ಕೋಟ ಕರ್ಣಾಟಕ ಬ್ಯಾಂಕ್‌ 58ರ ಸಂಭ್ರಮಾಚರಣೆ

| Published : Dec 30 2024, 01:01 AM IST

ಸಾರಾಂಶ

ಕೋಟದ ಕರ್ಣಾಟಕ ಬ್ಯಾಂಕ್ ಶಾಖೆಯ ೫೮ರ ವರ್ಷಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕರ್ಣಾಟಕ ಬ್ಯಾಂಕ್ ಗ್ರಾಹಕಸ್ನೇಹಿಯಾಗಿ ರೂಪುಗೊಂಡು ರಾಷ್ಟ್ರಾದ್ಯಂತ ಶಾಖೆಗಳನ್ನು ಹೊಂದಿ ಜನಮನ್ನಣೆ ಗಳಿಸಿದೆ ಎಂದು ಆನೆಗುಡ್ಡೆ ಶ್ರೀವಿನಾಯಕ ದೇಗುಲದ ಅನುವಂಶಿಕ ಆಡಳಿತ ಮುಕ್ತೇಸರ ಶ್ರೀ ರಮಣ ಉಪಾಧ್ಯಾಯ ಹೇಳಿದರು.

ಕೋಟದ ಕರ್ಣಾಟಕ ಬ್ಯಾಂಕ್ ಶಾಖೆಯ ೫೮ರ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಹೊಸ ಯೋಜನೆಗಳ ಮೂಲಕ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಮನಾಗಿ ನಿಂತಿದೆ ಎಂದರು.ಬ್ಯಾಂಕ್‌ಗಳು ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವುದಲ್ಲದೆ, ಆರ್ಥಿಕ ಕ್ರೋಢೀಕರಣದ ಕೇಂದ್ರವಾಗಿದೆ. ಜನಸಾಮಾನ್ಯರ ಆರ್ಥಿಕ ಶಕ್ತಿಗೆ ಕರ್ಣಾಟಕ ಬ್ಯಾಂಕ್ ಕೊಡುಗೆ ಅನನ್ಯ ಎಂದರು.

ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ವಾದಿರಾಜ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.

ವೇ.ಮೂ ಶ್ರೀಧರ ಪುರಾಣಿಕ್ ಗಣಹೋಮ, ಪ್ರಾರ್ಥನೆ, ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಶಾಖೆಯ ಸಿಬ್ಬಂದಿ ನಾಗೇಶ್ ಮಯ್ಯ ಗಣಹೋಮದಲ್ಲಿ ಭಾಗಿಯಾದರು.

ಕರ್ಣಾಟಕ ಬ್ಯಾಂಕ್ ನಿವೃತ್ತ ಡಿ.ಜಿ.ಎಂ. ಆನಂದರಾಮ ಅಡಿಗ, ಸ್ಥಳೀಯ ಸಾನ್ವಿ ಟೆಕ್ನಾಲಜಿ ಇದರ ಅಧ್ಯಕ್ಷ ಚಿನ್ಮಯ್ ಬಾಯರಿ, ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಮಯ್ಯ ಉಪಸ್ಥಿತರಿದ್ದರು. ಕೋಟ ಶಾಖೆಯ ಸಹಾಯಕ ಪ್ರಭಂಧಕಿ ಜ್ಯೋತಿ ಕುಮಾರಿ ಸ್ವಾಗತಿಸಿದರು. ಸಿಬ್ಬಂದಿ ವಿನಯ್ ಕಾಂಚನ್ ನಿರೂಪಿಸಿದರು, ಸಿಬ್ಬಂದಿ ಸಮಿತ್ ವಂದಿಸಿದರು.