ಕೊಳ್ಳಿಗನಹಳ್ಳಿ ಸೊಸೈಟಿ ಕಾಂಗ್ರೆಸ್ ವಶ

| Published : Feb 09 2025, 01:17 AM IST

ಸಾರಾಂಶ

ಹಾರೋಹಳ್ಳಿ: ತೀವ್ರ ಜಿದ್ದಾಜಿದ್ದಿನಿಂದ ನಡೆದ ತಾಲೂಕಿನ ಕೊಳ್ಳಿಗನಹಳ್ಳಿ ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಏಳು ಹಾಗೂ ಜೆಡಿಎಸ್ ಬೆಂಬಲಿತ ನಾಲ್ವರು ಜಯಶೀಲರಾದರು.

ಹಾರೋಹಳ್ಳಿ: ತೀವ್ರ ಜಿದ್ದಾಜಿದ್ದಿನಿಂದ ನಡೆದ ತಾಲೂಕಿನ ಕೊಳ್ಳಿಗನಹಳ್ಳಿ ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಏಳು ಹಾಗೂ ಜೆಡಿಎಸ್ ಬೆಂಬಲಿತ ನಾಲ್ವರು ಜಯಶೀಲರಾದರು.

ಗ್ರಾಮದ ಸಮುದಾಯ ಭವನದಲ್ಲಿ ಜರುಗಿದ ಚುನಾವಣೆ ಸಂಪೂರ್ಣ ಶಾಂತಿಯುತವಾಗಿತ್ತು. ಮತಗಟ್ಟೆಯ ಮುಂದೆ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಿತು. ಚುನಾವಣಾ ಅಧಿಕಾರಿಯಗಾಗಿ ಸಹಕಾರ ಇಲಾಖೆಯ ಪುರುಷೋತ್ತಮ್ ಹಾಗೂ ಸಂಘದ ಸಿಇಒ ಉಮೇಶ್ ಚುನಾವಣಾ ಕರ್ತವ್ಯ ನಿರ್ವಹಿಸಿದರು.

ಸಂಜೆ ಪ್ರಾರಂಭವಾದ ಮತ ಎಣಿಕೆ ಕಾರ್ಯ 7.30ರ ವೇಳೆಗೆ ಮುಗಿದಾಗ ಕಾಂಗ್ರೆಸ್ ಬೆಂಬಲಿತ ಸಾಮಾನ್ಯ ಕ್ಷೇತ್ರದಿಂದ ಕೆಂಪೇಗೌಡ, ರವಿ, ಕೆ.ವಿ.ವೆಂಕಟೇಶ್, ಶಿವಕುಮಾರ್, ಹಿಂದುಳಿದ ವರ್ಗ `ಬಿ'''''''' ಮೀಸಲಾತಿ ಕ್ಷೇತ್ರದಿಂದ ಕೆ.ಎನ್.ನಂಜೇಗೌಡ, ಮಹಿಳಾ ಮೀಸಲಾತಿಯಿಂದ ಜಯಮ್ಮ, ಹಿಂದುಳಿದ ಕ್ಷೇತ್ರದಿಂದ ಕೆಂಚಕಳಿಯ ಆಯ್ಕೆಯಾದರು.

ಜೆಡಿಎಸ್ ನಿಂದ ಸಾಮಾನ್ಯ ಕ್ಷೇತ್ರದಲ್ಲಿ ಕೆ.ಎನ್.ಲಕ್ಷ್ಮಣ್, ಮಹಿಳಾ ಮೀಸಲಾತಿಯಲ್ಲಿ ಗೀತಾ, ಹಿಂದುಳಿದ ವರ್ಗ `ಎ'''' ಕ್ಷೇತ್ರದಿಂದ ಜಿ.ದೇವರಾಜು, ಸಾಲಗಾರರಲ್ಲದ ಕ್ಷೇತ್ರದಿಂದ ಮಧುಕುಮಾರ್ ಜಯಶೀಲರಾದರು. ಕಾಂಗ್ರೆಸ್ ಮುಖಂಡರಾದ ಎಚ್.ಎಸ್.ಹರೀಶ್ ಕುಮಾರ್, ಸೊಂಟೇನಳ್ಳಿ ದಿನೇಶ್, ತಾಪಂ ಮಾಜಿ ಸದಸ್ಯ ಪುರುಷೋತ್ತಮ್, ಜೆಡಿಎಸ್ ಮುಖಂಡರಾದ ರಾಮ, ಲಕ್ಷ್ಮಣ, ಬಿ.ಎಂ.ರಾಜು, ಮಹದೇವ್ ಮತ್ತಿತರರು ಹಾಜರಿದ್ದರು.

8ಕೆಆರ್ ಎಂಎನ್ 4.ಜೆಪಿಜಿ

ಹಾರೋಹಳ್ಳಿ ತಾಲೂಕು ಕೊಳ್ಳಿಗನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯ ವಿಜೇತ ಅಭ್ಯರ್ಥಿಗಳು.