ಕೊಲಕಾಡಿ ಶಾಲೆ ಬೇಸಿಗೆ ಶಿಬಿರ ಸಮಾರೋಪ

| Published : May 13 2024, 12:04 AM IST

ಸಾರಾಂಶ

ಮೂಲ್ಕಿ ಸಮೀಪದ ಪಂಜಿನಡ್ಕದ ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಭಾರತ್ ಸ್ಕೌಟ್ ಆಂಡ್ ಗ್ಯೆಡ್ಸ್‌ ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಸರ್ವೋತ್ತಮ ಅಂಚನ್‌ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದ್ದು ಬೇಸಿಗೆ ಶಿಬಿರದಿಂದ ತರಬೇತಿಯ ಜೊತೆಗೆ ಮಕ್ಕಳ ಹವ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ ಎಂದು ಭಾರತ್ ಸ್ಕೌಟ್ ಆಂಡ್ ಗ್ಯೆಡ್ಸ್‌ ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಸರ್ವೋತ್ತಮ ಅಂಚನ್‌ ಹೇಳಿದ್ದಾರೆ.

ಮೂಲ್ಕಿ ಸಮೀಪದ ಪಂಜಿನಡ್ಕದ ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಜರಗಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನುದಾನಿತ ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢ ಶಾಲೆಯ ಸಂಚಾಲಕ ಗಂಗಾಧರ್ ಶೆಟ್ಟಿ ಬರ್ಕೆ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಅರಿತು ಅವರ ನಿತ್ಯ ಬದುಕಿನಲ್ಲಿ ಶಿಕ್ಷಣದ ಜೊತೆಗೆ ಗುರು ಹಿರಿಯರಲ್ಲಿ ಭಕ್ತಿಯಿಂದ ವ್ಯವಹರಿಸಿ ಸತ್ಪಪ್ರಜೆಗಳಾಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆತ್ತವರ ಪರವಾಗಿ ಉಪನ್ಯಾಸಕಿ ಶೈಲಜಾ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಬೇಸಿಗೆ ಶಿಬಿರ ಅವರಿಗೆ ಹಿತ ಕೊಡುವ ಜೊತೆಗೆ ಮಕ್ಕಳ ತುಂಟತನದಿಂದ ಹೆತ್ತವರ ಕಷ್ಟ ಹಾಗು ಸಮಸ್ಯೆಗಳಿಗೆ ಉತ್ತಮ ಫಲಿತಾಂಶ ಕೊಟ್ಟಿದೆ ಎಂದು ಹೇಳಿದರು.

ವಿದ್ಯಾಪ್ರಚಾರಿಣಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಶೆಟ್ಟಿ ,ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ನಿವೃತ್ತ ಮುಖ್ಯ ಶಿಕ್ಷಕ ನಾಗಭೂಷಣ ರಾವ್ ಶ್ರೀಮಂತ ಕಾಮತ್ , ಶಿಬಿರಾಧಿಕಾರಿ ವೆಂಕಟರಮಣ ಕಾಮತ್ (ವೆಂಕಿ ಫಲಿಮಾರ್), ಸಂಪನ್ಮೂಲ ವ್ಯಕ್ತಿಗಳಾದ ವರ್ಣಿತ್ ಕಾಮತ್, ಸ್ವಸ್ತಿಕ್ ಆಚಾರ್ಯ ಉಪಸ್ಥಿತರಿದ್ದರು.

ದೀಪಿಕಾ ಶೆಟ್ಟಿ ಶಿಬಿರದ ವರದಿ ಮಂಡಿಸಿದರು. ಕನ್ನಡ ಶಿಕ್ಷಕ ಶಿವಪ್ರಸಾದ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಕರುಣಾಕರ್ ವಂದಿಸಿದರು.