ದುಗ್ಗಳ ಸದಾನಂದಕನ್ನಡಪ್ರಭವಾರ್ತೆ ನಾಪೋಕ್ಲು

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಬುಧವಾರ ಸುಳ್ಳಿಮಾಡ ಅಪ್ಪಚೆಟ್ಟೋಳಂಡ ತಂಡದ ವಿರುದ್ಧ 6-0 ಅಂತರದಿಂದ ಭರ್ಜರಿ ಗೆಲವು ಸಾಧಿಸಿತು. ಸುಳ್ಳಿಮಾಡ ತಂಡದ ಆಟಗಾರರಾದ ಸಜಿತ್-3, ದಮನ್-1, ಆಶಿಕ್ ಪೂಣಚ್ಚ-1ದೀಪಕ್ ಮೊಣ್ಣಪ್ಪ-1.ಗೋಲುಗಳಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಮತ್ತೊಂದು ಪಂದ್ಯದಲ್ಲಿ ಕೋಟೇರ ಮುಕ್ಕಾಟಿರ (ಕುಂಬಳದಾಳು) ತಂಡದವಿರುದ್ಧ 5-0 ಅಂತರದ ಗೆಲುವು ಪಡೆದರೆ , ಪೆಮ್ಮಂಡ ದಾಸಂಡ ವಿರುದ್ಧ 5-1ರಿಂದ ಗೆಲವು ಸಾಧಿಸಿತು.

ಉಳಿದಂತೆ ಕೊಂಗಂಡ ಮತ್ತು ಮೊಳ್ಳೇರ ವಿರುದ್ಧ 3-1ರಿಂದ, ನಾಪಂಡ ಮತ್ತು ಮಚ್ಚುರ ವಿರುದ್ಧ 4-0ರಿಂದ, ಕುಂಡ್ಯೋಳಂಡ ಬಾಚಮಂಡ ವಿರುದ್ಧ 4 -0 ಅಂತರದಿಂದ, ಚೇಂದಿರ ಮತ್ತು ಚೊಟ್ಟೆಯಂಡ ವಿರುದ್ಧ 2-0 ರಿಂದ, ಮಲ್ಲಂಡ ಚೆನ್ನಪಂಡ ವಿರುದ್ಧ 2-0 ಅಂತರದಿಂದ,, ಮಾದೆಯಂಡ ಮಂಡೀರ(ನೆಲಜಿ) ವಿರುದ್ಧ 2-1ರಿಂದ,ಮಂಡೀರ (ಮೂವತೋಕ್ಲು) ಬಾಚಳ್ಳೀರ ವಿರುದ್ಧ 2-0 ಅಂತರದಿಂದ, ಕಾಳೆಂಗಡ ವಾಟೇರಿರ ವಿರುದ್ಧ 2-1ರಿಂದ, ಅಲ್ಲಪಂಡ ತೀತಿಮಾಡ ವಿರುದ್ಧ 2-1ರಿಂದ, ಚೌರೀರ (ಹೊದ್ದೂರ್) ಚೇಂದ್ರಿಮಾಡ (ನಾಂಗಾಲ) ವಿರುದ್ಧ 3-0 ಅಂತರದಿಂದ, ಚೌರೀರ (ಹೊದವಾಡ) ಅಜ್ಜಿನಂಡ ವಿರುದ್ಧ 3-2 ಅಂತರದಿಂದ, ಐತಿಚಂಡ ಪುಗ್ಗೇರ ವಿರುದ್ದ 3-1 ಅಂತರದಿಂದ, ಮೂಕಳಮಾಡ ಪೋರಂಗಡ ವಿರುದ್ದ 3-0 ಅಂತರದಿಂದ ಗೆಲುವು ಸಾಧಿಸಿತು.

