ಸಾರಾಂಶ
ತಾಲೂಕಿನ ಶ್ರೀ ಪತಂಜಲಿ ಯೋಗಾ ಸೇವಾ ಸಮಿತಿ ವತಿಯಿಂದ 108 ದಂಪತಿಗಳಿಂದ 108 ಹೋಮದೊಂದಿಗೆ ವಿಶೇಷ ಪೂಜೆಸಲ್ಲಿಸಿ ಧಾರ್ಮಿಕ ಕಾರ್ಯಕ್ರಮ ಆಚರಿಸುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಕೊರಟಗೆರೆ ಪಟ್ಟಣದ ಹೊರವಲಯದಲ್ಲಿರುವ ಬೈಲಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕಿನ ಶ್ರೀ ಪತಂಜಲಿ ಯೋಗಾ ಸೇವಾ ಸಮಿತಿ ವತಿಯಿಂದ 108 ದಂಪತಿಗಳಿಂದ 108 ಹೋಮದೊಂದಿಗೆ ವಿಶೇಷ ಪೂಜೆಸಲ್ಲಿಸಿ ಧಾರ್ಮಿಕ ಕಾರ್ಯಕ್ರಮ ಆಚರಿಸುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.ಪಟ್ಟಣದ ಬೈಲಾಂಜನೇಯಸ್ವಾಮಿ ದೇವಾಲಯ ಮಾತ್ರವಲ್ಲದೆ ಶ್ರೀರಾಮೇಶ್ವರ ದೇವಾಲಯ, ಕಟ್ಟೇಗಣಪತಿ, ವಾಸವಿ ದೇವಾಲಯದಲ್ಲಿ ತಾಲೂಕಿನ ವಾಸವಿ ಸಮುದಾಯ ವಿಶೇಷ ಪೂಜೆ, ಗುಂಡಾಂಜನೇಯಸ್ವಾಮಿ ದೇವಾಲಯ, ಚಂದರಮೌಳೇಶ್ಚರ ದೇವಾಲಯ, ದೊಡ್ಡಪೇಟೆ ಬಲಿಜ ರಾಮ ಭಜನಾ ಮಂದಿರದಲ್ಲಿ, ಕೆರೆಕೋಡಿ ಶ್ರೀರಾಮಾಂಜನೇಯಸ್ವಾಮಿ ದೇವಾಲಯದಲ್ಲಿ, ಬೆಸ್ಕಾಂ ಇಲಾಖೆಯ ಬಳಿ ಸಮಸ್ತ ಹಿಂದೂ ಶ್ರೀರಾಮ ಭಕ್ತರಿಂದ ಮತ್ತು ಎಸ್‌ಎಸ್‌ಆರ್ ವೃತ್ತದಲ್ಲಿ ಜೈಹಿಂದೂ ಭಜರಂಗಿ ಸೇನೆ, ಬಸ್ ನಿಲ್ದಾಣದ ಗಳೆಯರ ಬಳಗ ಸೇರಿದಂತೆ ನಾಗರೀಕ ಬಳಗದಿಂದ ಶ್ರೀರಾಮಚಂದ್ರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮಗಳಲ್ಲಿ ಶ್ರೀ ಪತಂಜಲಿ ಯೋಗಾ ಸೇವಾ ಸಮಿತಿಯ ಮಂಜುನಾಥ್, ಕೆ.ಜಿ. ಚನ್ನಬಸಪ್ಪ, ಗಂಗಾಧರಯ್ಯ, ಚಿಕ್ಕನರಸಯ್ಯ, ನಾಗರಾಜು, ಸಮಸ್ತ ಹಿಂದೂ ಶ್ರೀರಾಮ ಭಕ್ತರ ಸಮಿತಿಯ ರಮೇಶ್, ಪ್ರದೀಪ್ ಕುಮಾರ್, ಅಶ್ವತ್ಥನಾರಾಯಣರಾಜು, ರಂಗಪ್ಪ, ನಾಗರಾಜು, ವೆಂಕಟೇಶ್, ಸಂತೋಷ್, ಪವನ್, ಪವನ್‌ಕುಮಾರ್, ಜೈಹಿಂದೂ ಭಜರಂಗಿ ಸೇನೆ ಮತ್ತು ಬಸ್ ನಿಲ್ದಾಣ ಗೆಳೆಯರ ಬಳಗದ ಹಾಗೂ ನಾಗರಿಕ ಬಳಗದ ಕೆ.ವಿ. ಮಂಜುನಾಥ್, ಕೆ.ವಿ. ಪುರುಷೋತ್ತಮ್, ಕೆ.ಬಿ. ಲೋಕೇಶ್, ಪುಟ್ಟನರಸಪ್ಪ, ಟೀ ಅಂಗಡಿ ರಾಜಣ್ಣ, ನಾರಾಯಣ್, ವಿನಯ್‌ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.