ಸಾರಾಂಶ
ಆ.15 ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ 227ನೇ ಜಯಂತಿ ಅಂಗವಾಗಿ ಅವರ ಪುತ್ಥಳಿಗೆ ಶಾಸಕ ಡಿ.ಜಿ.ಶಾಂತನಗೌಡ ಮಾಲಾರ್ಪಣೆ ಮಾಡಿದರು.
ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ದೇಶ ಭಕ್ತಿ, ಸ್ವಾಮಿ ನಿಷ್ಠೆಗೆ ಮತ್ತೊಂದು ಹೆಸರೇ ಅದು ಕ್ರಾಂತಿ ಕಿಡಿ, ಸಂಗೊಳ್ಳಿ ರಾಯಣ್ಣ ಅವರು. ಈ ದೇಶ, ನಾಡು ಅವರನ್ನು ಎಂದಿಗೂ ಮರೆಯದೇ ಸದಾ ಸ್ಮರಿಸುತ್ತದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಅವರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕಂಚಿನ ಬೃಹತ್ ಪುತ್ಥಳಿಗೆ ಗುರುವಾರ ಅವರ 227ನೇ ಜಯಂತಿ ಅಂಗವಾಗಿ ಬೃಹತ್ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿ ಮಾತನಾಡಿ, ಮಹಾತ್ಮರ ಜೀವನದ ಪ್ರತಿ ಹೆಜ್ಜೆಯಲ್ಲೂ ಕೂಡ ಒಂದು ವಿಶೇಷತೆ ಅಡಗಿರುತ್ತದೆ ಎನ್ನುವುದಕ್ಕೆ ವೀರ ಪುರುಷ ಸಂಗೊಳ್ಳಿ ರಾಯಣ್ಣ ಜೀವನವೇ ಉತ್ತಮ ಸಾಕ್ಷಿಯಾಗಿದೆ. ಅವರ ಹುಟ್ಟಿದ ದಿನ ಆ.15 ಹುತಾತ್ಮರಾದ ದಿನ ಜ.26 ರಂದು ದೇಶ ಗಣರಾಜ್ಯೋತ್ಸವ ಆಗಿರುವುದು ಕಾಕತಾಳೀಯವಾದರೂ ಅವರ ಹುಟ್ಟು ಮತ್ತು ವೀರ ಮರಣಗಳನ್ನು ಇಡೀ ದೇಶದ ಜನ ಸದಾ ಸ್ಮರಿಸುವಂತಾಗಿದೆ ಎಂದರು.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕೇವಲ ಯುವಕರಿಗಷ್ಟೇ ಅಲ್ಲ ಪ್ರತಿಯೊಬ್ಬ ವ್ಯಕ್ತಿ ಬುದುಕಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿದರು.ಈ ವೇಳೆ ಯುವ ಮುಖಂಡ ಎಚ್.ಬಿ.ಅಣ್ಣಪ್ಪ, ಧರ್ಮಪ್ಪ ಸೇರಿ ಹಾಲು ಮತದ ಅನೇಕ ಮುಖಂಡರು ಇದ್ದರು.