ಮಾರ್ಸೆಲ್‌ ಡಿಸೋಜ್‌ಗೆ ಕೊಂಕಣಿ ಅಕಾಡೆಮಿ ಸಾಹಿತ್ಯ ಗೌರವ ಪ್ರಶಸ್ತಿ

| Published : Oct 16 2024, 12:36 AM IST / Updated: Oct 16 2024, 12:37 AM IST

ಮಾರ್ಸೆಲ್‌ ಡಿಸೋಜ್‌ಗೆ ಕೊಂಕಣಿ ಅಕಾಡೆಮಿ ಸಾಹಿತ್ಯ ಗೌರವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲೆ ವಿಭಾಗದಲ್ಲಿ ಮುಂಬೈನ ಹ್ಯಾರಿ ಫರ್ನಾಂಡಿಸ್‌, ಜಾನಪದ ವಿಭಾಗದಲ್ಲಿ ಆಶೋಕ್‌ ದಾಮು ಕಾಸರಕೋಡ್ ಅವರಿಗೆ ನೀಡಲಾಗುವುದು.

ಹೊನ್ನಾವರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರ ಪ್ರಕಟಿಸಿದ್ದು, ಸಾಹಿತ್ಯ ವಿಭಾಗದಲ್ಲಿ ಗೌರವ ಪ್ರಶಸ್ತಿಯು ಮಂಗಳೂರಿನ ಮಾರ್ಸೆಲ್‌ ಎಂ.‌ ಡಿಸೋಜ್, ಕಲೆ ವಿಭಾಗದಲ್ಲಿ ಮುಂಬೈನ ಹ್ಯಾರಿ ಫರ್ನಾಂಡಿಸ್‌, ಜಾನಪದ ವಿಭಾಗದಲ್ಲಿ ಆಶೋಕ್‌ ದಾಮು ಕಾಸರಕೋಡ್ ಅವರಿಗೆ ನೀಡಲಾಗುವುದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಆಲ್ವಾರಿಸ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುಸ್ತಕ ಪುರಸ್ಕಾರ ವಿಭಾಗದಲ್ಲಿ ಬಂಟ್ವಾಳದ ಮೇರಿ ಸಲೋಮಿ ಡಿಸೋಜ್ ಅವರ ಅಟ್ವೊ ಸುರ್ ಕವನ ಸಂಕಲನ, ಸಣ್ಣಕತೆ ವಿಭಾಗದಲ್ಲಿ ಫಾ. ರೊಯ್ಸನ್‌ ಫೆರ್ನಾಂಡಿಸ್ ಅವರ ಪಯ್ಲಿ ಭೆಟ್, ಭಾಷಾಂತರ ವಿಭಾಗದಲ್ಲಿ ಸ್ಟೀಫನ್‌ ಮಸ್ಕರೇನ್ಹಸ್(ಹೇಮಾಚಾರ್ಯ) ಅವರ ಎಕ್ಲೊ ಎಕ್ಸುರೊ, ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ತಾಲೂಕಿನ ಕಾಸರಕೋಡ್ ಶ್ಯಾನಭಾಗ್‌ ರೆಸಿಡೆನ್ಸಿಯ ಆವರಣದಲ್ಲಿ ನ. 10ರಂದು ನಡೆಯಲಿದೆ ಎಂದರು.

ಗೌರವ ಪ್ರಶಸ್ತಿಯು ₹50,000 ನಗದು, ಪ್ರಮಾಣಪತ್ರ, ಪುಸ್ತಕ ಪುರಸ್ಕಾರವು ₹25,000 ನಗದು, ಪ್ರಮಾಣಪತ್ರ ಒಳಗೊಂಡಿದೆ. ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು. ಶಾಸಕರಾದ ಸತೀಶ್‌ ಸೈಲ್‌, ದಿನಕರ ಶೆಟ್ಟಿ, ವಿಧಾನ ಪರಿಷತ್ತಿನ ಸದಸ್ಯ ಐವನ್‌ ಡಿಸೋಜ್, ಕಾಸರಕೋಡ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಕಾಳಿ ಪ್ರಕಾಶ್‌ ಹರಿಜನ್‌, ಇತರರು ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನವೀನ್ ಕೆನ್ಯೂಟ್ ಲೋಬೊ, ಜೇಮ್ಸ್ ಪೆದ್ರು ಲೋಪಿಸ್ ಉಪಸ್ಥಿತರಿದ್ದರು. ಫೋಟೋಗ್ರಫಿ, ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಫೋಟೋಗ್ರಫಿ, ವಿಡಿಯೋಗ್ರಫಿ ಕುರಿತ 30 ದಿನಗಳ ಉಚಿತ ತರಬೇತಿಯು ನ. 5ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ- ಯುವತಿಯರು ತರಬೇತಿಯಲ್ಲಿ ಭಾಗವಹಿಸಬಹುದು.ಆಸಕ್ತರು 18ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವ ಹಾಗೂ ಡಿಎಸ್‌ಎಲ್‌ಆರ್ ಕ್ಯಾಮೆರಾವನ್ನು ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊ. 9740982585, 9113880324 ಸಂಪರ್ಕಿಸಬಹುದು ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.