ಸಾರಾಂಶ
17 ಸದಸ್ಯರನ್ನು ಹೊಂದಿರುವ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 11 ಸ್ಥಾನವನ್ಬು ಹೊಂದಿದ್ದು ಚುನಾವಣೆಯಲ್ಲಿ ಸಂಸದ ಬ್ರಿಜೇಶ್ ಚೌಟ ಮತದಾನ ಮಾಡಿದ್ದರಿಂದ 12 ಮತಗಳನ್ನು ಪಡೆಯಿತು.
ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ದಿವ್ಯಾ ಸತೀಶ್ ಶೆಟ್ಟಿ ಆಯ್ಕೆಯಾಗಿದ್ದು ಪ್ರವೀಣ್ ಬಗಂಬಿಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದಿವ್ಯಾ ಸತೀಶ್ ಶೆಟ್ಟಿ ತನ್ನ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಹರೀಶ್ ರಾವ್ ವಿರುದ್ಧ 12- 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರವೀಣ್ ಬಗಂಬಿಲ ಅವರು ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಜ್ಜಿನಡ್ಕ ಅವರನ್ನು 12- 6 ಅಂತರದಲ್ಲಿ ಸೋಲಿಸಿ ಜಯಗಳಿಸಿದರು.
17 ಸದಸ್ಯರನ್ನು ಹೊಂದಿರುವ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 11 ಸ್ಥಾನವನ್ಬು ಹೊಂದಿದ್ದು ಚುನಾವಣೆಯಲ್ಲಿ ಸಂಸದ ಬ್ರಿಜೇಶ್ ಚೌಟ ಮತದಾನ ಮಾಡಿದ್ದರಿಂದ 12 ಮತಗಳನ್ನು ಪಡೆಯಿತು. ಕಳೆದ ಹಲವು ವರುಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಕೋಟೆಕಾರು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿದ ಬಳಿಕ ಎರಡನೇ ಚುನಾವಣೆಯಾಗಿದ್ದು ಬಿಜೆಪಿ ಎರಡೂ ಅವಧಿಯಲ್ಲಿ ಅಧಿಕಾರ ನಡೆಸುವಂತಾಗಿದೆ.