ಸ್ವಾತಂತ್ರ್ಯ ಸೇನಾನಿಗಳ ಹೋರಾಟ, ತ್ಯಾಗ ಬಲಿದಾನ ಮರೆಮಾಚಿರುವುದು ದ್ರೋಹ

| Published : Dec 30 2024, 01:01 AM IST

ಸ್ವಾತಂತ್ರ್ಯ ಸೇನಾನಿಗಳ ಹೋರಾಟ, ತ್ಯಾಗ ಬಲಿದಾನ ಮರೆಮಾಚಿರುವುದು ದ್ರೋಹ
Share this Article
  • FB
  • TW
  • Linkdin
  • Email

ಸಾರಾಂಶ

ನೆಹರು, ಗಾಂಧಿ ಸೇರಿದಂತೆ ಕೇವಲ ನಾಲ್ಕೈದು ಜನ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಬಿಂಬಿಸಿ ೬.೫ ಲಕ್ಷ ಸ್ವಾತಂತ್ರ್ಯ ಸೇನಾನಿಗಳ ಹೋರಾಟ, ತ್ಯಾಗ ಬಲಿದಾನಗಳನ್ನು ಮರೆಮಾಚಿ ದೊಡ್ಡ ದ್ರೋಹ ಮಾಡಲಾಗಿದೆ ಎಂದು ಯುವ ಬ್ರಿಗೇಡ್ ಪ್ರಮುಖ ಕಿರಣ್ ರಾಮ್ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ನೆಹರು, ಗಾಂಧಿ ಸೇರಿದಂತೆ ಕೇವಲ ನಾಲ್ಕೈದು ಜನ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಬಿಂಬಿಸಿ ೬.೫ ಲಕ್ಷ ಸ್ವಾತಂತ್ರ್ಯ ಸೇನಾನಿಗಳ ಹೋರಾಟ, ತ್ಯಾಗ ಬಲಿದಾನಗಳನ್ನು ಮರೆಮಾಚಿ ದೊಡ್ಡ ದ್ರೋಹ ಮಾಡಲಾಗಿದೆ ಎಂದು ಯುವ ಬ್ರಿಗೇಡ್ ಪ್ರಮುಖ ಕಿರಣ್ ರಾಮ್ ಹೇಳಿದರು.

