ಅಂಬಾರಿ ಮೆರವಣಿಗೆಯಲ್ಲಿ ಕೋಟಿಲಿಂಗೇಶ್ವರ ಸ್ತಬ್ಧ ಚಿತ್ರ

| Published : Oct 06 2024, 01:17 AM IST

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಮೂರು ಸ್ತಬ್ದ ಚಿತ್ರಗಳನ್ನು ಪ್ರಭಾರಿ ಜಿಪಂ ಸಿ.ಓ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ಕೋಲಾರ ಜಿಲ್ಲೆಯಿಂದ ತೆಗೆದುಕೊಂಡು ಹೋಗಿದ್ದ ಮೂರು ಸ್ತಬ್ಧಚಿತ್ರಗಳಲ್ಲಿ ಕೋಟಿಲಿಂಗೇಶ್ವರ ಶಿವಲಿಂಗವನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿ ಮಚ್ಚುಗೆ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

೨೦೨೪ರ ಮೈಸೂರು ದಸರಾ ಮೆರಣೆಗೆಯಲ್ಲಿ ಪಾಲ್ಗೊಳ್ಳಲು ಕೆಜಿಎಫ್ ತಾಲೂಕಿನ ಕೋಟಿಲಿಂಗೇಶ್ವರ ಸನ್ನಿಧಿ ಕುರಿತು ಸ್ತಬ್ಧಚಿತ್ರ ಆಯ್ಕೆಯಾಗಿದ್ದು, ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಕೋಟಿಲಿಂಗೇಶ್ವರದ ೧೦೮ ಅಡಿ ಎತ್ತರದ ಶಿವಲಿಂಗ ದರ್ಶನ ನೀಡಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮೂರು ಸ್ತಬ್ದ ಚಿತ್ರಗಳನ್ನು ಪ್ರಭಾರಿ ಜಿಪಂ ಸಿ.ಓ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ಕೋಲಾರ ಜಿಲ್ಲೆಯಿಂದ ತೆಗೆದುಕೊಂಡು ಹೋಗಿದ್ದ ಮೂರು ಸ್ತಬ್ಧಚಿತ್ರಗಳನ್ನು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಹೋಗಲಾಗಿತ್ತು, ಕುರುಡಮಲೆ ಗಣಪ, ಸೋಮೇಶ್ವರ ದೇವಾಲಯ ಹಾಗೂ ಕೋಟಿಲಿಂಗೇಶ್ವರ ಸಾನ್ನಿಧಿಯ ಚಿತ್ರಗಳ ಪೈಕಿ ಕೋಟಿ ಲಿಂಗೇಶ್ವರ ಸ್ವಾಮಿ ದೇವಾಲಯವನ್ನು ಸ್ತಬ್ಧ ಚಿತ್ರ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.

ಆಯ್ಕೆ ಸಮಿತಿ ಮೆಚ್ಚುಗೆ

ಲಕ್ಷಾಂತರ ಜನರು ಮೈಸೂರು ದಸರಾ ನೋಡಲು ಬರುವ ಜನರಿಗೆ ಕೋಟಿಲಿಂಗೇಸ್ವರ ದೇವಾಲಯದ ಪರಿಚಯ ಮಾಡಿಸಿ ಜಿಲ್ಲೆಯಲ್ಲಿ ಪ್ರವಾಸಿ ತಾಣ ಮತ್ತು ಧಾರ್ಮಿಕ ಕ್ಷೇತ್ರ ಜನರನ್ನು ಆಕರ್ಶಿಸಲು ಕೋಲಾರದಿಂದ ತೆಗೆದುಕೊಂಡು ಹೋಗಿದ್ದ ಮೂರು ಸ್ತಬ್ದಚಿತ್ರಗಳ ಪೈಕಿ ಕೋಟಿಲಿಂಗೇಶ್ವರ ಸ್ವಾಮಿ ದೇವಾಲಯ ಮಹತ್ವ ಸಾರುವ ಸ್ತಬ್ದಚಿತ್ರವೇ ಮೈಸೂರು ದಸರಾ ಸ್ತಬ್ದಚಿತ್ರ ಅಯ್ಕೆ ಸಮಿತಿಯ ಮೆಚ್ಚುಗೆಗಳಿಸಿ ಆಯ್ಕೆಯಾಗಿದೆ.

