ಕೋಟ ಸಾಂಸ್ಕೃತಿಕ ನಗರಿ: ನಿಲಾವರ ಸುರೇಂದ್ರ ಅಡಿಗ

| Published : Apr 04 2024, 01:05 AM IST

ಸಾರಾಂಶ

ಕೋಟದ ರಸರಂಗ ಹಾಗೂ ಯಕ್ಷಮಹಿಳಾ ಬಳಗಗಳ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕೋಟ ವಾಸುದೇವ ಮಂಟಪದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ರಸರಂಗದ 15ನೇ, ಯಕ್ಷಮಹಿಳಾ ಬಳಗದ 10ನೇ ವರ್ಷದ ಸಂಭ್ರಮೋತ್ಸವದ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಸಾಂಸ್ಕೃತಿಕವಾಗಿ ನಾಡಿನಲ್ಲಿಯೇ ಛಾಪು ಮೂಡಿಸಿದ ಊರು ಕೋಟ. ಈ ಭಾಗದ ಮಹಿಳೆಯರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧಕರಾಗಿದ್ದಾರೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಹೇಳಿದರು.

ಅವರು ಭಾನುವಾರ ಕೋಟದ ರಸರಂಗ ಹಾಗೂ ಯಕ್ಷಮಹಿಳಾ ಬಳಗಗಳ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕೋಟ ವಾಸುದೇವ ಮಂಟಪದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ರಸರಂಗದ 15ನೇ, ಯಕ್ಷಮಹಿಳಾ ಬಳಗದ 10ನೇ ವರ್ಷದ ಸಂಭ್ರಮೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯ ಅತಿಥಿ ಕೋಟದ ಸಾಂಸ್ಕೃತಿಕ ಪ್ರತಿನಿಧಿ ಚಂದ್ರಶೇಖರ್ ಆಚಾರ್ ಸಂಸ್ಥೆಗೆ ಶುಭಹಾರೈಸಿದರು.

ಅಭ್ಯಾಗತರಾಗಿ ರಾಜಶೇಖರ ದೇವಸ್ಥಾನದ ಧರ್ಮದರ್ಶಿ ಪ್ರಭಾಕರ ಅಡಿಗ ಉಪಸ್ಥಿತರಿದ್ದರು.

ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಸಿನಿಮಾ ಕಿರುತೆರೆಯ ನಟ ರಘು ಪಾಂಡೇಶ್ವರ, ನಾಟ್ಯ ಕಲಾವಿದೆ ಭಾಗೀರತಿ ಎಂ.ರಾವ್, ಕಿರುತೆರೆ ರಂಗಭೂಮಿ ನಟಿ ಪ್ರತಿಮ ನಾಯಕ್, ಯಕ್ಷಗಾನ ಕಲಾವಿದ ರಾಘವೇಂದ್ರ ಗಾಣಿಗ ಅವರಿಗೆ ರಂಗಸಮ್ಮಾನವನ್ನು ನೀಡಲಾಯಿತು.

ದಿ.ಮಂಜುನಾಥ ಕೋಟ ನೆನಪಿನ ಯುವ ಪುರಸ್ಕಾರವನ್ನು ಕಲಾವಿದ ಪ್ರಸಾದ ಬಿಲ್ಲವ, ದಿ. ಜಯರಾಮ ಆಚಾರ್ ನೆನಪಿನ ಯುವಪುರಸ್ಕಾರವನ್ನು ಕಲಾವಿದ ಶಮಂತ ಗಾಣಿಗ ಅವರಿಗೆ ನೀಡಿ ಪುರಸ್ಕರಿಸಲಾಯಿತು.

ಯಕ್ಷಮಹಿಳಾ ಬಳಗ ಅಧ್ಯಕ್ಷೆ ಸುಶೀಲಾ ಸೋಮಶೇಖರ್ ಉಪಸ್ಥಿತರಿದ್ದರು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಸ್ವಾಗತಿಸಿದರು. ಕಲಾವಿದೆ ಮಹಾಲಕ್ಷ್ಮೀ ಸೋಮಯಾಜಿ ವಂದಿಸಿದರು. ಯಕ್ಷಮಹಿಳಾ ಬಳಗದ ಸುಪ್ರೀತಾ ಪುರಾಣಿಕ್ ನಿರೂಪಿಸಿದರು.

ದಿನವಿಡೀ ಹೂವಿನ ಕೋಲು, ನಾಟಕ, ಯಕ್ಷಗಾನ, ತಾಳಮದ್ದಳೆ, ಸಮಾರೋಪ ಸಮಾರಂಭದ ನಂತರ ರಸರಂಗದ ಪುರುಷ ತಂಡದಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ನಡೆಯಿತು.