ಕೊರಟಗೆರೆ ತಾಲೂಕಿಗೆ ಶೇ.೬೪.೭೯ರಷ್ಟು ಫಲಿತಾಂಶ ಸಾಧನೆ

| Published : May 04 2025, 01:33 AM IST

ಸಾರಾಂಶ

ಚಾಣಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಅದಿಲ್ ಲಾಲ್ ಸಾಬ್ ರಾಮ್‌ದುರ್ಗ್ ೬೨೫ಕ್ಕೆ ೬೨೧ (ಶೇ.೯೯.೩೬) ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೊರಟಗೆರೆ ತಾಲೂಕು ಶೇ.೬೪.೭೯ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ. ೨ರಷ್ಟು ಚೇತರಿಕೆ ಕಂಡಿದೆ. ಕೊರಟಗೆರೆ ಪಟ್ಟಣದ ಚಾಣಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಅದಿಲ್ ಲಾಲ್ ಸಾಬ್ ರಾಮ್‌ದುರ್ಗ್ ೬೨೫ಕ್ಕೆ ೬೨೧ (ಶೇ.೯೯.೩೬) ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರವೀಂದ್ರ ಭಾರತಿ ಪ್ರೌಢಶಾಲೆಯ ಸೃಜನ್.ಎಂ.ಎನ್- ೬೧೮,(ಶೇ.೯೮.೮೮) , ಸುಹಾಸ್.ಪಿ- ೬೧೮ (ಶೇ.೯೮.೮೮), ಅಮೂಲ್ಯ.ಜಿ.ಎಚ್- ೬೧೭(ಶೇ.೯೭.೭೨), ಸರ್ಕಾರಿ ಪ್ರೌಡಶಾಲೆಯ ವೇಣು ೬೧೭ (ಶೇ.೯೭.೭೨) ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ. ಈ ಬಾರಿ ಕೊರಟಗೆರೆ ತಾಲೂಕಿನಲ್ಲಿ ೨೦೯೩ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು, ಈ ಪೈಕಿ ೧೦೩೭ ಗಂಡು ಮಕ್ಕಳು ಹಾಗೂ ೧೦೫೬ ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದು, ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಶೇ. ೬೪.೭೯ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೊರಟಗೆರೆ ತಾಲೂಕಿನ ಹುಲೀಕುಂಟೆ ಸಮೀಪ ಇರುವ ಕಿತ್ತೂರರಾಣಿ ಚೆನ್ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತೊಗರಿಘಟ್ಟ ಗ್ರಾಮದ ಗೋವಿಂದರಾಜು ಮಗಳಾದ ಟಿ.ಜಿ.ಗೀತಾ ೬೧೪ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.