ಕೊಲ್ಕತ್ತಾ ವೈದ್ಯ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

| Published : Aug 18 2024, 01:55 AM IST

ಸಾರಾಂಶ

ಕೊಲ್ಕತ್ತಾದ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಕೃತ್ಯ ಅಮಾನವೀಯ. ಇಂತಹ ಪೈಶಾಚಿಕ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬೀಳಗಿ ವೈದ್ಯಾಧಿಕಾರಿ ಡಾ.ಸಚಿನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಕೊಲ್ಕತ್ತಾದ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಕೃತ್ಯ ಅಮಾನವೀಯ. ಇಂತಹ ಪೈಶಾಚಿಕ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬೀಳಗಿ ವೈದ್ಯಾಧಿಕಾರಿ ಡಾ.ಸಚಿನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಆಸ್ಪತ್ರೆ ಎದುರಿಗೆ ಕಲ್ಕತ್ತಾ ಮಹಿಳಾ ವೈದ್ಯ ಮೇಲೆ ಗುಂಪು ಅತ್ಯಾಚಾರ ಮತ್ತು ಕೊಲೆ ಖಂಡಿಸಿ ವೈದ್ಯ ಸಮೂಹ ಮತ್ತು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಕೈಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮಾಡಿದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಮಾತನಾಡಿ, ವೈದ್ಯೋ ನಾರಾಯಣ ಹರಿ ಎನ್ನುವ ದೇಶದಲ್ಲಿ ಇಂತಹ ಹೇಯ್ಯ ಕತ್ಯ ನಡೆದಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವಂತೆ ಆಗಿದೆ. ವೈದ್ಯರೆಂದರೆ ದೇವರಂತೆ ಕಾಣುವ ನೆಲದಲ್ಲಿ, ಅದರಲ್ಲೂ ಹೆಣ್ಣನ್ನು ಭೂತಾಯಿಯೆಂದು ಪೂಜಿಸುವ ಸಂಸ್ಕೃತಿ ನಮ್ಮದು, ಇಂತಹ ದೇಶದಲ್ಲಿ ೨೪ ತಾಸು ಒಬ್ಬ ಮಹಿಳಾ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲ್ಲುವಂತ ರಾಕ್ಷಸರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಡಾ.ವಿಶ್ವನಾಥ ಪತ್ತಾರ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂಜಯ ಯಡಹಳ್ಳಿ, ಡಾ.ವಿಶ್ವನಾಥ ಪತ್ತಾರ, ಡಾ.ಸುಧೀರ ವಿ.ಕೆ, ಡಾ.ಪ್ರವೀಣ ಹಳಗುನಕಿ, ಸ್ವಪ್ನಾ ಪರೀಟ, ಡಾ.ಶ್ರೀದೇವಿ ಕೊಟ್ನಾಳ್ಳಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಮಹಾದೇವ ಹಾದಿಮನಿ, ಸಿದ್ದು ಸಾರಾವರಿ, ಅಶೋಕ ಜೋಶಿ, ಮನೋಜ ಹಾದಿಮನಿ,ಖಾಸಗಿ ವೈದ್ಯರಾದ ಮೋಹನ ಚೆಟ್ಟೆರ್, ಲಕ್ಷತ್ಮಣ ಸಣ್ಣೆಲಿ, ಪ್ರಶಾಂತ ಬನಹಟ್ಟಿ, ಸಂತೋಷ ವೈದ್ಯ, ಕೋಕರೆ ಮತ್ತಿತರರು ಭಾಗವಹಿಸಿದ್ದರು.