ಚೆಯ್ಯಂಡ ಮತ್ತು ಕಾಡ್ಯಮಾಡ ತಂಡಗಳನಡುವೆ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲರಾದವು. ನಂತರ ಟೈ ಬ್ರೇಕರ್ ನಲ್ಲಿ ಕಾಡ್ಯಮಾಡ 4-2 ರಿಂದ ಗೆಲುವು ಸಾಧಿಸಿತು. ಅಪ್ಪಂಡೇರಂಡ ಮತ್ತು ಮೇದುರ ತಂಡಗಳೂ 2-2 ಗೋಲುಗಳ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಅಪ್ಪಡೇರಂಡ 4-3 ಅಂತರದಿಂದ ಜಯಸಾಧಿಸಿತು. ಮತ್ರಂಡ ಮತ್ತು ಕಾಂಡೇರ ವಿರುದ್ಧ 2-0ರಿಂದ, ಮೇವಡ ಕಲ್ಲುಮಾಡಂಡ ವಿರುದ್ದ4-2ರಿಂದ, ಕಂಗಾಂಡ ಜಮ್ಮಡ ವಿರುದ್ದ 2-0 ಅಂತರದಿಂದ ಜಯಸಾಧಿಸಿದವು.76 ವರ್ಷದ ಬಾಚಮಂಡ ರಾಜ ಪೂವಣ್ಣ ಬಾಚಮಂಡ ಮತ್ತು ಕುಂಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಾಚಮಂಡ ತಂಡದ ಪರವಾಗಿ ಆಟವಾಡಿ ಗಮನಸೆಳೆದರು ಮತ್ತೋರ್ವ ಆಟಗಾರ್ತಿ ಕಲಿಯಂಡ ಸ್ಮಿತಾ ಬಾಚಮಂಡ ತಂಡದ ಪರವಾಗಿ ಆಟವಾಡಿದರು.


ಇಂದಿನ ಪಂದ್ಯಗಳು: 10 ಕ್ಕೆ ಉದಿಯಂಡ v/s ಕೇಚೆಟ್ಟೀರ11ಕ್ಕೆ ನಾಗಂಡ v/s ಕಬ್ಬಚ್ಚೀರ12ಕ್ಕೆ ತೀತರಮಾಡ v/s ಬಲ್ಯಾಟಂಡ1ಕ್ಕೆ ನೆರ್ಪಂಡ v/s ಚೀಯಕ್ಪೂವಂಡ2ಕ್ಕೆ ಚೋಳಂಡ v/s ಕಾಯಪಂಡ3 ಕ್ಕೆ ಕಳ್ಳಿಚಂಡ v/s ಅಲ್ತಂಡಮೈದಾನ 29ಕ್ಕೆ ಮೇರಿಯಂಡ v/s ಅಪ್ಪಾರಂಡ10 ಕ್ಕೆ ಬೊಳಕಾರಂಡ v/s ಅರೆಯಡ11ಕ್ಕೆ ಕರಿನೆರವಂಡ v/s ಪುಲ್ಲಂಗಡ 12ಕ್ಕೆ ತೇಲಪಂಡ v/s ನಾಳಿಯಂಡ1ಕ್ಕೆ ಪರದಂಡ v/s ಮುದ್ದಂಡ2ಕ್ಕೆ ಇಟ್ಟೀರ v/s ಪೊನ್ನೋಲ್ತಂಡ 3 ಕ್ಕೆ ವಾಂಚಿರ v/s ಐಚಂಡ ಮೈದಾನ 39ಕ್ಕೆ ಚಾಮೇರ v/s ಕಾಂಡಂಡ10 ಕ್ಕೆ ಮಂದೇಯಂಡ v/s ಅವರೆಮಾದಂಡ11ಕ್ಕೆ ಮಚ್ಚಾರಂಡ v/s ಪಳಂಗಿಯಂಡ12ಕ್ಕೆ ಕಾಳೆಯಂಡ v/s ಪಾಲೆಕಂಡ 1ಕ್ಕೆ ಚೆಂಬಾಂಡ v/s ನಂದೇಟಿರ2ಕ್ಕೆ ಮುಕ್ಕಾಟಿರ (ಮೂವತ್ತೋಕ್ಲು) v/s ಪೊರ್ಕೊಂಡ