9 ವರ್ಷದಿಂದ ಕೊಟ್ಟೂರಿನ ಇಂದು ಕಾಲೇಜು ಟಾಪರ್‌!

| Published : Apr 11 2024, 12:50 AM IST

ಸಾರಾಂಶ

ಜಯನಗರ ಜಿಲ್ಲೆ ಕೊಟ್ಟೂರಿನ ಪ್ರತಿಷ್ಠಿತ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ಸತತ 9ನೇ ವರ್ಷವೂ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌ ಆಗುವ ಮೂಲಕ ಅಪರೂಪದ ಸಾಧನೆಗೈದಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಟ್ಟೂರು

ವಿಜಯನಗರ ಜಿಲ್ಲೆ ಕೊಟ್ಟೂರಿನ ಪ್ರತಿಷ್ಠಿತ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ಸತತ 9ನೇ ವರ್ಷವೂ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌ ಆಗುವ ಮೂಲಕ ಅಪರೂಪದ ಸಾಧನೆಗೈದಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಬಿ.ವಿ. ಕವಿತಾ (600ಕ್ಕೆ596) ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮಧ್ಯೆ, ಕಾಲೇಜಿನ ಇನ್ನೂ 31 ವಿದ್ಯಾರ್ಥಿಗಳು ಟಾಪ್‌ 10ರೊಳಗೆ ಸ್ಥಾನ ಪಡೆದಿದ್ದಾರೆ. 2015ರಿಂದ ಕಾಲೇಜಿನ ವಿದ್ಯಾರ್ಥಿಗಳು ಸತತ ಟಾಪರ್‌ ಆಗುತ್ತಿದ್ದಾರೆ.

ಕೂಲಿಕಾರರ ಮಗಳು ರಾಜ್ಯಕ್ಕೆ 2ನೇ ಸ್ಥಾನ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರಗೋವಾ, ಮಂಗಳೂರು, ಉಡುಪಿ ಕಡೆ ಗುಳೆ ಹೋಗುವ ಕೂಲಿ ಕಾರ್ಮಿಕ ದಂಪತಿಯ ಪುತ್ರಿ ರವೀನಾ ಸೋಮಪ್ಪ ಲಮಾಣಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಎರಡನೇ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅದರಹಳ್ಳಿಯ ಬಡ ಕೂಲಿಕಾರರಾದ ಸೋಮಪ್ಪ, ರೇಣವ್ವ ದಂಪತಿಗಳು ತಾವು ಕೂಲಿ ಕೆಲಸಕ್ಕೆ ಹೋಗುವಾಗ ಮಗಳ ಶಿಕ್ಷಣಕ್ಕೆ ವ್ಯತ್ಯಯವಾಗಬಾರದೆಂದು ಧಾರವಾಡದ ಪ್ರತಿಷ್ಠಿತ ಕೆ.ಇ. ಬೋರ್ಡ್‌ ಕಾಲೇಜಿಗೆ ಸೇರಿಸಿದ್ದರು. ಪರೀಕ್ಷೆಯಲ್ಲಿ ಈಕೆ 600 ಅಂಕಗಳಿಗೆ 595 ಅಂಕ ಪಡೆದಿದ್ದಾಳೆ.