ಸಾರಾಂಶ
ಪಟ್ಟಣ ಪಂಚಾಯಿತಿಯ ೨೦೨೫-೨೬ ನೇ ಸಾಲಿನಲ್ಲಿ ೨೧,೪೩,೪೨,೨೫೦ ಕೋಟಿ ರುಗಳ ಅಯವ್ಯಯ ಮಂಡನೆಯಾಗಿದ್ದು ಪತ್ರಕರ್ತರಿಗೆ ಆರೋಗ್ಯ ವಿಮೆಗೆ ೫ ಲಕ್ಷ ರುಗಳನ್ನು ಮೀಸಲಿಟ್ಟು ೯೦.೭೦೦೦ ಲಕ್ಷ ಉಳಿತಾಯ ಬಜೆಟ್‌ನ್ನು ಪ.ಪಂ. ಅಧ್ಯಕ್ಷೆ ಅನಿತ ಕೆ.ಓ ಮಂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣ ಪಂಚಾಯಿತಿಯ ೨೦೨೫-೨೬ ನೇ ಸಾಲಿನಲ್ಲಿ ೨೧,೪೩,೪೨,೨೫೦ ಕೋಟಿ ರುಗಳ ಅಯವ್ಯಯ ಮಂಡನೆಯಾಗಿದ್ದು ಪತ್ರಕರ್ತರಿಗೆ ಆರೋಗ್ಯ ವಿಮೆಗೆ ೫ ಲಕ್ಷ ರುಗಳನ್ನು ಮೀಸಲಿಟ್ಟು ೯೦.೭೦೦೦ ಲಕ್ಷ ಉಳಿತಾಯ ಬಜೆಟ್‌ನ್ನು ಪ.ಪಂ. ಅಧ್ಯಕ್ಷೆ ಅನಿತ ಕೆ.ಓ ಮಂಡಿಸಿದ್ದಾರೆ.ಕೊರಟಗೆರೆ ಪಪಂ.ಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಈ ಬಾರಿ ಸ್ವಚ್ಛತೆಗೆ ಮೂಲಭೂತ ಸೌಕರ್ಯಗಳಿಗೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಕೊರಟಗೆರೆ ಪಟ್ಟಣದ ಎಲ್ಲಾ ತ್ಯಾಜ್ಯಗಳು ಸುವರ್ಣಮುಖಿ ನದಿಗೆ ಹರಿದು ಬರುತ್ತಿದ್ದು ಅದರ ಸ್ವಚ್ಚತೆ ಮಾಡುವ ಉದ್ದೇಶದಿಂದ ಸ್ವಚ್ಚ ಸುವರ್ಣಮುಖಿ ನದಿ ಯೋಜನೆಗೆ ಡಿ.ಪಿ.ಆರ್ ಮಾಡಲು ೩ ಲಕ್ಷ ರೂಗಳನ್ನು ಮೀಸಲಿಡಲಾಗಿದೆ.ಈ ಬಾರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೪೫ ವರ್ಷ ಮೇಲ್ಪಟ್ಟ ಕಾರ್ಯನಿರತ ಪತ್ರಕರ್ತರುಗಳಿಗೆ ಆರೋಗ್ಯ ವಿಮೆಗಾಗಿ ೫ ಲಕ್ಷ ರುಗಳನ್ನು ವಿಶೇಷವಾಗಿ ಮೀಸಲಿಡಲಾಗಿದೆ, ಕಟ್ಟಡ ಮತ್ತು ಭೂಮಿ ಮೇಲಿನ ಆಸ್ತಿ ತೆರಿಗೆಯನ್ನು ೧೨೪೦೦೦೦೦ ಕೋಟಿ ರುಗಳು, ಅಂಗಡಿ ಬಾಡಿಗೆ ೧೫೦೦೦೦೦ ಲಕ್ಷ ರೂಗಲು ಅಭಿವೃದ್ದಿ ಶುಲ್ಕ ೧೦೧೫೦೦೦ ಲಕ್ಷ ರೂಗಳು, ಸೇರಿದಂತೆ ಒಟ್ಟು ೨೪೮೦೦೦೦೦ ಕೋಟಿ ರುಗಳ ಲಾಭವನ್ನು ನಿರೀಕ್ಷಿಸಲಾಗಿದೆ.೨೫-೨೬ ನೇ ಸಾಲಿನಲ್ಲಿ ೧೯೪೧೫೦೦೦ ಕೋಟಿ ರುಗಳ ವೇತನ ಅನುದಾನ ೪೦೦೦೦ ಲಕ್ಷ ರುಗಳ ಎಸ್.ಏಫ್.ಸಿ ಮುಕ್ತ ನಿಧಿ, ೧೨೩೦೦೦೦೦ ವಿದ್ಯುತ್ ಅನುಧಾನ ಸೇರಿದಂತೆ ಒಟ್ಟು ೩೨೧೧೫೦೦೦ ಕೋಟಿ ರೂಗಳ ರಾಜಸ್ವ ಆದಾಯಗಳನ್ನು ನಿರೀಕ್ಷಿಸಲಾಗಿ ಬಜೆಟ್‌ನಲ್ಲಿ ಮಂಡಿಸಲಾಗಿದೆ.ಪ.ಪಂ.