ಸಾರಾಂಶ
ತಾಲೂಕಿನ ನಾಲವಾರದ ಕೊರಿ ಸಿದ್ದೇಶ್ವರ ಜಾತ್ರೆಯಲ್ಲಿ ಕಳುವಾಗಿದ್ದ ಇನೊವಾ ಕಾರುನ್ನು ವಾಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಕಳವು ಮಾಡಿದ ಅಂತಾರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ತಾಲೂಕಿನ ನಾಲವಾರದ ಕೊರಿ ಸಿದ್ದೇಶ್ವರ ಜಾತ್ರೆಯಲ್ಲಿ ಕಳುವಾಗಿದ್ದ ಇನೊವಾ ಕಾರುನ್ನು ವಾಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಕಳವು ಮಾಡಿದ ಅಂತಾರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ.ವಿಠಲ್ ಸಕಾರಾನು ಲಸ್ಕರ್ ಬಂಧಿತ ಆರೋಪಿ. ಈತ ಮಹಾರಾಷ್ಟ್ರದ ಬೀಡ್ ಜಿಲ್ಲೆ ಹಾಗೂ ಪುಣೆ ನಗರ ವಾಘೋಲಿಯ ನಿವಾಸಿಯಾಗಿದ್ದು, ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಕಾರು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ತನ್ನ ಜೊತೆಗೆ ಪ್ರಶಾಂತ ಅಲಿಯಾಸ ಪರುಶುರಾಮ ಗಾಯಕವಾಡ ಹಾಗೂ ಸಹದೇವ ತಾಂದಳೆ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಜೇವರ್ಗಿ ತಾಲೂಕಿನ ಖಾಜಾ ಕಾಲೊನಿ ನಿವಾಸಿ ದತ್ತು ಸಂಗಯ್ಯ ಗುತ್ತೆದಾರಗೆ ಸೇರಿದ ಇನೊವಾ ಕಾರುು ನಾಲವಾರ ಜಾತ್ರೆಯಲ್ಲಿ ಕಳ್ಳತನವಾಗಿತ್ತು. ಹೆಚ್ಚುವರಿ ಪೊಲಿಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ ನೇತೃತ್ವದಲ್ಲಿ ಪಿಎಸ್‌ಐ ತಿರುಮಲೇಶ, ಸಿಬ್ಬಂದಿ ತಂಡ ರಚಿಸಿದ್ದರು.ಮಹಾರಾಷ್ಟ್ರದ ಬೀಡ್ ಜಿಲ್ಲೆ ಹಾಗೂ ಪುಣೆ ನಗರ ವಾಘೋಲಿಯಲ್ಲಿ ಕಾರ್ಯಾಚರಣೆ ಕೈಗೊಂಡು ಇನೊವಾ ಕಾರುನೊಂದಿಗೆ ಆರೋಪಿ ವಿಠಲ್ ಸಕಾರಾನು ಲಸ್ಕರ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಾರು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಕೆಲ ದಿನಗಳ ಹಿಂದೆ ಬಾಗಲಕೋಟೆ ಜಲ್ಲೆಯ ಬಾದಾಮಿಯ ಶ್ರೀ ಬನಶಂಕರ ಜಾತ್ರೆ ಹಾಗೂ ಆಂಧ್ರಪ್ರದೇಶದ ಎಮ್ಮೆಗನೂರ ಜಾತ್ರೆಯಲ್ಲಿ ಕೂಡಾ ಕಾರುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನೊವಾ ಕಾರನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನ ಒಪ್ಪಿಸಿ, ಇನ್ನುಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.