ಸಾರಾಂಶ
ಬ್ರಾಹ್ಮಿ ಮೂಹುರ್ತದಲ್ಲಿ ಗಂಗಾಸ್ಥಳಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಹೋಗಿ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ಸಿದ್ರಾಂಪುರ ಗ್ರಾಮದಲ್ಲಿ 35ನೇ ವರ್ಷದ ಕೊಡೆಕಲ್ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ಬೆಳಗ್ಗೆ ಬ್ರಾಹ್ಮಿ ಮೂಹುರ್ತದಲ್ಲಿ ಗಂಗಾಸ್ಥಳಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಕುಂಭ-ಕಳಸ ಹೊತ್ತ ಮಹಿಳೆಯರು ಭಾಗವಹಿಸಿದ್ದರು. ಬಸವೇಶ್ವರರಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನ ಜರುಗಿದವು. ಇದೇ ವೇಳೆ 11ಸಾಮೂಹಿಕ ವಿವಾಹಗಳು, ಬೂದುಗುಂಪಾ ವಿರಕ್ತಮಠದ ಸಿದ್ದೇಶ್ವರ ಶ್ರೀಗಳು ಹಾಗೂ ಚನ್ನಳ್ಳಿಯ ಚನ್ನವೀರಯ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆದವು.
ಸಂಜೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಸಾವಿರಾರು ಭಕ್ತರ ಮಧ್ಯೆ ಕೊಡೆಕಲ್ ಬಸವೇಶ್ವರರ ರಥೋತ್ಸವ ನಡೆಯಿತು. ಭಕ್ತರು ಬಾಳೆಹಣ್ಣು, ಉತ್ತತ್ತಿ ರಥಕ್ಕೆ ಸಮರ್ಪಿಸಿ ಈಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು. ನಂತರ ಜಾತ್ರಾ ಮಹೋತ್ಸವ ನಡೆಯಿತು.ಶಾಸಕ ಹಂಪನಗೌಡ ಬಾದರ್ಲಿ, ಮುಖಂಡರಾದ ಸೋಮನಗೌಡ ಪೊಲೀಸ್ ಪಾಟೀಲ್, ಹಳ್ಳಿ ಅಮರೇಶ, ಸೋಮನಗೌಡ ಉದ್ಯಾಳ, ಬಸವರಾಜ ನವಲಿ, ವೀರೇಶ ಪಾಟೀಲ್, ಹೆಚ್.ಪಂಪಾಪತಿ ವಕೀಲ, ಬಸವರಾಜ ತಳ್ಳೂರು ಸೇರಿ ಅನೇಕರು ಭಾಗವಹಿಸಿದ್ದರು.