ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದ ಕೋಲಾರಮ್ಮ ದೇವಾಲಯದ ರಸ್ತೆಯ ಸಂಪೂರ್ಣ ಅಭಿವೃದ್ಧಿ ಮಾಡಲು ೭೫ ಲಕ್ಷ ರು. ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಸ್ತೆ ಅಭಿವೃದ್ಧಿ ಕಾಲುದಾರಿ ಸೇರಿದಂತೆ ಕೋಲಾರಮ್ಮ ದೇವಾಲಯದ ಮುಖ್ಯ ರಸ್ತೆ ಕಾಮಗಾರಿಗೆ ೭೫ ಲಕ್ಷ ರುಪಾಯಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ನಗರಸಭೆ ಅಧಿಕಾರಿಗಳೊಂದಿಗೆ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ಮಾತನಾಡಿದರು.ರಸ್ತೆಯನ್ನು ಅಗಲ ಮಾಡಿ ಎರಡು ಬದಿಯಲ್ಲಿಯೂ ಪುಟ್ ಪಾತ್ ನಿರ್ಮಾಣ ಮಾಡಬೇಕು ಕಾಮಗಾರಿಯು ಗುಣಮಟ್ಟ ವಾಗಿರಬೇಕು ಮತ್ತು ಸೂಚಿಸಿರುವ ಎಲ್ಲಾ ಕಾಮಗಾರಿಗಳನ್ನು ಒಂದು ವಾರದ ಒಳಗೆ ಪೂರ್ಣಗೊಳಿಸಿ ನಾನು ಮುಂದಿನ ಸೋಮವಾರ ಮರು ಪರಿಶೀಲನೆಗೆ ಬಂದಾಗ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸರಬೇಕು ಎಂದು ನಗರಸಭಾ ಅಧಿಕಾರಿಗಳಿಗೆ ತಿಳಿಸಿದರು.ಕೋಲಾರಮ್ಮ ದೇವಿಯ ದೇವಾಲಯಕ್ಕೆ ಯಾವುದೇ ಜಾತಿ ಧರ್ಮ ಮತ ಭೇದಭಾವ ಇಲ್ಲದೆ ಸರ್ವರೂ ದೇವಾಲಯಕ್ಕೆ ಪ್ರವೇಶಿಸಬಹುದು ಎಂಬ ನಾಮಫಲಕ ದೇವಾಲಯ ಮುಂಭಾಗದ ಗೇಟ್ ಬಳಿ ಅಳವಡಿಸಬೇಕು ಎಂದು ತಿಳಿಸಿದರು.ಕೋಲಾರಮ್ಮ ದೇವಾಲಯದ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು ಮತ್ತು ಮುಂಭಾಗದಲ್ಲಿ ಅಭಿವೃದ್ಧಿ ಮಾಡಿ ಭಕ್ತಾದಿಗಳಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು, ಚಪ್ಪಲಿ ಸ್ಟ್ಯಾಂಡ್ ಸ್ಥಳವನ್ನು ಬದಲಾಯಿಸಿ ಪಾಕಿಂಗ್ ಮತ್ತು ಚಪ್ಪಲಿ ಸ್ಟ್ಯಾಂಡ್ ಎರಡಕ್ಕೂ ಟೆಂಡರ್ ಪ್ರಕ್ರಿಯೆ ಮಾಡಬೇಕು ಎಂದು ತಿಳಿಸಿದರು.ನಗರಸಭೆ ಆಯುಕ್ತ ಪ್ರಸಾದ್, ಮುಜರಾಯಿ ತಹಸೀಲ್ದಾರ್ ಶ್ರೀನಿವಾಸ ರೆಡ್ಡಿ ಇದ್ದರು.