ನಗರದ ವಿಜಯ ಮಹಾಂತೇಶ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಪ್ರಶಿಕ್ಷಣಭಾರತಿ ಬಾಗಲಕೋಟೆ ಹಾಗೂ ವಿಜಯಮಹಾಂತೇಶ ಶಿಕ್ಷಣ ಸಂಸ್ಥೆ ಸಹಯೋಗಲ್ಲಿ ಜರುಗಿದ ಶಿಕ್ಷಕರ ಸಹಮಿಲನ ಕಾರ್ಯಕ್ರಮದಲ್ಲಿ ಭಾರತದ ನೈಜ ಇತಿಹಾಸ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಮಾರ್ಷಲ್ಲಾ ಶೇರ್‌ವುಡ್‌ರ ಎಗ್ಗಿಲ್ಲದ ಮತಾಂತರದ ವಿರುದ್ಧದ ಭಾರತೀಯರ ದಂಗೆಯ ಪ್ರತೀಕಾರಕ್ಕಾಗಿ ಜ.ಡಯರ್ ನಡೆಸಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ೧೫೩೨ ಜನ ಸ್ವಾತಂತ್ರ್ಯ ಸೇನಾನಿಗಳು ಹತ್ಯೆಯಾದರು. ಆದರೆ, ಕೇವಲ ೨೫೦ ರಿಂದ ೩೦೦ ಜನ ಹತ್ಯೆಯಾದರು ಎಂದು ಬಿಂಬಿಸಿದ್ದಲ್ಲದೇ ಭಾರತೀಯರಿಗೆ ನೀರು ಮತ್ತು ವೈದ್ಯಕೀಯ ಸೇವೆ ಸಿಗಬಾರದೆಂದು ಹಳ್ಳಿಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ನಿಲ್ಲಿಸಿ ಸ್ವಾತಂತ್ರ್ಯ ಸೇನಾನಿಗಳು ಸಾಯುವಂತೆ ಮಾಡಿದ ವಿಷಯ ಮರೆಮಾಚಲಾಗಿದೆ ಎಂದು ದೂರಿದರು.ವಿಜಯನಗರ ಸಾಮ್ರಾಜ್ಯದ ಕುಲಗುರು ವಿದ್ಯಾರಣ್ಯರ ಗುರು ಸಾಯಣಾಚಾರ್ಯರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ೫೩ ಗ್ರಂಥಗಳ ಬಗ್ಗೆ ಉಲ್ಲೇಖವಿಲ್ಲ. ಒಂದೇ ಒಂದು ಕಿಟಕಿ ಬಾಗಿಲುಗಳಿಲ್ಲದ ಹಂಪೆ ವಿರೂಪಾಕ್ಷ ದೇವಸ್ಥಾನದ ಗರ್ಭಗುಡಿಯ ಮೂರ್ತಿಯನ್ನು ಗುಡಿಯ ಸುತ್ತಲೂ ನಿರ್ಮಿಸಿದ ಕಾಲುವೆಗಳಲ್ಲಿ ನೀರು ಹರಿಸಿ ಸೂರ್ಯನ ಬೆಳಕು ಬಿದ್ದಾಗ ಗರ್ಭಗುಡಿಯಲ್ಲಿರುವ ಮೂರ್ತಿ ಕಾಣುವಂತೆ ಮಾಡಿದ ವಾಸ್ತು ಶಾಸ್ತ್ರದ ನೈಪುಣ್ಯತೆ ಮರೆಮಾಚಲಾಗಿದೆ. ವಿಜಯ ನಗರ ಸಾಮ್ರಾಜ್ಯಕ್ಕೆ ದಿನಕ್ಕೆ ೪೮ ಲಕ್ಷ ಪ್ರವಾಸಿಗರು ಭೇಟಿ ನೀಡಿದರೂ ಅವರಿಗೆಲ್ಲ ಮೂಲಭೂತ ಸೌಕರ್ಯ, ರಕ್ಷಣೆ ನೀಡಿದ ಶ್ರೀಮಂತಿಕೆ ಮುಚ್ಚಿಡಲಾಗಿದೆ. ಹೀಗೆ ನೈಜ ಇತಿಹಾಸ ತಿರುಚಿದ ಮೆಕಾಲೆ ಶಿಕ್ಷಣದಿಂದ ಮಕ್ಕಳು ಸಂಸ್ಕಾರ ಕಳೆದುಕೊಳ್ಳುವಂತಾಗಿದೆ. ಹಾಗಾಗಿ ನೈಜ ಇತಿಹಾಸದ ಮೂಲಕ ಶಿಕ್ಷಣದಲ್ಲಿ ಭಾರತೀಯತೆಯನ್ನು ತರಬೇಕಾಗಿದೆ ಎಂದರು.ಪ್ರಶಿಕ್ಷಣಭಾರತಿ ರಾಜ್ಯ ಸಂಚಾಲಕ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಸ್ಥ-ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಪ್ರಶಿಕ್ಷಣಭಾರತಿ ಹುಟ್ಟು, ಉದ್ದೇಶ ಮತ್ತು ಸಾಹಿತ್ಯ, ಶಿಕ್ಷಣ, ಆರೋಗ್ಯ, ಸೇವೆ ಹೇಗೆ ಅನೇಕ ಆಯಾಗಳಲ್ಲಿ ಪ್ರತಿಷ್ಠಾನದ ಸೇವೆಗಳನ್ನು ತಿಳಿಸಿದರು.ವಿಜಯಮಹಾಂತೇಶ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಗುರಣ್ಣ ವೀರಭದ್ರಪ್ಪ ಮರಟದ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್‌ನ ಸೇವಾಕಾರ್ಯ ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಪ್ರಶಿಕ್ಷಣಭಾರತಿ ವಿಭಾಗ ಸಂಚಾಲಕ ಶ್ರೀನಿವಾಸ ಪಾಟೀಲ, ಎಸಿಒ ಶಾಲೆಯ ಆಡಳಿತ ಮಂಡಳಿ ಸದಸ್ಯ ಪುರುಷೋತ್ತಮ ಧರಕ, ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯೆ ಆಶಾ ಮಠ, ವಿವಿಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶ್ರೀಕಾಂತ ಚಿತ್ತರಗಿ, ಮಲ್ಲಿಕಾರ್ಜುನ ಇಂದರಗಿ, ರಾಜಶೇಖರ ಬ್ಯಾಳಿ, ಬಸವರಾಜ ನಾಡಗೌಡ, ಎಸ್.ಆರ್.ಮಾರ, ಮಂಜುನಾಥ ನೀಲಿ, ಆರ್‌ಎಸ್‌ಎಸ್‌ನ ಶರಣ್ಯಾ ಅಂಗಡಿ, ನಗರ ಕಾರ್ಯವಾಹ ಪ್ರಭು ಬೀಳಗಿ, ಜಿಲ್ಲಾ ಸಂಯೋಜಕ ಆನಂದ ಕುಂಬಾರ ಇತರರಿದ್ದರು.ಜಮುನಾ ಕಾಟವಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಪ್ರಶಿಕ್ಷಣಭಾರತಿ ಜಿಲ್ಲಾ ಸಂಚಾಲಕ ಅವಿನಾಶ ಹಿರೇಮಠ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕ ಪಿ.ಸಿ.ಮುದಗಲ್ ನಿರೂಪಿಸಿ, ವಂದಿಸಿದರು.