST

ಕೊಡಗಿನಲ್ಲಿ ಹುಲಿ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಗುರುವಾರ ಸಂಜೆ ಮತ್ತೆ ಹುಲಿ ದಾಳಿ ನಡೆದು ಅಸ್ಸಾಂ ಮೂಲದ ಕಾರ್ಮಿಕ ಮುಝೀದ್ ರೆಹಮಾನ್ (55) ಮೃತಪಟ್ಟರು.  

 ಮಡಿಕೇರಿ :  ಕೊಡಗು ಜಿಲ್ಲೆಯಲ್ಲಿ ಮತ್ತೆ ವ್ಯಾಘ್ರನ ಅಟ್ಟಹಾಸ ಮುಂದುವರಿದಿದ್ದು, ಹುಲಿ ದಾಳಿಗೆ ಕಾರ್ಮಿಕ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದಿದೆ. ಅಸ್ಸಾಂ ಮೂಲದ ಕಾರ್ಮಿಕ ಮುಝೀದ್ ರೆಹಮಾನ್ (55) ಮೃತ ದುರ್ದೈವಿ.

ಗುರುವಾರ ಸಂಜೆ ದನ ಮೇಯಿಸುತ್ತಿದ್ದಾಗ ಏಕಾಏಕಿ ಬಂದ ಹುಲಿ ರೆಹಮಾನ್ ಮೇಲೆ ದಾಳಿ ನಡೆಸಿ ಕುತ್ತಿಗೆ ಹಾಗೂ ತಲೆಬಾಗಕ್ಕೆ ಗಾಯಗೊಳಿಸಿತು. ಪರಿಣಾಮ ರೆಹಮಾನ್ ಸ್ಥಳದಲ್ಲಿ ಮೃತಪಟ್ಟರು.

ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಹಲವು ಕಡೆಗಳಲ್ಲಿ ಹುಲಿ ಹಾವಳಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹುದಿಕೇರಿ ಸಮೀಪದ ಹರಿಹರದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯಿಂದ ಹುಲಿ ಸೆರೆಗೆ ಕಾರ್ಯಾಚರಣೆ ಕೂಡ ಮಾಡಲಾಗಿತ್ತು. ಇದೀಗ ಹುಲಿ ಮತ್ತೊಂದು ಕಡೆಯಲ್ಲಿ ವ್ಯಕ್ತಿಯನ್ನೇ ಬಲಿ ಪಡೆದಿದ್ದು, ಈ ಭಾಗದ ಜನರು ಆತಂಕಗೊಂಡಿದ್ದಾರೆ.