ಸಾರಾಂಶ
ಕ್ರಿಕೆಟ್ ಪಂದ್ಯಾಟವು ಇದೇ ವರ್ಷದ ಏಪ್ರಿಲ್ ತಿಂಗಳ 27ರಿಂದ ಮೇ 4 ವರೆಗೆ ಕೊಡವ ಜಮ್ಮ ಮುಸ್ಲಿಂ ಸಮುದಾಯದ ನಡುವೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಗೂರು ಚೆನಿವಾಡ ಗ್ರಾಮದ ಆಲೀರ ಕುಟುಂಬದ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾಟವು ಇದೇ ವರ್ಷದ ಏಪ್ರಿಲ್ ತಿಂಗಳ 27 ರಿಂದ ಮೇ 4ರ ವರೆಗೆ ಕೊಡವ ಜಮ್ಮ ಮುಸ್ಲಿಂ ಸಮುದಾಯದ ನಡುವೆ ನಡೆಯಲಿದೆ ಎಂದು ಆಲೀರ ಕುಟುಂಬದ ಅಧ್ಯಕ್ಷ ಆಲೀರ ಪವಿಲ್ ಉಸ್ಮಾನ್ ತಿಳಿಸಿದ್ದಾರೆ.ಪೊನ್ನಂಪೇಟೆ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ 80 ರಿಂದ 100 ತಂಡಗಳು ಭಾಗವಹಿಸಲಿವೆ ತಿಳಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ಕೊಡವ ಜಮ್ಮ ಮುಸ್ಲಿಂ ಸಮುದಾಯದ ತಂಡಗಳು ಫೆಬ್ರವರಿ 28 ರಿಂದ ಮಾರ್ಚ್ 31 ರ ಒಳಗಾಗಿ 6366292029 ಹಾಗೂ 7259240557 ಸಂಖ್ಯೆಗೆ ಕರೆ ಮಾಡಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪಂದ್ಯಾವಳಿಯ ಸಂಚಾಲಕರಾದ ಆಲೀರ ಕೆ ನಸೀರ್ ಬಾಜಿ ತಿಳಿಸಿದರು.ಈ ಪಂದ್ಯಾಟದಲ್ಲಿ ಸಮುದಾಯದ ಹೆಚ್ಚು ಕುಟುಂಬಗಳು ಭಾಗವಹಿಸಬೇಕಾಗಿ ಮತ್ತು ಕ್ರಿಕೆಟ್ ಪಂದ್ಯಾಟದ ಲಾಂಛನವನ್ನು ಅತಿ ಶೀಘ್ರದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ ಅವರ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದು ಉಪಾಧ್ಯಕ್ಷರಾದ ಆಲೀರ ಎಂ ರಶೀದ್ ತಿಳಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಲೀರ ಉಸ್ಮಾನ್ ಆಲ್ವಿ, ತಕ್ಕ ಮುಖ್ಯಸ್ಥ ಆಲೀರ ಎರ್ಮು ಹಾಜಿ ಹಾಗೂ ತಕ್ಕ ಮುಖ್ಯಸ್ಥ ಆಲೀರ ಎ ಕುಟ್ಟಿ ಆಲಿ ಉಪಸ್ಥಿತರಿದ್ದರು.