ಸಾರಾಂಶ
ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರ ನೇತೃತ್ವದಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಹಾಗೂ ವಿದ್ಯಾರ್ಥಿ ಸಮಿತಿ ವತಿಯಿಂದ ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಾಟ್ಯಾರಾಧನಾ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಿಕೊಡಬೇಕು ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು. ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರ ನೇತೃತ್ವದಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಹಾಗೂ ವಿದ್ಯಾರ್ಥಿ ಸಮಿತಿ ವತಿಯಿಂದ ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆದ ನಾಟ್ಯಾರಾಧನಾ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ವಹಿಸಿದ್ದು ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಎಚ್ ಜಯಚಂದ್ರ ಹತ್ವಾರ್, ಪ್ರೌಢಶಾಲೆಯ ಸಂಚಾಲಕ ಸುಧಾಕರ ಪೇಜಾವರ್, ಉದ್ಯಮಿ ಅಗರಿ ರಾಘವೇಂದ್ರ ರಾವ್, ಸಮಿತಿ ಉಪಾಧ್ಯಕ್ಷ ಯಾದವ ದೇವಾಡಿಗ, ನಾಟ್ಯಾರಾಧನಾ ಕಲಾಕೇಂದ್ರದ ಟ್ರಸ್ಟಿಗಳಾದ ಬೈಕಾಡಿ ಶ್ರೀನಿವಾಸರಾವ್, ಮೃದುಲಾ ಹೊಳ್ಳ, ಸಮಿತಿ ಸಂಚಾಲಕ ಅನು ಧೀರಜ್, ಟ್ರಸ್ಟಿ ಸುಮಂಗಲಾ ರತ್ನಾಕರರಾವ್, ನೇಹಾ ಬಿ ಮತ್ತಿತರರು ಉಪಸ್ಥಿತರಿದ್ದರು.
ಸುಮಂಗಲಾ ರತ್ನಾಕರರಾವ್ ಸ್ವಾಗತಿಸಿದರು. ಮೃಣಾಲ ರಾಘವೇಂದ್ರ ವಂದಿಸಿದರು. ವೃಂದಾ ನಿರೂಪಿಸಿದರು. ಬಳಿಕ ನಾಟ್ಯಾರಾಧನಾ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.