ಜಿಲ್ಲಾ ಸೇವಾ ದಳ ಸಮಿತಿ ರಾಜ್ಯಕ್ಕೆ ಮಾದರಿ: ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್

| Published : Feb 21 2025, 11:49 PM IST

ಸಾರಾಂಶ

ಭಾರತ್ ಸೇವಾದಳದ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲಾ ಸೇವಾದಳ ರಾಜ್ಯಕ್ಕೆ ಮಾದರಿಯಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮುಖ್ಯ ಘಟ್ಟವಾಗಿದ್ದು, ಮಕ್ಕಳು ಈ ಹಂತದಲ್ಲಿ ಉತ್ತಮವಾಗಿ ವ್ಯಾಸಂಗ ಮಾಡಿ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು.

ಗಂಗಾವತಿ:

ತಾಲೂಕಿನ ಬಸಾಪಟ್ಟಣ ಗ್ರಾಮದ ಬಾಲಕರ ಪ್ರೌಢಶಾಲೆಯಲ್ಲಿ ಭಾರತ ಸೇವಾದಳ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ಬಸಾಪಟ್ಟಣ ಪಂಚಾಯಿತಿ ಮಟ್ಟದ ಭಾರತ್ ಸೇವಾದಳ ಮಕ್ಕಳ ನಾಯಕತ್ವ ಶಿಬಿರ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಮಾಹಿತಿ ಕಾರ್ಯಾಗಾರ ಜರುಗಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಅವರು, ಭಾರತ್ ಸೇವಾದಳದ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲಾ ಸೇವಾದಳ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮುಖ್ಯ ಘಟ್ಟವಾಗಿದ್ದು, ಮಕ್ಕಳು ಈ ಹಂತದಲ್ಲಿ ಉತ್ತಮವಾಗಿ ವ್ಯಾಸಂಗ ಮಾಡಿ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು ಎಂದರು. ಸಹ ಶಿಕ್ಷಕರ ಸಂಘದ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಹರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಮಕ್ಕಳ ಕಲಿಕಾ ಮಟ್ಟ ಸುಧಾರಿಸುವ ಅವಶ್ಯಕತೆ ಇದೆ. ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಸೇವಾದಳದ ವತಿಯಿಂದ ಹಮ್ಮಿಕೊಳ್ಳಲು ನಾವು ಉತ್ಸುರಾಗಿದ್ದೇವೆ ಎಂದು ಹೇಳಿದರು.

ಬಾಲಕರ ಸರ್ಕಾರಿ ಪ್ರೌಢಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಬಾಬಸಾಬ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಹನುಮೇಶ ಸ್ವಾಗತಿಸಿದರು.

ಭಾರತ್ ಸೇವಾದಳ ಕೊಪ್ಪಳ ಜಿಲ್ಲಾ ಸಂಘಟಕ ಕುಮಾರಸ್ವಾಮಿ ಎಚ್. ಬಳ್ಳಾರಿ, ಭಾರತ ಸೇವಾದಳ ತಾಲೂಕು ಅಧಿನಾಯಕ ಶಿವಾನಂದ ತಿಮ್ಮಾಪುರ, ಈರಣ್ಣ ಹೆಬ್ಬಾಳ, ಮಂಜುನಾಥ ದರೋಜಿ, ಉಮಾದೇವಿ ಪಾಟೀಲ್, ಎನ್. ನಾಗಭೂಷಣ, ನಿಂಗಪ್ಪ ಆನಂದ ನಾಗಮ್ಮನವರ್, ರಾಘವೇಂದ್ರ ಪಿ.ಸಿ., ಕಾಶಿ ವಿಶ್ವನಾಥ, ಉದಯಕುಮಾರ್, ಕೋಟೆಪ್ಪ, ಶರಣಪ್ಪ ಬಿಸ್ನಳ್ಳಿ, ಭೀಮರಾವ್ ಹಾಗೂ ಭಾರತ ಸೇವಾದಳ ಸಮಿತಿ ಸದಸ್ಯರು, ಗ್ರಾಪಂ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದರು.