ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಬಿಎಸ್ಪಿ ಮುಖಂಡರ ಸಭೆಯಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಚಿಕ್ಕಗಾಡಿಗನಹಳ್ಳಿ ಗೋವಿಂದರಾಜು, ಉಪಾಧ್ಯಕ್ಷರಾಗಿ ಕುಂದೂರು ಮಮತಾ ಹಾಗೂ ಚಿಕ್ಕಗಾಡಿಗನಹಳ್ಳಿ ಪ್ರದೀಪ್ ನೇಮಕ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ಬಹುಜನ ಸಮಾಜ ಪಕ್ಷದ ನೂತನ ಅಧ್ಯಕ್ಷರಾಗಿ ಚಿಕ್ಕಗಾಡಿಗನಹಳ್ಳಿ ಗೋವಿಂದರಾಜು, ಉಪಾಧ್ಯಕ್ಷರಾಗಿ ಕುಂದೂರು ಮಮತಾ ಹಾಗೂ ಚಿಕ್ಕಗಾಡಿಗನಹಳ್ಳಿ ಪ್ರದೀಪ್ ನೇಮಕಗೊಂಡಿರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಬಿಎಸ್ಪಿ ಮುಖಂಡರ ಸಭೆಯಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕೆ.ಆರ್.ಪೇಟೆ ಗಂಗಾಧರ್, ಕಾರ್ಯದರ್ಶಿಯಾಗಿ ಸೈಯದ್ ಪೈಝಲ್, ಖಜಾಂಚಿಯಾಗಿ ತೇಗನಹಳ್ಳಿ ಹರೀಶ್ ಅವರನ್ನು ಆಯ್ಕೆ ಮಾಡಲಾಯಿತು.ತಾಲೂಕು ಬಿವಿಎಫ್ ಸಂಯೋಜಕರಾಗಿ ಗಂಜಿಗೆರೆ ಆದಿತ್ಯ ಉಗಿ ಆಯ್ಕೆಯಾದರೆ, ಸಂತೆಬಾಚಳ್ಳಿ ಹೋಬಳಿ ಅಧ್ಯಕ್ಷರಾಗಿ ರೋಹಿತ್ ಕೊಟ್ಗಹಳ್ಳಿ, ಉಪಾಧ್ಯಕ್ಷರಾಗಿ ಸಾರಂಗಿ ಗಂಗಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಗೊರವಿ ಉಮೇಶ್ ರವರನ್ನು ಆಯ್ಕೆ ಮಾಡಲಾಯಿತು.
ಕಿಕ್ಕೇರಿ ಹೋಬಳಿ ಅಧ್ಯಕ್ಷರಾಗಿ ಜಯರಾಮ್, ಅಕ್ಕಿಹೆಬ್ಬಾಳು ಹೋಬಳಿ ಅಧ್ಯಕ್ಷರಾಗಿ ಐಪನಹಳ್ಳಿ ಪ್ರಕಾಶ್, ಬೂಕನಕೆರೆ ಹೋಬಳಿ ಅಧ್ಯಕ್ಷರಾಗಿ ಕಾಪನಹಳ್ಳಿ ಶಿವರಾಮು, ಕಸಬಾ ಹೋಬಳಿ ಅಧ್ಯಕ್ಷರಾಗಿ ಸಾಧುಗೋನಹಳ್ಳಿ ಜಗದೀಶ್ ರವರನ್ನು ಆಯ್ಕೆ ಮಾಡಲಾಯಿತು.ತಾಲೂಕು ಉಸ್ತುವಾರಿಗಳಾಗಿ ಪ್ರದೀಪ ಬಸ್ತಿ ಹಾಗೂ ನವೀನ್ ಕುಮಾರ್ ಬಿಲ್ಲೇನಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಬಿಎಸ್ಪಿ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಚೆಲುವರಾಜು, ಜಿಲ್ಲಾ ಉಸ್ತುವಾರಿ ವೀರಭದ್ರಯ್ಯ ಭಾಗವಹಿಸಿದ್ದರು.ನೂತನ ಪದಾಧಿಕಾರಿಗಳ ಆಯ್ಕೆ ನಂತರ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಪಕ್ಷವನ್ನು ತಾಲೂಕಿನ ಅತ್ಯಂತ ಮುಂದಿನ ದಿನಗಳಲ್ಲಿ ಅತ್ಯಂತ ಬಲಿಷ್ಠವಾಗಿ ಕಟ್ಟಲು ಅಗತ್ಯ ಚರ್ಚೆ ಮಾಡಿ ಕೆಲವು ಸಲಹೆ ಹಾಗೂ ನಿರ್ದೇಶನ ನೀಡಿದರು.
ಜಿಲ್ಲಾ ಕಸಾಪಗೆ ಆಡಳಿತಾಧಿಕಾರಿ ನೇಮಕಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಅಧ್ಯಕ್ಷರಿಲ್ಲದ ಕಾರಣ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಪರಿಷತ್ ಒಡೆದು ಹೋಳಾಗಿ ಬಣ ರಾಜಕೀಯ ಮೇಲುಗೈ ಸಾಧಿಸಿತ್ತು. ಇದರ ಜೊತೆಗೆ ಮದ್ದೂರು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ವಿಷಯದಲ್ಲೂ ಭಿನ್ನಾಭಿಪ್ರಾಯಗಳು ಮೂಡಿದ್ದವು. ಜಿಲ್ಲಾ ಅಧ್ಯಕ್ಷರೂ ಇಲ್ಲ, ತಾಲೂಕು ಅಧ್ಯಕ್ಷರೇ ಇಲ್ಲದೆ ಸಾಹಿತ್ಯ ಸಮ್ಮೇಳನ ಹೇಗೆ ನಡೆಸುತ್ತಾರೆ. ಅಧಿಕೃತ ತಾಲೂಕು ಅಧ್ಯಕ್ಷರು ಯಾರು ಎಂಬ ವಿಚಾರವಾಗಿ ಗೊಂದಲಗಳೆಲ್ಲಾ ಸೃಷ್ಟಿಯಾಗಿದ್ದವು. ಪತ್ರಿಕಾ ಹೇಳಿಕೆಗಳ ಮೂಲಕ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರು. ಇವೆಲ್ಲಕ್ಕೂ ತೆರೆ ಎಳೆಯುವ ಸಲುವಾಗಿ ಸರ್ಕಾರ ಜಿಲ್ಲಾ ಕಸಾಪಗೆ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ.