ನಾಳೆ ಮೂಡುಬಿದಿರೆಯಲ್ಲಿ 22ನೇ ವರ್ಷದ ‘ಕೋಟಿ- ಚೆನ್ನಯ’ ಜೋಡುಕರೆ ಕಂಬಳ

| Published : Jan 24 2025, 12:49 AM IST

ನಾಳೆ ಮೂಡುಬಿದಿರೆಯಲ್ಲಿ 22ನೇ ವರ್ಷದ ‘ಕೋಟಿ- ಚೆನ್ನಯ’ ಜೋಡುಕರೆ ಕಂಬಳ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್ ಅವರು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಿದ್ದು, ಸಭಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಉದ್ಘಾಟಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ೨೨ನೇ ವರ್ಷದ ಹೊನಲು ಬೆಳಕಿನ ಕೋಟಿ- ಚೆನ್ನಯ ಜೋಡುಕರೆ ಕಂಬಳ ಜ.25ರಂದು ಶನಿವಾರ ರಾತ್ರಿ ೭ ಗಂಟೆಗೆ ಕಂಬಳ ಕೋಣಗಳನ್ನು ಕೆರೆಗೆ ಇಳಿಸುವ ಮೂಲಕ ಚಾಲನೆಗೊಳ್ಳಲಿದೆ. ಅಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ. ಈಶ್ವರ ಭಟ್, ಅಲಂಗಾರು ಚರ್ಚ್ ಧರ್ಮಗುರು ಮೆಲ್ವಿನ್ ನೊರೊನ್ಹಾ, ಪುತ್ತಿಗೆ ನೂರಾನಿ ಮಸ್ಜೀದ್‌ನ ಮೌಲಾನ ಝಿಯಾವುಲ್ಲ್, ಸುಧೀರ್ ಹೆಗ್ಡೆ ಕುಂಟಾಡಿ ಅವರು ಕಂಬಳ ಕರೆಗೆ ಪ್ರಸಾದ ಹಾಕಿ ಹಾಲನ್ನೆರೆದು ವಿದ್ಯುಕ್ತವಾಗಿ ಕೋಣಗಳನ್ನು ಕರೆಗೆ ಇಳಿಸಿ ಕಂಬಳಕ್ಕೆ ಚಾಲನೆ ನೀಡುತ್ತಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್ ಅವರು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಿದ್ದು, ಸಭಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಉದ್ಘಾಟಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂತಾರಾಷ್ಟ್ರೀಯ ವಾಸ್ತು ತಜ್ಞ ಮೂಲ್ಕಿ ಚಂದ್ರಶೇಖರ ಅವರಿಗೆ ರಾಜ್ಯಮಟ್ಟದ ರಾಣಿಅಬ್ಬಕ್ಕ ಪ್ರಶಸ್ತಿಯನ್ನು ಗೌರವಿಸಲಾಗುವುದು ಎಂದರು.

ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಬಿಜೆಪಿ ಮೂಲ್ಕಿ- ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಕಂಬಳ ಸಮಿತಿಯ ಕೋಶಾಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಹರಿಪ್ರಸಾದ್ ಶೆಟ್ಟಿ ಹಾಜರಿದ್ದರು.