ಡಿ. 26ರಿಂದ 30ರ ವರೆಗೆ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಮೂರ್ನಾಡಿನ ದಿ. ಬಾಚೇಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್ ಸಂಸ್ಥೆ, ಎಂ.ಬಾಡಗ ಸ್ಫೋರ್ಟ್ಸ್ ರಿಕ್ರಿಷೇಶನ್ ಸಂಸ್ಥೆ, ಮೂರ್ನಾಡು ವಿದ್ಯಾಸಂಸ್ಥೆ ಸಹಕಾರೊಂದಿಗೆ ಡಿ.26ರಿಂದ 30 ರವರೆಗೆ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಮೂರ್ನಾಡಿನ ದಿ.ಬಾಚೆಟ್ಟೀರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಡಂಡ ಕೆ.ಬೋಪಣ್ಣ ತಿಳಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಲ್ಲಿ ಕೊಡವ ಹಾಕಿ ಹಬ್ಬದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸುಮಾರು 13 ತಂಡಗಳು ಈ ಚಾಂಪಿಯನ್ಸ್ ಟ್ರೋಫಿಗಾಗಿ ಸೆಣಸಾಟ ನಡೆಸುತ್ತಿದೆ. 4 ಪೋಲ್‌ಗಳಾಗಿ ವಿಂಗಡಿಸಿದ್ದು, ಪ್ರತಿ ಪಂದ್ಯವು ಲೀಗ್ ಮಾದರಿಯಲ್ಲಿ ನಡೆಯಲಿದೆ. ನಂತರ 4 ಪೋಲ್‌ನ ಅಗ್ರ 4 ತಂಡಗಳು ಸೆಮಿಫೈನಲ್‌ನಲ್ಲಿ ಪಾಲ್ಗೊಳ್ಳುತ್ತದೆ. ಸೆಮಿಫೈನಲ್ ನಾಕೌಟ್ ಮಾದರಿಯಲ್ಲಿ ನಡೆಯಲಿದೆ ಎಂದು ವಿವರಿಸಿದರು.ಅಕಾಡೆಮಿ ಗೌರವ ಕಾರ್ಯದರ್ಶಿ ಕುಲ್ಲೇಟೀರ ಅರುಣ್‌ಬೇಬ ಮಾತನಾಡಿ, ಪ್ರಥಮ ಸ್ಥಾನ ಪಡೆದ ತಂಡಕ್ಕೆ 2 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ಸೆಮಿಫೈನಲ್ ಅರ್ಹತೆ ಪಡೆದ ತಂಡಕ್ಕೆ ತಲಾ 50, 000 ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದ ಪ್ರತಿ ತಂಡಕ್ಕೂ ತಲಾ 25, 000 ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಜತೆಗೆ ಉತ್ತಮ ಪಾರ್ವರ್ಡ್, ಉತ್ತಮ ಫುಲ್ ಬ್ಯಾಕ್, ಉತ್ತಮ ಆಫ್, ಅತ್ಯೂತ್ತಮ ಗೋಲ್ ಕೀಪರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.1997 ರಲ್ಲಿ ಕರಡದಲ್ಲಿ ಆರಂಭವಾದ ಮೊದಲ ಹಾಕಿ ಹಬ್ಬದಲ್ಲಿ ತಾಂತ್ರಿಕ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದವರು ಹಾಗೂ ವೀಕ್ಷಕ ವಿವರಣೆಗಾರರನ್ನು ಗುರುತಿಸಿ ಉದ್ಘಾಟನಾ ಪಂದ್ಯದ ದಿನದಂದು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಅಂದು 3 ಬಾರಿಯ ಒಲಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ ತವರು ಮನೆ(ಗುಡ್ಡಂಡ), ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಪಾಂಡಂಡ ಪುಷ್ಪಾ ಸುಬ್ಬಯ್ಯ ತವರು ಮನೆ(ಅಮ್ಮಾಟಂಡ) ಅಲ್ಲದೆ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ. ಅಲ್ಲದೇ, ಕಳೆದ 25 ವರ್ಷ ಹಾಕಿ ಹಬ್ಬವನ್ನು ಶ್ರಮವಹಿಸಿ ಆಯೋಜಿಸಿರುವ 25 ಕೊಡವ ಕುಟುಂಬದ ಅಧ್ಯಕ್ಷರು, ಪಟ್ಟೆದಾರರನ್ನು ಅಂತಿಮ ಪಂದ್ಯಾಟದ ದಿನದಂದು ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.ಕೊಡವ ಹಾಕಿ ಅಕಾಡೆಮಿ ಮಡಿಕೇರಿ ತಾಲೂಕು ಉಪಾಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ವಿರಾಜಪೇಟೆ ತಾಲೂಕು ಉಪಾಧ್ಯಕ್ಷ ಕೂತಂಡ ಸುರೇಶ್ ಅಪ್ಪಯ್ಯ, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಬಾಚಿನಾಡಂಡ ಪ್ರದೀಪ್ ಪೂಣಚ್ಚ, ನಿರ್ದೇಶಕರಾದ ಮುಕ್ಕಾಟೀರ ಸೋಮಯ್ಯ ಸುದ್ದಿಗೋಷ್ಠಿಯಲ್ಲಿದ್ದರು.