ಅಧ್ಯಕ್ಷೆ ಅನಿತಾ ಮಾತನಾಡಿ, ಗೃಹ ಸಚಿವರ ಕ್ಷೇತ್ರವಾದ ಕೊರಟಗೆರೆಯಲ್ಲಿ ಪಪಂ ಅಭಿವೃದ್ದಿಗಾಗಿ ಉಳಿತಾಯ ಬಜೆಟ್ ಅನ್ನು ಮಂಡಿಸಿದ್ದು ಅದರಂತೆ ಮುಂಬರುವ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು, ಈ ಬಾರಿ ಸ್ವಚ್ಚತೆಗೆ ಅದ್ಯತೆ ನೀಡಲಾಗಿದ್ದು ಪತ್ರಕರ್ತರ ಆರೋಗ್ಯ ವಿಮೆಗೂ ಸಹ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು. ಪಪಂ ಮುಖ್ಯಾಧಿಕಾರಿ ಉಮೇಶ್ ಮಾತನಾಡಿ, ಈ ಬಾರಿ ಅಯವ್ಯಯದಲ್ಲಿ ಪಟ್ಟಣ ಅಭಿವೃದ್ದಿಗೆ ಸಾಕಷ್ಟು ಹಣ ಮೀಸಲಿಟ್ಟಿದ್ದು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು. ಸ್ವಚ್ಚ ಸುವರ್ಣ ಮುಖಿ ನದಿಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಹಾಗೂ ಪಟ್ಟಣ ಪಂಚಾಯಿತಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಾಗುವುದು.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರ ಅದೇಶದಂತೆ ಪತ್ರಕರ್ತರಿಗೆ ಈ ಬಾರಿ ಪಪಂ ಆರೋಗ್ಯ ವಿಮೆಗೆ ೫ ಲಕ್ಷ ರುಗಳನ್ನು ಮೀಸಲಿಟ್ಟಿರುವುದು ಸಂತೋಷ ತಂದಿದೆ. ಮುಂದಿನ ವರ್ಷ ೪೫ ವರ್ಷಗಳ ವಯೋಮಿತಿ ನಿಯಮವನ್ನು ಸಡಿಲಗೊಳಿಸಿ ಎಲ್ಲಾ ವಯೋಮಿತಿ ಪತ್ರಕರ್ತರಿಗೂ ನೀಡಬೇಕು. ಗೃಹ ಸಚಿವರಿಗೂ ಮತ್ತು ಕೊರಟಗೆರೆ ಪಟ್ಟಣ ಪಂಚಾಯಿತಿಗೆ ಧನ್ಯವಾದ ಸಲ್ಲಿಸುತ್ತೇನೆ ಹಾಗೂ ಈ ಯೋಜನೆ ಗ್ರಾಮಾಂತರ ಪ್ರದೇಶಕ್ಕೂ ಜಾರಿಯಾಗಲಿ ಎಂದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ, ಉಪಾಧ್ಯಕ್ಷೆ ಹುಸ್ನಾಫಾರಿಯಾ, ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಪುಟ್ಟನರಸಯ್ಯ, ಕೆ.ಆರ್.ಓಬಳರಾಜು, ಕೆ.ಆನ್.ಲಕ್ಷ್ಮಿನಾರಾಯಣ್, ಭಾಗ್ಯಮ್ಮ, ಭಾರತಿ, ಕಾವ್ಯಶ್ರೀ, ಕೆ.ಎನ್.ನಟರಾಜು, ನಾಗರಾಜು, ನಂದೀಶ್, ಮಂಜುಳಾ, ಪ್ರದೀಪ್‌ಕುಮಾರ್, ನಾಮಿನಿ ಸದಸ್ಯರುಗಳಾದ ಮಂಜುಳಾ, ಎಂ.ಜಿ.ಸುಧೀರ್, ಫೈಯಾಸ್ ಅಹಮದ್, ಪ.ಪಂ. ಅಧಿಕಾರಿಗಳಾದ ಮಹಮದ್‌ಉಸೇನ್, ವೇಣುಗೋಪಾಲ್, ಪ್ರೀತಂ, ನಾಗರತ್ನಮ್ಮ, ಸಾವಿತ್ರಮ್ಮ, ಅನುರಾಧ ಸೇರಿದಂತೆ ಇನ್ನಿತರರು ಹಾಜರಿದ್ದರು.