ಸಾರಾಂಶ
ಕೊರವಡಿ ಮಲಸಾವರಿ ದೇಗುಲದ ವಠಾರದಲ್ಲಿ ಮಹಾಂಕಾಳಿ ಫ್ರೆಂಡ್ಸ್ ಕೊರವಡಿ ಇದರ ೨೪ನೇ ವರ್ಷೋತ್ಸವ ಸಂಭ್ರಮ ‘ನಮ್ಮೂರ ಪರ್ವ -೨೦೨೪’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಟಿ. ಶ್ರೀಯಾನ್ ಮುಖ್ಯ ಅತಿಥಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಕೋಟ
ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು, ಇಲ್ಲವಾದಲ್ಲಿ ಪ್ರಸ್ತುತ ಅನುಭವಿಸುವ ಉಷ್ಣತೆ ಮತ್ತಷ್ಟು ತೀವ್ರಗೊಳ್ಳಲಿದೆ. ಈ ಬಗ್ಗೆ ಈಗಲೇ ಜಾಗೃತರಾಗುವುದು ಒಳಿತು ಎಂದು ಕೋಟತಟ್ಟು ಗ್ರಾಪಂ ಪಡುಕರೆ ವಾರ್ಡ್ ಸದಸ್ಯ ರವೀಂದ್ರ ತಿಂಗಳಾಯ ಕರೆ ನೀಡಿದರು.ಅವರು ಇಲ್ಲಿನ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ಸಹಯೋಗದೊಂದಿಗೆ ಕೋಟತಟ್ಟು ಗ್ರಾ.ಪಂ., ಟೀಮ್ ಭವಾಬ್ಧಿ ಪಡುಕರೆ ಸಂಯೋಜನೆಯೊಂದಿಗೆ ೨೦೭ನೇ ಭಾನುವಾರ ಪರಿಸರಸ್ನೇಹಿ ಕಾರ್ಯಕ್ರಮದಲ್ಲಿ ಪಡುಕರೆ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರದ ಬಗ್ಗೆ ಇತ್ತೀಚಿಗಿನ ದಿನಗಳಲ್ಲಿ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಕಡಲಕಿನಾರೆಯಲ್ಲಿ ತ್ಯಾಜ್ಯ ವಿಪರೀತವಾಗಿ ಎಸೆಯಲಾಗುತ್ತಿದೆ, ಈ ರೀತಿಯ ಅವ್ಯವಸ್ಥೆ ಮುಂದಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ ಎಂದು ಎಚ್ಚರಿಸಿದರು.ಈ ವೇಳೆ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸಂಚಾಲಕ ಅಮೃತ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಟೀಮ್ ಭವಾಬ್ಧಿ ಪ್ರಮುಖರಾದ ದೇವೇಂದ್ರ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ಕೋಟತಟ್ಟು ಗ್ರಾ.ಪಂ. ಸಹಕಾರ ನೀಡಿತು. ಉಪಹಾರದ ವ್ಯವಸ್ಥೆಯನ್ನು ಶ್ರೀ ಚಿತ್ತಾರಿ ಟ್ರಸ್ಟ್ ನೀಡಿತು.