ಸಾರಾಂಶ
ಸಂಘದ ಸದಸ್ಯರಿಗೆ ಶುದ್ಧ ಗಾಳಿ ಮಳೆ ಪರಿಸರದ ಉಳಿವಿಗಾಗಿ ಈ ಪರಿಸರ ದಿನಾಚರಣೆ ಎನ್ನುವ ಮಾತಿನಂತೆ ನೀರಿನ ಮಿತ ಬಳಕೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕುವೆಂಪುನಗರ ಯೋಜನಾ ಕಚೇರಿ ವ್ಯಾಪ್ತಿಗೆ ಬರುವ ಶಾರದಾದೇವಿನಗರ ವಲಯದ ಹೌಸಿಂಗ್ ಬೋರ್ಡ್ ಕಾರ್ಯಕ್ಷೇತ್ರ ಕೂರ್ಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.ಹೂಟಗಳ್ಳಿ ನಗರ ಸಭೆ ಆಯುಕ್ತ ಚಂದ್ರಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಘದ ಸದಸ್ಯರಿಗೆ ಶುದ್ಧ ಗಾಳಿ ಮಳೆ ಪರಿಸರದ ಉಳಿವಿಗಾಗಿ ಈ ಪರಿಸರ ದಿನಾಚರಣೆ ಎನ್ನುವ ಮಾತಿನಂತೆ ನೀರಿನ ಮಿತ ಬಳಕೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಬೇಕು ಹಾಗೂ ನೀರಿನ ನೆರ್ಮಲ್ಯದ ಬಗ್ಗೆ ಪರಿಸರ ಕಾಪಾಡಿಕೊಳ್ಳುವುದು ನಮ್ಮೆಲ್ಲೆರ ಜವಾಬ್ದಾರಿ ಎಂದು ತಿಳಿಸಿದರು.
ಹಯವದನ್ ರಾವ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವೈಯಕ್ತಿಕ ಸ್ವಚ್ಛತೆ ಬಗ್ಗೆ ತಿಳಿಸಿದರು.ತಾಪಂ ಮಾಜಿ ಸದಸ್ಯೆ ರಾಣಿ ಸತೀಶ್, ಸತೀಶ್, ಶಾಲೆ ಮುಖ್ಯ ಶಿಕ್ಷಕ ನಾಗರಾಜ್, ಚಾಮುಂಡೇಶ್ವರಿ ಯುವಕ ಸಂಘದ ಅಧ್ಯಕ್ಷ ರೇವಣ್ಣ, ಶಾಲೆಯ ಶಿಕ್ಷಕ ವೃಂದ, ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ವಿದ್ಯಾರ್ಥಿಗಳು, ವಿಎಲ್.ಇಗಳು ಕಾರ್ಯಕ್ರಮದಲ್ಲಿ ಇದ್ದರು.