500 ದಲಿತ ಸೈನಿಕರು 28 ಸಾವಿರ ಬಹುಸಂಖ್ಯೆಯಲ್ಲಿದ್ದ ಮರಾಠಿ ಪೇಶ್ವೆಗಳ ಸೈನ್ಯವನ್ನು ಸ್ವಾಭಿಮಾನದಿಂದ ಎದುರಿಸಿ ಪಡೆದ ಜಯದ ಸಂಕೇತವಾಗಿ ಪ್ರತಿ ವರ್ಷ ಜನವರಿ ಒಂದರಂದು ಕೋರೆಗಾಂವ್ ವಿಜಯೋತ್ಸವ.
ಮಾಲೂರು: ಸ್ವಾಭಿಮಾನ ಮತ್ತು ಸಾಮಾಜಿಕ ಭೀಮ ಕೋರೆಗಾಂವ್ ಕದನ ದೇಶದ ಇತಿಹಾಸದಲ್ಲೇ ಮಹತ್ವವಾದದ್ದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಹೇಳಿದರು.ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಭೀಮ ಕೊರೆಗಾಂವ್ ವಿಜೆಯೋತ್ಸವದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ಹೋರಾಟ ಕ್ರಾಂತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಗೆದ್ದ ಕಲಾ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
1818 ಜ. 1ರಂದು ಭೀಮಾ ನದಿ ತೀರದಲ್ಲಿ ನಡೆದ ಮೂರನೇ ಆಂಗ್ಲೂ ಮರಾಠ ಭಾಗವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೇವಲ 500 ದಲಿತ ಸೈನಿಕರು 28 ಸಾವಿರ ಬಹುಸಂಖ್ಯೆಯಲ್ಲಿದ್ದ ಮರಾಠಿ ಪೇಶ್ವೆಗಳ ಸೈನ್ಯವನ್ನು ಸ್ವಾಭಿಮಾನದಿಂದ ಎದುರಿಸಿ ಪಡೆದ ಜಯದ ಸಂಕೇತವಾಗಿ ಪ್ರತಿ ವರ್ಷ ಜನವರಿ ಒಂದರಂದು ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಮೊದಲನೇ ಬಹುಮಾನ ಪಡೆದ ದೊಡ್ಡಮಲೆ ತಲಮಾರು ಕಲಾ ತಂಡಕ್ಕೆ 50,001 ಸಾವಿರ ನಗದು ಮತ್ತು ಟ್ರೋಫಿ ದ್ವೀತಿಯ ಸ್ಥಾನ ಪಡೆದ ಕಲಾವಿದ ಯಲ್ಲಪ್ಪ ತಂಡಕ್ಕೆ 30,001 ರು. ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆದ ಸೊಣ್ಣೂರು ಗೋವಿಂದ ತಂಡಕ್ಕೆ20,001 ರು. ಹಾಗೂ ಸಮಾಧಾನಕರ ಬಹುಮಾನ ಪಡೆದ ರವಿಚಂದ್ರ ತಂಡಕ್ಕೆ 10,001 ರು. ನೀಡಿ ಗೌರವಿಸಲಾಯಿತು.ಕದಸಂಸ ಜಿಲ್ಲಾ ಸಮಿತಿ ಮುನಿಚೌಡಪ್ಪ, ಕೇಶವ, ಸುಬ್ರಮಣಿ, ತಾಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್, ಮಹಿಳಾ ಸಂಚಾಲಕಿ ವೀಣಾ, ಶಿಕ್ಷಕ ರವಿಕುಮಾರ್, ವಕೀಲ ಎಚ್.ಎಲ್.ನಾಗರಾಜ್, ಬಾಬು, ಡಿ.ನಾರಾಯಣಸ್ವಾಮಿ, ತಿರುಮಲೇಶ್, ನಾಯುಡು, ಶಂಕರ್ ಇನ್ನಿತರರು ಇದ್ದರು.