ಕೊರಟಗೆರೆ ಆಸ್ಪತ್ರೆಗೆ ಹೈಟೆಕ್‌ ಸ್ಪರ್ಷ: ಎತ್ತಿನಹೊಳೆಯಿಂದ ಕೆರೆಗೆ ನೀರು

| Published : Mar 08 2025, 12:32 AM IST

ಕೊರಟಗೆರೆ ಆಸ್ಪತ್ರೆಗೆ ಹೈಟೆಕ್‌ ಸ್ಪರ್ಷ: ಎತ್ತಿನಹೊಳೆಯಿಂದ ಕೆರೆಗೆ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಕೊರಟಗೆರೆ ತಾಲೂಕಿನ ೬೭ ಕೆರೆಗಳಿಗೆ ನೀರು ತುಂಬಿಸಲು ಹಣ ಬಿಡುಗಡೆ ಮಾಡಲಾಗಿದ್ದು ಕೊರಟಗೆರೆ ತಾಲೂಕಿನ ರೈತರಲ್ಲಿ ಸಂತಸ ಮೂಡಿದೆ. ಇದರ ಜೊತೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ರಾಜ್ಯದ ಇತರೆ ಆಸ್ಪತ್ರೆಗಳಿಗೆ ೬೦೦ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಈ ಬಾರಿ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಕೊರಟಗೆರೆ ತಾಲೂಕಿನ ೬೭ ಕೆರೆಗಳಿಗೆ ನೀರು ತುಂಬಿಸಲು ಹಣ ಬಿಡುಗಡೆ ಮಾಡಲಾಗಿದ್ದು ಕೊರಟಗೆರೆ ತಾಲೂಕಿನ ರೈತರಲ್ಲಿ ಸಂತಸ ಮೂಡಿದೆ. ಇದರ ಜೊತೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ರಾಜ್ಯದ ಇತರೆ ಆಸ್ಪತ್ರೆಗಳಿಗೆ ೬೦೦ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಎತ್ತಿನಹೊಳೆ ಯೋಜನೆ ಕಾಮಗಾರಿ ತಾಲೂಕಿನಲ್ಲಿ ಪ್ರಗತಿಯಲ್ಲಿದ್ದು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೊರಟಗೆರೆ ಶಾಸಕರಾದ ಡಾ.ಜಿ.ಪರಮೇಶ್ವರ ಅವರ ಶ್ರಮದಿಂದ ಕೊರಟಗೆರೆ ತಾಲೂಕಿನ ೬೭ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸುವ ಸಲುವಾಗಿ ಈ ಬಾರಿ ಬಜೆಟ್‌ನಲ್ಲಿ ಕೊರಟಗೆರೆ ತಾಲೂಕು ಸೇರಿದಂತೆ ಇತರೆ ತಾಲೂಕುಗಳಿಗೆ ಒಟ್ಟು ೫೫೩ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ.ಕೊರಟಗೆರೆ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯೂ ತುಂಬ ಕಿರಿದಾಗಿದ್ದು, ಗೃಹ ಸಚಿವರ ಬಹು ದಿನದ ಕನಸಾಗಿರುವ ಸಾರ್ವಜನಿಕ ಆಸ್ಪತ್ರೆಯನ್ನ ಹೈಟೆಕ್ ಸ್ಪರ್ಶ ನೀಡಲು ಪಟ್ಟಣದ ಹೊರವಲಯದಲ್ಲಿ ೧೦೦ ಬೆಡ್ ಹಾಸಿಗೆ ಸೇರಿದಂತೆ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಲು ಕೊರಟಗೆರೆ ಆಸ್ಪತ್ರೆಗೆ ಹಣ ನೀಡಲಾಗಿದೆ. ಈ ಕುರಿತು ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು ಮಾತನಾಡಿ, ಈ ಬಾರಿ ಬಜೆಟ್‌ನಲ್ಲಿ ಸಿ.ಎಂ. ಸಿದ್ದರಾಮಯ್ಯ ಅವರು ಏತ್ತಿನಹೊಳೆ ಯೋಜನೆಗೆ ಅನುದಾನ ನೀಡಿದ್ದಾರೆ. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಶ್ರಮದಿಂದ ಕೊರಟಗೆರೆ ತಾಲೂಕಿನ ೬೭ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ದಗಾಗಿ ಅನುದಾನ ಬಿಡುಗಡೆ ಮಾಡಿಸಿರುವುದು ತಾಲೂಕಿನ ರೈತರಿಗೆ ಸಂತಸ ತಂದಿದೆ. ನಮ್ಮ ತಾಲೂಕಿನ ಬೈರಗೋಡ್ಲು ಗ್ರಾಮದಲ್ಲಿ ಬಫರ್ ಡ್ಯಾಂ ನಿರ್ಮಾಣ ಮಾಡಿ. ಭೂಮಿ ಕಳೆದುಕೊಳ್ಳುವ ರೈತರಿಗೆ ದೊಡ್ಡಬಳ್ಳಾಪುರ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದರು. ಆಸ್ಪತ್ರೆ ಮೇಲ್ದರ್ಜಗೆ ಏರಿಸುವ ಕುರಿತಂತೆ ಮಾತನಾಡಿದ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ಮಾತನಾಡಿ ಕೊರಟಗೆರೆ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಚಿಕ್ಕ ಆಸ್ಪತ್ರೆಯಾಗಿದ್ದು, ಇದನ್ನ ಮೇಲ್ದೇಜೆಗೆ ತರಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಶ್ರಮ ಹಾಕಿದ್ದು, ಪಟ್ಟಣದ ಹೊರವಲಯದ ಕಾಮೇನಹಳ್ಳಿಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕಾಗಿ ಈಗಾಗಲೇ ೪ ಎಕರೆ ಜಾಗವನ್ನ ಗುರುತಿಸಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗಿದ್ದು, ಕೊರಟಗೆರೆ ಪಟ್ಟಣದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.