ಸಾರಾಂಶ
ಕೊಡಗು ಪತ್ರಕರ್ತರ ಸಂಘ ಹಾಗು ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಭಾನುವಾರ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ್ದ ಕೆ.ಪಿ.ಎಸ್. ಕ್ರಿಕೆಟ್ ಟ್ರೋಫಿಯನ್ನು ರವಿಕುಮಾರ್ ನಾಯಕತ್ವದ ಕೂರ್ಗ್ ಸ್ಟ್ರೈಕರ್ಸ್ ತಂಡ ಮುಡಿಗೇರಿಸಿಕೊಂಡಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗು ಪತ್ರಕರ್ತರ ಸಂಘ ಹಾಗು ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಭಾನುವಾರ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ್ದ ಕೆ.ಪಿ.ಎಸ್. ಕ್ರಿಕೆಟ್ ಟ್ರೋಫಿಯನ್ನು ರವಿಕುಮಾರ್ ನಾಯಕತ್ವದ ಕೂರ್ಗ್ ಸ್ಟ್ರೈಕರ್ಸ್ ತಂಡ ಮುಡಿಗೇರಿಸಿಕೊಂಡಿತು. ಎಸ್.ಎ.ಮುರುಳೀಧರ್ ನಾಯಕತ್ವದ ಕೂರ್ಗ್ ವಾರಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಖಲೀಲ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಕೆ.ಜಿ.ನಾಣಯ್ಯ, ಉತ್ತಮ ಕ್ಯಾಚರ್ ಆಗಿ ವಿನೋದ್ ಮೂಡುಗದ್ದೆ, ಉತ್ತಮ ಬೌಲರ್ ಆಗಿ ಕೆ.ಜಿ.ನಾಣಯ್ಯ, ಉತ್ತಮ ಬ್ಯಾಟ್ಸ್ಮನ್ ಆಗಿ ಕೌಸರ್, ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಎಸ್.ಎ.ಮುರುಳೀಧರ್ ಪಡೆದರು.
ಕೊವರ್‌ಕೊಲ್ಲಿ ಬ್ಲಾಸಂ ಸಭಾಂಗಣದಲ್ಲಿ ಭಾನುವಾರ ಸಂಜೆ ಸಮಾರೋಪ ಸಮಾರಂಭ ನಡೆಯಿತು. ಮಡಿಕೇರಿ ಪತ್ರಿಕಾ ಭವನ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಮಾಜಿ ಸೈನಿಕರಾದ ಮಂಜುನಾಥ್, ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಎ.ಮುರುಳೀಧರ್, ತಾಲೂಕು ಅಧ್ಯಕ್ಷರಾದ ಎಚ್.ಆರ್.ಹರೀಶ್, ಮುಧೋಶ್ ಪೂವಯ್ಯ, ವಿಘ್ನೇಶ್ ಭೂತನಕಾಡು, ರಾಜ್ ಕುಶಾಲಪ್ಪ, ಮಾಜಿ ಸೈನಿಕ ಬಿ.ಬಿ. ಮಂಜುನಾಥ್, ಬೇಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುದರ್ಶನ್ ಬಹುಮಾನ ವಿತರಿಸಿದರು.