ಪುರಾಣದ ಹಿನ್ನೆಲೆ:

ಗ್ರಾಮದ ಹಿರಿಯರ ಮಾತಿನಂತೆ, ತ್ರೇತಾಯುಗದಲ್ಲಿ ಶ್ರೀರಾಮ ಅಶ್ವಮೇಧ ಯಾಗ ಮಾಡಿದಾಗ, ಅಶ್ವವು ಅಶ್ವವು ಕಮ್ಮಸಂದ್ರದ ಕಲ್ಯಾಣಿಯೊಂದರಲ್ಲಿ ನೀರು ಕುಡಿದಿತ್ತು ಎನ್ನಲಾಗಿದೆ. ಈ ಕಲ್ಯಾಣಿ ಇರುವ ಸ್ಥಳದಲ್ಲೇ ಕೋಟಿಲಿಂಗೇಶ್ವರ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಅಶ್ವ ಹಾಗೂ ದೇವತೆಗಳ ಪಾದಸ್ಪರ್ಷದಿಂದ ಕಮ್ಮಸಂದ್ರ ಗ್ರಾಮವು ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಕಮ್ಮಸಂದ್ರ ಗ್ರಾಮದ ಕೋಟಿಲಿಂಗೇಶ್ವರ ಸ್ತಬ್ದಚಿತ್ರವನ್ನು ಅತ್ಯುತ್ತಮವಾಗಿ ರೂಪಿಸಿದ್ದು, ಮೈಸೂರು ದಸರಾ ಉತ್ಸವದ ಆಕರ್ಷಣೀಯ ಕೇಂದ್ರ ಬಿಂದುವಾಗಲಿದೆ ಎಂದು ಡಿಐಸಿ ಉಪನಿರ್ದೇಶಕ ರವಿಚಂದ್ರ ತಿಳಿಸಿದ್ದಾರೆ.

ಜಿಲ್ಲೆಯ ಹಿಂದಿನ ಸ್ತಬ್ಧ ಚಿತ್ರಗಳು೨೦೧೭ ರಲ್ಲಿ ಸೋಮೇಶ್ವರ ದೇವಾಲಯ, ೨೦೧೮ ರಲ್ಲಿ ಕೋಟಿಲಿಂಗದೇವಾಲಯ, ೨೦೧೯ ರಲ್ಲಿ ಕೋಲಾರದ ಅಂತರಗಂಗೆ, ೨೦೨೧ ರಲ್ಲಿ ಬರಪೀಡಿತ ಜಿಲ್ಲೆಯಲ್ಲಿ ಮಳೆ ನೀರು ಸಂರಕ್ಷಣೆ, ೨೦೨೨ ರಲ್ಲಿ ಯೋಗಾ ಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್, ೨೦೨೩ ರಲ್ಲಿ ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಪನ್ನ ಸಂರಕ್ಷಣೆಆಡಳಿತಾಧಿಕಾರಿ ಧನ್ಯವಾದ

ದೇವಾಲಯದ ಆಡಳಿತಾಧಿಕಾರಿ ಕೆ.ವಿ.ಕುಮಾರಿ ಅವರು ದೇವಾಲಯದ ನಿತ್ಯ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ, ಮೈಸೂರು ದಸರಾ ಉತ್ಸವದಲ್ಲಿ ಕೋಟಿಲಿಂಗೇಶ್ವರ ಸ್ತಬ್ಧ ಚಿತ್ರ ಅಯ್ಕೆಯಾಗಲು ಸಹಕರಿರುವ ಜಿಲ್ಲಾಧಿಕಾರಿ ಹಾಗೂ ದಸರಾ ಅಯ್ಕೆ ಸಮಿತಿಯ ಸದಸ್ಯರಿಗೆ ಕೋಟಿಲಿಂಗ ದೇವಾಲಯದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆಂದು ಕೆ.ವಿ.ಕುಮಾರಿ ತಿಳಿಸಿದ್ದಾರೆ.